Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಡಲಿಲ್ಲ. ಬಿಜೆಪಿ ಅವರು ಸಿಬಿಐ ಗೆ ಕರಪ್ಶನ್ ಬ್ಯೂರ್ ಆಫ್ ಇನ್ವೇಸ್ಟಿಗೇಶನ್ ಎನ್ನುತ್ತಿದ್ದರು. ಚೋರ್ ಬಚಾವ್ ಸಂಸ್ಥೆ ಎಂದು ದೇವೇಗೌಡರು ಹೇಳಿದ್ದರು. ಈಗ ನೋಡಿದರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ, ಇದರ ಅರ್ಥ ಏನು? ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತದೆ ಎಂಬ ನಂಬಿಕೆ ಇದೆ. ನಾನು ಯಾವತ್ತು ಪೊಲೀಸರಿಗೆ ಕಾನೂನಿನ ವಿರುದ್ಧವಾಗಿ ತನಿಖೆ ಮಾಡಿ ಅಂಥ ಹೇಳುವುದಿಲ್ಲ. ಎಸ್ಐಟಿ ಮೇಲೆ ನಂಬಿಕೆ ಇಡಬೇಕು. ನಮ್ಮ ಪೊಲೀಸ್ ಮೇಲೆ ಅವರಿಗೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸಿದರು.
Related Articles
Advertisement
ಮಾಜಿ ಸಚಿವ ಎಚ್.ಡಿ ರೇವಣ್ಣ ಬಂಧನ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಏನು ಕೇಸ್ ಇಲ್ಲ ಎಂದ ಮೇಲೆ ನಿರೀಕ್ಷಣಾ ಜಾಮೀನಿಗೆ ಯಾಕೆ ಅರ್ಜಿ ಹಾಕಿದ್ದರು. ಇದರಲ್ಲಿ ರಾಜಕೀಯ ಎಲ್ಲಿಂದ ಬಂತು? ಅಪರಾಧವಾಗಿಲ್ಲ ಎಂದಾದರೆ ಜಾಮೀನು ಅರ್ಜಿ ಯಾಕೆ ತಿರಸ್ಕಾರ ಆಗಿದೆ ಎಂದರು.
ಎಸ್ಎಸ್ಎಲ್ ಸಿಯಲ್ಲಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲ ಸ್ಥಾನ ಬಂದಿದ್ದಾರೆ. ಒಳ್ಳೆಯ ಶಿಕ್ಷಣ ಸಿಗುವ ಉದ್ದೇಶದಿಂದ ಮೊರಾರ್ಜಿ ದೇಸಾಯಿ ಶಾಲೆ ತೆಗೆಯಲಾಗಿದೆ. ನಾನು 1994ರಲ್ಲಿ ಡಿಎಸ್ಎಸ್ ಸಂಪರ್ಕದಲ್ಲಿದೆ. ಅವರ ಬೇಡಿಕೆಯಂತೆ ಆ ಶಾಲೆಗಳನ್ನು ಆರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಪ್ರತಿ ಹೋಬಳಿಗೆ ಒಂದೊಂದು ವಸತಿ ಶಾಲೆ ತೆಗೆದಿದ್ದೇವೆ. 900 ಕ್ಕೂ ಹೆಚ್ಚು ಶಾಲೆಗಳಿವೆ. ಹೆಣ್ಣು ಮಗಳು ಮೊದಲ ರ್ಯಾಂಕ್ ಪಡೆದಿದ್ದಾಳೆ. ಆ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.