Advertisement

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಿಂದ ರೈತರಿಗೆ ಅನುಕೂಲ ಅಣ್ಣಾಸಾಹೇಬ ಜೊಲ್ಲೆ

12:40 PM Jul 09, 2022 | Team Udayavani |

ಚಿಕ್ಕೋಡಿ: ಮಳೆ ನೀರು ಹರಿದು ಜಲಾಶಯ ಸೇರುವುದರಿಂದ ನೀರಿನ ಜೊತೆ ಮಣ್ಣು ಹೋಗುತ್ತದೆ. ಇದನ್ನು ತಡೆಯಲು ಪ್ರಧಾನಮಂತ್ರಿಗಳು ಸಮಗ್ರ ಕೃಷಿ ಸಿಂಚಾಯಿ ಯೋಜನೆ ಜಾರಿ ಮಾಡಿದ್ದಾರೆ. ನೀರು ತಡೆಯುವುದರಿಂದ ರೈತರ ಬಾವಿ‌,ಬೋರವೆಲ್ ನೀರಿನ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

Advertisement

ತಾಲೂಕಿನ ತೋರಣಹಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಘಟಕದಡಿ ಜಲಾನಯನ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಸಿಂಚಸಯಿ ಯೋಜನೆಗೆ 13.62 ಕೋಟಿ ರೂ ಮಂಜೂರು ಆಗಿದೆ. ಈ ಯೋಜನೆಯನ್ನು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿಸ್ತರಿಸಲು ಪ್ರಯತ್ನ ಮಾಡಲಾಗುತ್ತದೆ. ಕಿಸಾನ್ ಸಮ್ಮಾನ್ ಯೋಜನೆ 25 ಕೋಟಿ ರೈತರಿಗೆ ಅನುಕೂಲವಾಗಿದೆ. ಕೇಂದ್ರ ಸರಕಾರ ಜಾರಿ ಮಾಡಿರುವ ಯೋಜನೆಗಳು ಪ್ರತಿಯೊಬ್ಬರಿಗೆ ಮುಟ್ಟಿಸುವ ಕೆಲಸವನ್ನು ಸರಕಾರ ಮಾಡುತ್ತದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಸಮಗ್ರ ಜಲಾನಯನ ಮೂಲಕ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ 6100 ಹೆಕ್ಟರ ಪ್ರದೇಶದಲ್ಲಿ ಬದು ನಿರ್ಮಾನ ಮಾಡಲಾಗುತ್ತದೆ. ಓಡುವ ನೀರನ್ನು ತಡೆಯಬೇಕು. ನೀರು ಇಂಗುವ ಹಾಗೇ ಮಾಡಿದರೇ ಮಣ್ಣು ಫಲವತ್ತೆ ಪಡೆಯುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಮಣ್ಣು ರೈತನ ಕಣ್ಣು,ಮಣ್ಣು ಸಂರಕ್ಷಣೆ ಮಾಡಿದರೆ ರೈತನಿಗೆ ಅನುಕೂಲವಾಗುತ್ತದೆ. ಮಳೆ ನೀರು ಹರಿದು ಹೋಗದಂತೆ ತಡೆದು ನಿಲ್ಲಿಸುವುದಕ್ಕೆ ಸಮಗ್ರ ಜಲಾನಯನ ಯೋಜನೆಯನ್ನು ಪ್ರಧಾನಿ ಜಾರಿಗೆ ತಂದಿದ್ದಾರೆ ಎಂದರು.

ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ವಿಶೇಷ ಪ್ರಯತ್ನದಿಂದ ಪ್ರಧಾನಮಂತ್ರಿ ಸಿಂಚಾಯಿ ಯೋಜನೆ ಜಾರಿಗೆ ಬಂದಿದೆ. ರೈತರು ಆಸಕ್ತಿಯಿಂದ ಯೋಜನೆಯ ಲಾಭ ಪಡೆಯಬೇಕು ಎಂದರು.

Advertisement

ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಐ.ರೂಡಗಿ.  ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ನ್ಯಾಯವಾದಿ ಅಶೋಕ ಹರಗಾಪೂರೆ, ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ರಾಮನಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಮಂಜೂನಾಥ ಜನಮಟ್ಟಿ, ರಾಮಗೌಡ ಸಣ್ಣಲಚ್ಚಪ್ಪಗೋಳ, ವಿಜಯ ಕೋಠಿವಾಲೆ, ಬಸವರಾಜ ಮಾಳಗೆ, ಎಪಿಎಂಸಿ ಉಪಾಧ್ಯಕ್ಷ ರಾಯಗೌಡ ಕೆಳಗಿನಮನಿ,ಕೃಷ್ಣಪ್ಪ ಜೋಗಿ, ಗ್ರಾ.ಪಂ ಅಧ್ಯಕ್ಷ ಸುರೇಶ ಘರಬುಡೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next