ಇಂಡಿಯನ್ ವೆಲ್ಸ್: ಭಾರತದ ಪ್ರತಿಭಾನ್ವಿತ ಸಿಂಗಲ್ಸ್ ಆಟಗಾರ ಪ್ರಜ್ಞೆಶ್ ಗುಣೇಶ್ವರನ್ ಮತ್ತೂಂದು ಅಮೋಘ ಪರಾಕ್ರಮದೊಂದಿಗೆ “ಇಂಡಿಯನ್ ವೆಲ್ಸ್’ ಟೆನಿಸ್‌ನಲ್ಲಿ ಕನಸಿನ ಓಟ ಮುಂದುವರಿಸಿದ್ದಾರೆ. ರವಿವಾರ ನಡೆದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಅವರು ವಿಶ್ವದ 18ನೇ ರ್‍ಯಾಂಕಿಂಗ್ ಆಟಗಾರ, ಜಾರ್ಜಿಯಾದ ನಿಕೋಲಸ್ ಬಸಿಲಶ್ವಿಲಿ ವಿರುದ್ಧ ದಿಟ್ಟ ಹೋರಾಟ ನಡೆಸಿ ಜಯ ಸಾಧಿಸಿದರು.
2 ಗಂಟೆ, 32 ನಿಮಿಷಗಳ ಕಾಲ ಸಾಗಿದ ಈ ಹೋರಾಟದಲ್ಲಿ ಪ್ರಜ್ಞೆಶ್ 6-4, 6-7 (6-8), 7-6 (7-4) ಅಂತರದಿಂದ ಬಸಿಲಶ್ವಿಲಿ ಆಟಕ್ಕೆ ಮುಕ್ತಾಯ ಹಾಡಿದರು. ಇದು ಗುಣೇಶ್ವರನ್ ವೃತ್ತಿಬದುಕಿನ ಅತೀ ದೊಡ್ಡ ವಿಜಯವಾಗಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಸದ್ಯ ಅವರು 97ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ವಿಶ್ವದ 23ನೇ ರ್‍ಯಾಂಕಿಂಗ್ ಆಟಗಾರ ಡೆನ್ನಿಸ್ ಓಪೊವಲೋವ್ ಅವರನ್ನು ಪರಾಭವಗೊಳಿಸಿದ್ದು ಪ್ರಜ್ಞೆàಶ್ ಅವರ ಅತ್ಯುತ್ತಮ ಸಾಧನೆಯಾಗಿತ್ತು.
ಅರ್ಹತಾ ಸುತ್ತಿನಿಂದ ಬಂದ ಪ್ರಜ್ಞೆಶ್ ಗುಣೇಶ್ವರ್, ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಬೆನೋಯಿಟ್ ಪೇರ್ ಅವರನ್ನು ಮಣಿಸಿ ಸುದ್ದಿಯಾಗಿದ್ದರು. ಇವರ ತೃತೀಯ ಸುತ್ತಿನ ಎದುರಾಳಿ ಕ್ರೊವೇಶಿಯಾದ ಐವೊ ಕಾರ್ಲೋವಿಕ್. ದ್ವಿತೀಯ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಅವರು ಕ್ರೊವೇಶಿಯಾದ ಬೋರ್ನ ಕೊರಿಕ್ ವಿರುದ್ಧ 6-4, 7-6 (7-2) ಅಂತರದ ಜಯ ಸಾಧಿಸಿದರು.
ನಿಜಕ್ಕೂ ಇದು ನನ್ನ ಪಾಲಿನ ಬಿಗ್ ಮ್ಯಾಚ್. ಹಿಂದಿನ ಸುತ್ತುಗಳಿಗಿಂತ ಉತ್ತಮ ಆಟ ಪ್ರದರ್ಶಿಸುವ ವಿಶ್ವಾಸ ಇತ್ತು. ಬಸಿಲಶ್ವಿಲಿ ಅತ್ಯಂತ ಆಕ್ರಮಣಕಾರಿ ಆಟಗಾರ. ಹೀಗಾಗಿ ಎಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸಿದೆ.
ಪ್ರಜ್ಞೆಶ್ ಗುಣೇಶ್ವರನ್