Advertisement

Kannada Cinema; ‘ರಾಕ್ಷಸ’ನ ಹಿಂದೆ ಬಿದ್ದ ಪ್ರಜ್ವಲ್ ದೇವರಾಜ್

03:22 PM Jan 15, 2024 | Team Udayavani |

ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಾ ಸದಾ ಬಿಝಿಯಾಗಿರುವ ನಟರಲ್ಲಿ ಪ್ರಜ್ವಲ್‌ ದೇವರಾಜ್‌ ಕೂಡಾ ಒಬ್ಬರು. ಸದ್ಯ ಐದು ಸಿನಿಮಾಗಳಲ್ಲಿ ಬಿಝಿಯಾಗಿರುವ ಪ್ರಜ್ವಲ್‌ ಅಕೌಂಟ್‌ಗೆ ಮತ್ತೂಂದು ಸಿನಿಮಾ ಸೇರ್ಪಡೆಯಾಗಿದೆ. ಅದು “ರಾಕ್ಷಸ’. ಲೋಹಿತ್‌ ಎಚ್‌ ಈ ಸಿನಿಮಾದ ನಿರ್ದೇಶಕರು.

Advertisement

ಈಗಾಗಲೇ “ಮಮ್ಮಿ’, “ದೇವಕಿ’ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಲೋಹಿತ್‌ ಈಗ “ರಾಕ್ಷಸ’ನ ಹಿಂದೆ ಬಿದ್ದಿದ್ದಾರೆ. ಇದೊಂದು ಹಾರರ್‌ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾಗಿದ್ದು, ಟೈಮ್‌ ಲೂಪ್‌ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಟೈಮ್‌ ಲೂಪ್‌ನಡಿ ಹಾರರ್‌ ಕಥೆ ಬಂದಿರೋದು ತೀರಾ ವಿರಳ. ಈಗ ಲೋಹಿತ್‌ ಇಂತಹ ಪ್ರಯತ್ನ ಮಾಡಿದ್ದಾರೆ. ಇಡೀ ಸಿನಿಮಾವನ್ನು ರಾಮೋಜಿ ರಾವ್‌ ಫಿಲಂ ಸಿಟಿಯಲ್ಲಿ ಚಿತ್ರಿಕರಣ ಮಾಡಲಾಗಿದೆ.

ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದ್ದು, ಅಂಡರ್‌ವಾಟರ್‌ನಲ್ಲಿ ಶೂಟಿಂಗ್‌ ಮಾಡಲಾಗಿದೆ. ಚಿತ್ರವನ್ನು ದೀಪು ಬಿಎಸ್‌ ನಿರ್ಮಿಸಿದ್ದಾರೆ.

ನಾನು ಮಾಡಿರುವ ಮೊದಲ ಹಾರರ್‌ ಸಿನಿಮಾ “ರಾಕ್ಷಸ’. ರಾಕ್ಷಸದ ಕಥೆ ಹಾಗೂ ನಿರೂಪಣೆ ತುಂಬಾ ವಿಭಿನ್ನವಾಗಿದೆ. ಲೋಹಿತ್‌ ಇಡೀ ಸಿನಿಮಾವನ್ನು ಹೊಸ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರಜ್ವಲ್‌ ದೇವರಾಜ್‌

Advertisement

Udayavani is now on Telegram. Click here to join our channel and stay updated with the latest news.

Next