Advertisement

ಕರ್ನಾಟಕದಲ್ಲಿ ಯಾವಾಗ ಬೇಕಾದ್ರೂ ಧಮಾಕಾ ಸಂಭವ! ಸಚಿವ ಜಾವ್ಡೇಕರ್

11:35 AM Dec 05, 2018 | Sharanya Alva |

ಬೆಂಗಳೂರು:ಇತ್ತೀಚೆಗಷ್ಟೇ ಮೈತ್ರಿ ಸರ್ಕಾರದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಯಾವಾಗ ಬೇಕಾದ್ರೂ ಧಮಾಕಾ ಆಗಬಹುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Advertisement

ಕರ್ನಾಟಕದಲ್ಲಿ ಧಮಾಕಾ ಯಾವಾಗ ಎಂಬುದನ್ನು ಯಡಿಯೂರಪ್ಪ ಮಾತ್ರ ಹೇಳಬಲ್ಲರು. ಜೆಡಿಎಸ್ ಕಾಂಗ್ರೆಸ್ ಅವಕಾಶವಾದಿ ರಾಜಕಾರಣಕ್ಕೆ ಹೆಸರುವಾಸಿಯಾಗಿವೆ ಎಂದು ಆರೋಪಿಸಿದರು. ಯಾವಾಗ ಬೇಕಾದರೂ ಧಮಾಕಾ(ಸ್ಫೋಟ) ಸಂಭವಿಸಬಹುದು ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ರಚಿಸಲಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಅಸ್ಥಿರ ಸರ್ಕಾರ ಅಸ್ತಿತ್ವದಲ್ಲಿದೆ. ಕರ್ನಾಟಕದಲ್ಲಿ ಜನರೇ ಧಮಾಕಾದ ನಿರೀಕ್ಷೆಯಲ್ಲಿದ್ದಾರೆ. ನಮಗೆ(ಬಿಜೆಪಿ) ಜನರ ಆಶೀರ್ವಾದ ಹೆಚ್ಚು ಸಿಕ್ಕಿತ್ತು. ಆದರೆ ಜೆಡಿಎಸ್, ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡಿ ಜನರನ್ನು ವಂಚಿಸಿದೆ ಎಂದರು.

Advertisement

ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿರುವುದೇ ವಿಶೇಷ. ಮೈತ್ರಿ ಸರ್ಕಾರದಲ್ಲಿ ಸಮನ್ವಯತೆ ಇಲ್ಲ. ಧಮಾಕಾ ಎಲ್ಲಿಂದ ಆಗುತ್ತೋ ಗೊತ್ತಿಲ್ಲ. ಈ ಬಗ್ಗೆ ಯಡಿಯೂರಪ್ಪನವೇ ಹೇಳಬೇಕು ಎಂದು ಬಾಂಬ್ ಸಿಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next