Advertisement

ಉತ್ತಮ ಮಳೆ-ಬೆಳೆಗಾಗಿ ಅಮ್ಮನನ್ನು ಕಳಿಸುವ ಆಚರಣೆ

03:31 PM Jul 07, 2018 | Team Udayavani |

ಹರಪನಹಳ್ಳಿ: ರೋಗ-ರುಜಿನ ದೂರವಾಗಲು ಮತ್ತು ಉತ್ತಮ ಮಳೆ-ಬೆಳೆ ಬರಲಿ ಎಂದು ಹರಕೆ ಹೊತ್ತು ಪಟ್ಟಣದ ವಾಲ್ಮೀಕಿ ನಗರದ ಸಮಸ್ತ ದೈವಸ್ಥರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಅಮ್ಮನನ್ನು ಕಳಿಸುವ ಆಚರಣೆ ನಡೆಯಿತು.

Advertisement

ಪ್ರತಿ ವರ್ಷಕ್ಕೊಮ್ಮೆ ಕಾರು ಹುಣ್ಣಿಮೆಗೆ ಎಂಟು ದಿನ ಮುಂಚಿತವಾಗಿ ಈ ಆಚರಣೆ ನಡೆಯುತ್ತದೆ. ಕುಟುಂಬದಲ್ಲಿ ಯಾರಿಗೂ ಯಾವುದೇ ರೀತಿಯ ರೋಗ ರುಜಿನ ಬರಬಾರದು. ಮಕ್ಕಳಿಗೆ ದಡಾರ, ಸಿಡುಬು ಏಳಬಾರದು ಎಂಬ ಕಾರಣದಿಂದ ಹಿಂದಿ ನಿಂದಲೂ ಆಚರಣೆ ನಡೆಯುತ್ತ ಬಂದಿದೆ.

ಮನೆಯಲ್ಲಿ ಮಹಿಳೆಯರು ಮಡಿಯಿಂದ ತಮಗೆ ಅನುಕೂಲವಾಗುವ ಹೋಳಿಗೆ, ಕರಿಗಡಬು ತಯಾರಿಸಿ ಹಣ್ಣುಗಳು, ಬೇವಿನ ಸೊಪ್ಪು, ಪೂಜಾ ಸಾಮಗ್ರಿಯನ್ನು ಮೊರದಲ್ಲಿ ಇರಿಸುತ್ತಾರೆ. ಇದನ್ನು ಮನೆಯಲ್ಲಿ ಪೂಜಿಸಿ ನಂತರ ಬಡಾವಣೆಯ ರಸ್ತೆಯಲ್ಲಿ ಒಂದೆಡೆ ಇಂತಹ ನೂರಾರು ಮೊರಗಳನ್ನು ಇಡಲಾಗುತ್ತದೆ. ನಂತರ ಅಲ್ಲಿಯೇ ಪ್ರತಿಷ್ಠಾಪಿಸಲಾದ ಅಮ್ಮನನನ್ನು ಪೂಜಿಸಿ, ಮಂಗಳಾರತಿ ಬೆಳಗಿ, ಸಕಲ ವಾದ್ಯಗಳೊಂದಿಗೆ ಕುಟುಂಬದ ಪುರುಷ
ಸದಸ್ಯರು ಹರಪನಹಳ್ಳಿ ಪಟ್ಟಣದ ಕರಗಲ್ಲು ಬರುವವರೆಗೂ ಕೈಯಲ್ಲಿ ಈ ಮೊರಗಳನ್ನು ತೆಗೆದುಕೊಂಡು ಹೋಗುತ್ತಾರೆ. ನಂತರ ಬನ್ನಿಮರದ ಕೆಳಗೆ ಮೊರಗಳಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಬೆಳಗಿ ಮನೆಗೆ ವಾಪಸ್ಸಾಗುತ್ತಾರೆ.

ಕಮ್ಮಾರ ದೊಡ್ಡಹಾಲಪ್ಪ, ಮಂಡಕ್ಕಿ ಸುರೇಶ, ಶಿರಹಟ್ಟಿ ಬಸವರಾಜ, ನಿಟ್ಟೂರು ದೊಡ್ಡ ಹಾಲ್ಲಪ್ಪ, ಯಲ್ಲಜ್ಜಿ ಅಂಜಿನಪ್ಪ, ಮ್ಯಾಕಿ ನಾಗಪ್ಪ, ಎಂ.ಅಂಜಿನಪ್ಪ, ಮಂಜಾಚಾರಿ, ನಾಗಪ್ಪ, ದೇವಪ್ಪ, ಪುರಸಭೆ ಸದಸ್ಯರಾದ ಕೃಷ್ಣಪ್ಪ, ಮ್ಯಾಕಿ ದುರುಗಪ್ಪ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next