Advertisement

ಕುನ್ಮಿಂಗ್‌ ಕಪ್‌ ಟೆನಿಸ್‌: ಪ್ರಶಸ್ತಿ ಉಳಿಸಿಕೊಳ್ಳದ ಪ್ರಜ್ಞೆಶ್

03:34 PM Jul 16, 2019 | keerthan |

ಹೊಸದಿಲ್ಲಿ: ಹಾಲಿ ಚಾಂಪಿಯನ್‌ ಪ್ರಜ್ಞೆಶ್ ಗುಣೇಶ್ವರನ್‌ ಚೀನದಲ್ಲಿ ನಡೆದ ” ಕುನ್ಮಿಂಗ್‌ ಕಪ್‌’ ಟೆನಿಸ್‌ ಕೂಟದ ಫೈನಲ್‌ನಲ್ಲಿ ಸೋಲುನುಭವಿಸಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫ‌ಲರಾದರು.

Advertisement

ರವಿವಾರ ನಡೆದ ಫೈನಲ್‌ನಲ್ಲಿ ಪ್ರಜ್ಞೆಶ್ ಬ್ರಿಟನ್ನಿನ ಜೇ ಕ್ಲಾರ್ಕ್‌ ವಿರುದ್ಧ 4-6, 3-6 ಸೆಟ್‌ಗಳಿಂದ ಪರಾಭವಗೊಂಡರು. ಆದರೆ ಈ ಸೋಲಿನ ಹೊರತಾಗಿಯೂ ಪ್ರಜ್ಞೆàಶ್‌ ರ್‍ಯಾಂಕಿಂಗ್‌ನಲ್ಲಿ ದೊಡ್ಡದೊಂದು ಪ್ರಗತಿಯಾಗಲಿದೆ. ಅವರು ಮೊದಲ ಬಾರಿಗೆ ಅಗ್ರ 80ರೊಳಗೆ ಸ್ಥಾನ ಸಂಪಾದಿಸಿ 74ನೇ ಸ್ಥಾನಕ್ಕೆ ಏರಲಿದ್ದಾರೆ.

ಇನ್ನೊಂದೆಡೆ ವಿಶ್ವದ 211 ರ್‍ಯಾಂಕಿನ ಜೇ ಕ್ಲಾರ್ಕ್‌ ವೃತ್ತಿಜೀವನದ ಎರಡನೇ ಚಾಲೆಂಜರ್‌ ಪ್ರಶಸ್ತಿ ಜಯಿಸಿದರು. ಈ ಪ್ರಶಸ್ತಿಯಿಂದ ಕ್ಲಾರ್ಕ್‌ ನೂತನ ರ್‍ಯಾಂಕಿಂಗ್‌ನಲ್ಲಿ 160ನೇ ಸ್ಥಾನ ಪಡೆಯಲಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌.

ಫ್ಯಾಬಿಯೊ ಫೊಗಿನಿ ಚಾಂಪಿಯನ್‌
ಇಟಲಿಯ ಫ್ಯಾಬಿಯೊ ಫೊಗಿನಿ ಮಾಂಟೆ ಕಾರ್ಲೊ ಮಾಸ್ಟರ್ ಟೆನಿಸ್‌ ಪ್ರಶಸ್ತಿ ಜಯಿಸಿದ್ದಾರೆ. ಇದು 51 ವರ್ಷಗಳ ಬಳಿಕ ಇಟೆಲಿಗೆ ಒಲಿದ ಮೊದಲ ಮಾಂಟೆ ಕಾರ್ಲೊ ಪ್ರಶಸ್ತಿಯಾಗಿದೆ. 1968ರ ಚಾಂಪಿಯನ್‌ ನಿಕೋಲಾ ಪಿ ಟ್ರಂಗೇಲಿ ಈ ಪಂದ್ಯಕ್ಕೆ ಸಾಕ್ಷಿಯಾದರು. ರವಿವಾರದ ಫೈನಲ್‌ನಲ್ಲಿ ಫೊಗಿನಿ 6-3, 6-4ರಿಂದ ದುಸಾನ್‌ ಲಾಜೋವಿಕ್‌ಗೆ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next