Advertisement

ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ : ಪ್ರಹ್ಲಾದ ಜೋಶಿ

01:49 PM Sep 03, 2021 | Team Udayavani |

ಹುಬ್ಬಳ್ಳಿ : ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವುದು ತಪ್ಪೆನಲ್ಲ. ಅದು ಚರ್ಚೆಯ ವಿಷಯವೇ ಅಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಮತ ಚಲಾವಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಅವರಿಗೆ ಇನ್ನೂ 18 ತಿಂಗಳ ಅಧಿಕಾರ ಇದೆ. ಸಾಮನ್ಯವಾಗಿ ಯಾರು ಸಿಎಂ ಇರುತ್ತಾರೋ ಅವರ ನೇತೃತ್ವದಲ್ಲಿ ಚುನಾವಣೆ ಹೋಗುವುದು ಸಹಜ. ಅಮಿತ ಶಾ ಬಹಳ ಯೋಚನೆ ಮಾಡಿಯೇ ಹಾಗೆ ಹೇಳಿದ್ದಾರೆ.

ಇದನ್ನೂ ಓದಿ : ‘ಉಗುಳು’ ಹೇಳಿಕೆ : ಬಿಜೆಪಿಗೆ ಸೇರಿದ ಮೇಲೆ ಅವರ ಮಾನಸಿಕ ಸ್ಥಿತಿ ಹೀಗಾಗಿದೆ : ಭೂಪೇಶ್

ಅವರು ಹೇಳಿದ ಮೇಲೆ ಅದು ಚರ್ಚೆಯ ವಿಷಯ ಅಲ್ಲ. ಪಕ್ಷದಲ್ಲಿ ಹಿರಿಯರಾದ ಜಗದೀಶ ಶೆಟ್ಟರ, ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿಲ್ಲ. ಬಹಳಷ್ಟು ಜನರು ಬಿಎಸ್ ವೈರನ್ನು ಅಧಿಕಾರದಿಂದ ತೆಗೆದರು ಅಂತಿದ್ದಾರೆ. ಆದರೆ ಅವರು ಸ್ವಪ್ರೇರಣೆಯಿಂದ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ. ಅವರೇ ಹೇಳಿದಂತೆ 2ವರ್ಷ ಅಧಿಕಾರ ನಡೆಸಿ ಬೇರೆಯವರಿಗೆ ಅಧಿಕಾರ ನೀಡಿದ್ದಾರೆ ಎಂದಿದ್ದಾರೆ.

ಯಾರಿಗಾದರು ಶ್ರೇಯಸ್ಸು ಕೊಡುವುದು ಇದ್ದರೆ ಅದು ಯಡಿಯೂರಪ್ಪರಿಗೆ ಸಿಗಬೇಕು. ಪಕ್ಷದ ಹೈಕಮಾಂಡ್ ಬಹಳಷ್ಟು ಚರ್ಚಿಸಿ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಬೊಮ್ಮಾಯಿ ಅವರನ್ನು ಸಿಎಂ‌  ಮಾಡಲಾಗಿದೆ. ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಇನ್ನೇನು ಕೆಲವೆ ದಿನಗಳಲ್ಲಿ ಪಾರ್ಟಿ ಸಭೆ ಸೇರುತ್ತೆ, ಅಲ್ಲಿ ಬಿಎಸ್ ವೈ-ಜಗದೀಶ ಶೆಟ್ಟರ ಸಲಹೆ ಪಡೆಯುತ್ತೇವೆ. ಅವರನ್ನು ಕಡೆಗಣಿಸುವ ಪ್ರಶ್ನೆಯೆ ಇಲ್ಲ ಎಂದರು.

Advertisement

ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವವಾಗಿ ಜಯಿಸಲಿದೆ. ಹು-ಧಾದಲ್ಲಿ 55-60 ಸ್ಥಾನಗಳನ್ನು ಪಡೆಯಲಿದೆ  ಎಂದರು.

ಇದನ್ನೂ ಓದಿ : ಕಾಶ್ಮೀರದಲ್ಲಿರುವ ಮುಸ್ಲಿಮರ ಪರ ಧ್ವನಿ ಎತ್ತುವ ಎಲ್ಲಾ ಹಕ್ಕು ನಮಗಿದೆ: ತಾಲಿಬಾನ್

Advertisement

Udayavani is now on Telegram. Click here to join our channel and stay updated with the latest news.

Next