Advertisement

ವಿದ್ಯಾಗಿರಿಯಲ್ಲಿ  ಆಳ್ವಾಸ್‌ ಪ್ರಗತಿ ಉದ್ಯೋಗ ಮೇಳ

02:52 PM Jul 07, 2018 | Team Udayavani |

ಮೂಡಬಿದಿರೆ: ಆಳ್ವಾಸ್‌ ಪ್ರಗತಿ ಉದ್ಯೋಗ ಮೇಳದ ಮೂಲಕ ಯುವಜನರುಅಪೇಕ್ಷೆಗೆ ತಕ್ಕುದಾದ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿದೆ.  ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅಭಿಪ್ರಾಯಪಟ್ಟರು.

Advertisement

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಯಾಂಪಸ್‌ನಲ್ಲಿ ಎರಡು ದಿನ ನಡೆಯುವ 10ನೇ ಆವೃತ್ತಿಯ ಆಳ್ವಾಸ್‌ ಪ್ರಗತಿ ಉದ್ಯೋಗ ಮೇಳಕ್ಕೆ ಅವರು ಶುಕ್ರವಾರ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ವಹಿಸಿದ್ದರು. 

ಕೆ. ಅಮರನಾಥ ಶೆಟ್ಟಿ ಮತ್ತು ಕೆ. ಅಭಯಚಂದ್ರ ಮುಖ್ಯ ಅತಿಥಿಯಾಗಿದ್ದರು. ಐಟಿಸಿ ಲಿಮಿಟೆಡ್‌ನ‌  ಎಚ್‌.ಆರ್‌. ಮ್ಯಾನೇಜರ್‌ ಶ್ರೀನಿವಾಸ ರೈ, ಎಂಫಸಿಸ್‌ನ ಎಚ್‌.ಆರ್‌. ಮ್ಯಾನೇಜರ್‌ ವಿದ್ಯಾರಣ್ಯ ಕೊಲ್ಲಿಪಾಲ್‌, ಯುಎಇ ಎಕ್ಸ್‌ ಚೇಂಜ್‌ನ ಎಚ್‌.ಆರ್‌., ಆಳ್ವಾಸ್‌ನ ಹಳೆ ವಿದ್ಯಾರ್ಥಿ ಗಣೇಶ್‌ ರವಿ  ಅವರನ್ನು ಸಮ್ಮಾನಿಸಲಾಯಿತು. ಡಾ| ಕುರಿಯನ್‌ ಸ್ವಾಗತಿಸಿದರು. ಉಪನ್ಯಾಸಕ ಉದಯ ಮಂಜುನಾಥ್‌ ಕಾರ್ಯಕ್ರಮ ನಿರೂಪಿಸಿದರು. ಡಾ| ಪೀಟರ್‌ ಫೆರ್ನಾಂಡಿಸ್‌ ಅವರು ವಂದಿಸಿದರು.

ಮೊದಲ ದಿನ
*   ಆನ್‌ಲೈನ್‌ ನೋಂದಣಿ: 10,399 ಮಂದಿ
*   ಸ್ಥಳದಲ್ಲಿ  ನೋಂದಣಿ: 972 ಮಂದಿ
*    ಭಾಗವಹಿಸಿದ ಕಂಪೆನಿಗಳು: 183
*    800 ಕೊಠಡಿಗಳು
*    8,347 ಅಭ್ಯರ್ಥಿಗಳ ಸಂದರ್ಶನ
*    ಶನಿವಾರ ಹೊಸ ನೋಂದಣಿ ಇಲ್ಲ; ಅಂತಿಮ ಹಂತದ ಆಯ್ಕೆ ಪ್ರಕ್ರಿಯೆ ಮಾತ್ರ
*    ಅಭ್ಯರ್ಥಿಗಳು ತಮ್ಮ  ಅರ್ಹತೆಯ ಉದ್ಯೋಗ ವನ್ನು ಆಯ್ಕೆ ಮಾಡಲು ಕಲರ್‌ ಕೋಡಿಂಗ್‌ ಸೌಲಭ್ಯ
*   ಆಳ್ವಾಸ್‌ನ 1,200 ವಿದ್ಯಾರ್ಥಿ ಸ್ವಯಂ ಸೇವಕರು, ಸಿಬಂದಿಗಳ ಸಹಕಾರ

Advertisement

Udayavani is now on Telegram. Click here to join our channel and stay updated with the latest news.

Next