Advertisement

Sandalwood; ಕಂಬಳದ ಸುತ್ತ ಪ್ರಜ್ವಲ್‌ ದೇವರಾಜ್‌ ಚಿತ್ರ

04:44 PM Oct 16, 2023 | Team Udayavani |

ಪ್ರಜ್ವಲ್‌ ದೇವರಾಜ್‌ ನಟನೆಯ ಸಿನಿಮಾಗಳು ಬಿಡುಗಡೆಯ ಹಂತಕ್ಕೆ ಬಂದಿವೆ. ಇದರ ನಡುವೆಯೇ ಹೊಸ ಹೊಸ ಸಿನಿಮಾಗಳನ್ನು ಪ್ರಜ್ವಲ್‌ ಒಪ್ಪಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಸೇರ್ಪಡೆ ಗುರುದತ್‌ ಗಾಣಿಗ ನಿರ್ದೇಶನದ ಚಿತ್ರ. ಈ ಹಿಂದೆ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ನಿರ್ದೇಶನ ಮಾಡಿರುವ ಗುರುದತ್‌ ಗಾಣಿಗ ಈಗ ಪ್ರಜ್ವಲ್‌ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ.

Advertisement

ಅಂದಹಾಗೆ, ಇದು ಕಂಬಳ ಕುರಿತಾದ ಸಿನಿಮಾ. ಇಡೀ ಸಿನಿಮಾದ ಮೂಲ ಕಥೆ ಕಂಬಳದ ಸುತ್ತವೇ ಸಾಗಲಿದೆ. ಕಂಬಳದ ಹಿಂದಿನ ತಯಾರಿ, ಕೋಣಗಳ ಆರೈಕೆ ಜೊತೆಗೆ ಮತ್ತೂಂದು ಕಥೆ ಕೂಡಾ ತೆರೆದುಕೊಳ್ಳುತ್ತದೆಯಂತೆ. ಈ ಕುರಿತು ಮಾತನಾಡುವ ಗುರುದತ್‌ ಗಾಣಿಗ, “ಸಿನಿಮಾದ ಕಥೆಯಲ್ಲಿ ಕಂಬಳ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಕಂಬಳದ ಓಟದ ಜೊತೆಗೆ ಮತ್ತೂಂದು ಕಥೆ ಕೂಡಾ ತೆರೆದುಕೊಳ್ಳುತ್ತದೆ’ ಎನ್ನುತ್ತಾರೆ.

ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರವನ್ನು ವಿಕೆ ಫಿಲಂಸ್‌ ಹಾಗೂ ಗುರುದತ್‌ ಗಾಣಿಗ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next