Advertisement

‘ದುರ್ಗಾ ದೌಡ್‌’ : ಅ. 2ರಂದು ಉಡುಪಿಗೆ ಭೋಪಾಲದ ಸಂಸದೆ ಪ್ರಜ್ಞಾ ಸಿಂಗ್‌

11:44 AM Sep 29, 2022 | Team Udayavani |

ಉಡುಪಿ : ಹಿಂದೂ ಜಾಗರಣ ವೇದಿಕೆ ವತಿಯಿಂದ ಅ. 2ರಂದು ಆಯೋಜಿಸಲಾದ “ದುರ್ಗಾ ದೌಡ್‌’ ಕಾರ್ಯಕ್ರಮಕ್ಕೆ ಭೋಪಾಲದ ಸಂಸದೆ, ವಾಗ್ಮಿ ಪ್ರಜ್ಞಾ ಸಿಂಗ್‌ ಠಾಕೂರ್‌ ಆಗಮಿಸುತ್ತಿದ್ದಾರೆ.

Advertisement

ನಗರವನ್ನು ಕೇಸರಿ ಪತಾಕೆಗಳಿಂದ ಅಲಂಕರಿಸಲಾಗಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕೊರಗ ಸಮುದಾಯದ ಸುಂದರ ಕೊರಗ ಕಾರ್ಯಕ್ರಮ ಉದ್ಘಾಟಿಸುವರು.

ಹಿಂದೂ ಸಮಾಜದ ಎಲ್ಲ ಸಮುದಾಯಗಳ ಮುಖಂಡರು ಭಾಗವಹಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಮೆರವಣಿಗೆ ಕಡಿಯಾಳಿಯಿಂದ ಆರಂಭಗೊಂಡು ಕಲ್ಸಂಕ, ಸಿಟಿ ಬಸ್‌ ನಿಲ್ದಾಣ, ತೆಂಕಪೇಟೆ, ರಥಬೀದಿವರೆಗೆ ತೆರಳಲಿದೆ. ಸಂಜೆ 5ಕ್ಕೆ ಕೃಷ್ಣಮಠ ಪಾರ್ಕಿಂಗ್‌ ಪ್ರದೇಶದಲ್ಲಿ ಸಮಾವೇಶವನ್ನು ಉದ್ದೇಶಿಸಿ ಪ್ರಜ್ಞಾ ಸಿಂಗ್‌ ಮಾತನಾಡಲಿದ್ದಾರೆ.

ಇದನ್ನೂ ಓದಿ : 45 ವರ್ಷಗಳ ಬಳಿಕ ದಾದಿಯನ್ನು ಹುಡುಕಿಕೊಂಡು ಬೊಲಿವಿಯಾಗೆ ಹೊರಟ! ವಿಡಿಯೋ ನೋಡಿ

Advertisement

Udayavani is now on Telegram. Click here to join our channel and stay updated with the latest news.

Next