Advertisement

ಫೆ.3ರಿಂದ 2ನೇ ಹಂತದ ಪ್ರಜಾಧ್ವನಿ ಯಾತ್ರೆ: ಸಿದ್ದರಾಮಯ್ಯ

12:25 AM Jan 29, 2023 | Team Udayavani |

ಯಾದಗಿರಿ: ಬಿಜೆಪಿ ಸರಕಾಕರ್ಮಕಾಂಡ ಹಾಗೂ ಪಾಪದ ಪುರಾಣವನ್ನು ಜನರಿಗೆ ತಿಳಿಸಲು ಫೆ.3ರಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಯನ್ನು ಬಸವ ಕಲ್ಯಾಣದಿಂದ ಆರಂಭಿಸಲಾಗು ವುದು. ನಾನು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಹಾಗೂ ಡಿ.ಕೆ.ಶಿವಕುಮಾರ ಹಳೆ ಮೈಸೂರು ಭಾಗದಲ್ಲಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಇಲ್ಲಿನ ವನಕೇರಿ ಲೇಔಟ್‌ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿ ಸರಕಾರವನ್ನು ಕಿತ್ತೆಸೆದು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ಪ್ರಜಾಧ್ವನಿಯಲ್ಲಿ ಜನರು ನಿರೀಕ್ಷೆಗೂ ಮೀರಿ ಸ್ಪಂದನೆ ನೀಡಿದ್ದಾರೆ. ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ.

ನಾನು ಸಿಎಂ ಆಗಿದ್ದಾಗ ಪ್ರತಿ ಗ್ರಾಪಂಗೆ 200ರಿಂದ 300ರಂತೆ ಪ್ರತಿವರ್ಷ 3 ಲಕ್ಷ ಮನೆಗಳಂತೆ 15 ಲಕ್ಷ ಮನೆ ನೀಡಿದ್ದೇವೆ. ಬಿಜೆಪಿ ಯವರು ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಮನೆ ಕೊಟ್ಟಿಲ್ಲ. ಇವರ ಮನೆ ಹಾಳಾಗಲಿ ಎಂದು ಶಪಿಸಿದರು.

ಕಲ್ಯಾಣ ಕರ್ನಾಟಕ ಭಾಗ ಜಗತ್ತಿನ ಅತಿದೊಡ್ಡ ತೊಗರಿ ಕಣಜ. ಇಲ್ಲಿ ಒಂದು ಲಕ್ಷ ಹೆಕ್ಟೇರ್‌ ತೊಗರಿ ಹಾಳಾಗಿದೆ. ಈಗ ಕೇವಲ ಎರಡು ಹೆಕ್ಟೇರ್‌ಗೆ ಹತ್ತು ಸಾವಿರ ಪರಿಹಾರ ನೀಡಿದ್ದಾರೆ.

ಇವರು ಅಧಿಕಾರಕ್ಕೆ ಬಂದಾಗ ರೈತರ ಆದಾಯ ಡಬಲ್‌ ಮಾಡುವುದಾಗಿ ಹೇಳಿದ್ದರು. ರೈತರ ಬೆಳೆಗೆ ಬೆಲೆ ಡಬಲ್‌ ಆಗಲಿಲ್ಲ. ರೈತರು ಬಳಸುವ ಗೊಬ್ಬರದ ಬೆಲೆ ಡಬಲ್‌ ಆಗಿದೆ. ರೈತರ ಸಾಲ ಡಬಲ್‌ ಆಗಿದೆ. ಜನರು ದಿನಬಳಕೆಯ ವಸ್ತುಗಳ ಬೆಲೆ ಡಬಲ್‌ ಆಗಿದೆ. ಇದೇನಾ ಅಚ್ಛೇ ದಿನ್‌? ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದರು. ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ? ಹದಿನೈದು ಲಕ್ಷ ಕಪ್ಪು ಹಣ ನಿಮ್ಮ ಖಾತೆಗೆ ಹಾಕುವುದಾಗಿ ಹೇಳಿದ್ದರು. 15 ರೂ. ಕೂಡ ಹಾಕಲಿಲ್ಲ. ಇದು ಮೋದಿ ಹೇಳಿದ ಮಹಾ ಸುಳ್ಳು ಎಂದರು.

Advertisement

ಜೆಡಿಎಸ್‌ಗೆ ತತ್ವ ಸಿದ್ಧಾಂತವಿಲ್ಲ
ಜೆಡಿಎಸ್‌ ರಾಜಕೀಯ ಪಕ್ಷವೇ ಅಲ್ಲ. ಅದಕ್ಕೆ ಯಾವುದೇ ತತ್ವ ಸಿದ್ಧಾಂತವಿಲ್ಲ. ಅಧಿ ಕಾರಕ್ಕಾಗಿ ಯಾರ ಜತೆ ಬೇಕಾದರೆ ಹೋಗುತ್ತದೆ. ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಜೆಡಿಎಸ್‌ ಕಾರಣ. ಜೆಡಿಎಸ್‌ನ ಕುಮಾರಸ್ವಾಮಿ ಬಿಜೆಪಿಗೆ ಅಧಿ ಕಾರ ಬಿಟ್ಟು ಕೊಡದೆ ಇರುವುದರಿಂದ ಬಿಜೆಪಿ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು.

ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಬಿ.ಕೆ.ಹರಿಪ್ರಸಾದ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.

ಪಿಎಸ್‌ಐ ಅಕ್ರಮಕ್ಕೆ ಸರಕಾರದ ಬೆಂಬಲ: ಡಿಕೆಶಿ
ಕಲಬುರಗಿ: ರಾಜ್ಯದಲ್ಲಿ ಹುಯಿಲೆಬ್ಬಿಸಿರುವ ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಸರಕಾರದ ಬೆಂಬಲವಿಲ್ಲದೆ ಆರ್‌.ಡಿ.ಪಾಟೀಲ್‌ ಅಂಥವರೆಲ್ಲ ಕಿಂಗ್‌ಪಿನ್‌ಗಳಾಗಲು ಸಾಧ್ಯವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉನ್ನತ ಅಧಿಕಾರಿಗಳು, ಪರೀಕ್ಷೆ ನಡೆಸು ವವರಿಗೆ ಸರಕಾರ ಬೆಂಬಲ ಅಥವಾ ಆಶೀರ್ವಾದ ನೀಡದೆ ಹೋದರೆ ಒಎಂಆರ್‌ ಶೀಟ್‌ಗಳನ್ನು ತಿದ್ದುವುದು ಹೇಗೆ? ಸಂಪೂರ್ಣ ಬೆಂಬಲದಿಂದಲೇ ಇಷ್ಟು ದೊಡ್ಡ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಇನ್ಯಾರ ಹೆಸರಿದೆ ಎನ್ನುವುದನ್ನು ತನಿಖೆ ಬಳಿಕ ಸರಕಾರ ಜನರ ಮುಂದಿಡಬೇಕಿದೆ. ಆದರೆ ತನಿಖೆ ದಿಕ್ಕು ನೋಡಿದರೆ ಇದಕ್ಕಿಂತ ಹೆಚ್ಚು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next