Advertisement

ಫಲಿತಾಂಶಕ್ಕೂ ಮುನ್ನವೇ ಡಿಕೆಶಿ ಗೋವಾಕ್ಕೆ ಗೂಂಡಾಗಿರಿ ಮಾಡಲು ಹೋಗಿದ್ದರೆ?: ಜೋಶಿ ಪ್ರಶ್ನೆ

12:09 PM Mar 13, 2022 | Team Udayavani |

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ವೀಕ್ಷಕರು ಫಲಿತಾಂಶಕ್ಕೂ ಮುನ್ನ ಗೋವಾಕ್ಕೆ‌ ಹಾಗೂ ಉತ್ತರಾಖಂಡಕ್ಕೆ ಯಾಕೆ ಹೋಗಿದ್ದರು ಎನ್ನುವುದು ಇನ್ನೂ ಅರ್ಥವಾಗಿಲ್ಲ. ಅವರೇನು ತೋಳುಬಲ ತೋರಿಸಲು, ಗೂಂಡಾಗಿರಿ ಮಾಡಲು ಹೋಗಿದ್ದರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

Advertisement

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಗೋವಾಕ್ಕೆ ಹಾಗೂ ಉತ್ತರಾಖಂಡಕ್ಕೆ 13 ವೀಕ್ಷಕರು ಬಂದಿದ್ದರು. ಚುನಾವಣೆಯನ್ನು ಕಾಂಗ್ರೆಸ್ ಕುಸ್ತಿಯ ಕಣ, ಡಬ್ಲ್ಯುಡಬ್ಲ್ಯುಎಫ್ ಎಂದುಕೊಂಡಿದೆಯಾ? ಜನ ತೀರ್ಪು ಕೊಡುವ ಮುನ್ನವೇ ಇವರು ಅಲ್ಲಿಗೆ ತೆರಳಿದ್ದಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬಂತೆ ಕಾಂಗ್ರೆಸ್ ನಡೆಯಾಗಿದೆ. ಫಲಿತಾಂಶ ಬರುವ ಮುನ್ನವೇ ಅಲ್ಲಿಗೆ ಹೋಗಿ ಗೂಂಡಾಗಿರಿ‌ ಮಾಡಲು ತಯಾರಿ ಮಾಡಿದ್ದರೆ. ಕಾಂಗ್ರೆಸ್ ನ ಈ ನಡೆ ಗೊತ್ತಾಗುತ್ತಿಲ್ಲ ಎಂದರು.

ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜಿಸಬೇಕೆಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಅದನ್ನು ರಾಹುಲ್ ಗಾಂಧಿ ಕಾರ್ಯರೂಪಕ್ಕೆ ತರುತ್ತಿದ್ದಾರೆ‌. ಅದಕ್ಕೆ ಅವರಿಗೆ ಶುಭ ಕೋರುವೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ಬಗ್ಗೆ ಜನ ನಂಬಿಕೆ ಇಟ್ಟಿದ್ದಾರೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ದೂರಿ ಗೆಲುವು ಸಾಧಿಸಿದೆ. ಜಗತ್ತಿನ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ. ಉತ್ತರಾಖಂಡಕ್ಕೆ ಪ್ರಧಾನಿ ನಾಲ್ಕು ದಿನ ಭೇಟಿ ಕೊಟ್ಟಿದ್ದು ಪಕ್ಷದ ಗೆಲುವಿಗೆ ಕಾರಣವಾಯಿತು. ಅದಕ್ಕೆ ನಾನೊಬ್ಬನೇ ಕಾರಣ ಅಂತ ಹೇಳುವುದಿಲ್ಲ. ಅಲ್ಲಿ 80 ಸಾವಿರ ಸಭೆಗಳನ್ನು ಮಾಡಿದ್ದು ಮೈಲುಗಲ್ಲಾಯಿತು. ಉತ್ತರಾಖಂಡ ರಾಜ್ಯ ಅಭಿವೃದ್ಧಿ ಕಂಡಿದ್ದೆ ಕಳೆದೈದು ವರ್ಷದಲ್ಲಿ. ಕಾಂಗ್ರೆಸ್ ಇನ್ನಾದರೂ ನೆಗೆಟಿವ್ ಪ್ರಚಾರ ಮಾಡುವುದನ್ನು ಬಿಡಬೇಕು ಎಂದರು.

ಇದನ್ನೂ ಓದಿ:ಮುಂದಿನ ಚುನಾವಣೆಗೆ ಈಗಿನಿಂದಲೇ ತಂತ್ರ; ದಾವಣಗೆರೆ ಉತ್ತರ ಕ್ಷೇತ್ರದತ್ತ ಬೊಮ್ಮಾಯಿ ಚಿತ್ತ?

Advertisement

ಪಂಜಾಬ್ ನಲ್ಲಿ ನಾವು ಅಕಾಲಿದಳದ ಜೊತೆಗೆ ಜ್ಯೂನಿಯರ್ ಪಾರ್ಟ್ನರ್ ಆಗಿದ್ದೇವು. ಹೀಗಾಗಿ ಅಲ್ಲಿ ನಮಗೆ ಹಿನ್ನಡೆಯಾಗಿದೆಯಷ್ಟೆ. ಮುಂದಿನ ಚುನಾವಣೆ ವೇಳೆಗೆ ಅಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ. ಬಿಜೆಪಿ ಗೆಲುವು ಸಾಧಿಸಿದ ನಾಲ್ಕು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ ಎಂದರು.

ಅಧಿವೇಶನ ನಂತರ ಸಂಪುಟ ವಿಸ್ತರಣೆ: ಅಧಿವೇಶನದ ನಂತರ ಮಂತ್ರಿ ಮಂಡಲ ವಿಸ್ತರಣೆ ಚರ್ಚೆ ಆಗಲಿದೆ. ಮುಖ್ಯಮಂತ್ರಿಗಳು ದೆಹಲಿಗೆ ಬಂದು ಪಕ್ಷದ ಹಿರಿಯ ಮುಖಂಡರ ಜೊತೆಗೆ‌ ಚರ್ಚೆ ಮಾಡಲಿದ್ದಾರೆ. ಏಪ್ರಿಲ್ 8ರ ವರೆಗೆ ಅಧಿವೇಶನ ಇದೆ. ಅದರ ನಂತರ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬೆಳವಣಿಗೆ ಆಗಲಿದೆ. ಸದ್ಯ ಯಾವುದೇ ಪ್ರಕ್ರಿಯೆ ಆಗಲ್ಲ ಎಂದರು.

ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲೂ ಆ ದೇಶಗಳೊಂದಿಗೆ ಪ್ರಧಾನಿ ಮಾತುಕತೆ ನಡೆಸಿ ದೇಶದ 22ಸಾವಿರ ಜನರನ್ನು ರಕ್ಷಿಸಿ, ದೇಶಕ್ಕೆ ಕರೆತಂದರು. ಇದು ಮೋದಿ ಅವರ ವ್ಯಕ್ತಿತ್ವದ ಗಟ್ಟಿತನ ತೋರಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next