Advertisement
ಚೇತೇಶ್ವರ್ ಪೂಜಾರ ಏಳೇ ರನ್ನಿನಿಂದ ಶತಕ ತಪ್ಪಿಸಿಕೊಂಡಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 78.5 ಓವರ್ ಬ್ಯಾಟಿಂಗ್ ನಡೆಸಿ 263 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದಿದೆ.
Related Articles
ಸಮಾಧಾನಕರ ಸಂಗತಿಯೆಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಪಾರ್ಟ್‌ಟೈಮ್ ಓಪನರ್ ಆಗಿ ಕಣಕ್ಕಿಳಿದಿದ್ದ ಹನುಮ ವಿಹಾರಿ ಅಮೋಘ ಶತಕದೊಂದಿಗೆ ಭಾರತದ ಸರದಿಯನ್ನು ಆಧರಿಸಿದ್ದು. 182 ಎಸೆತ ಎದುರಿಸಿದ ವಿಹಾರಿ 101 ರನ್ ಬಾರಿಸಿ ನಿವೃತ್ತರಾದರು. ಸಿಡಿಸಿದ್ದು 10 ಬೌಂಡರಿ ಹಾಗೂ 3 ಸಿಕ್ಸರ್.
Advertisement
ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ್ ಪೂಜಾರ ಏಳೇ ರನ್ ಕೊರತೆಯಿಂದ ಶತಕ ತಪ್ಪಿಸಿಕೊಂಡರು. 211 ಎಸೆತಗಳ ಮ್ಯಾರಥಾನ್ ಆಟವಾಡಿದ ಪೂಜಾರ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು. ಪೂಜಾರ-ವಿಹಾರಿ ಅವರ 5ನೇ ವಿಕೆಟ್ ಜತೆಯಾಟದಲ್ಲಿ 195 ರನ್ ಒಟ್ಟುಗೂಡಿತು. ಆಗ ಭಾರತ ಬೃಹತ್ ಮೊತ್ತ ಪೇರಿಸುವ ಸೂಚನೆ ಸಿಕ್ಕಿತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ 2ನೇ ಕಂತಿನ ಕುಸಿತ ಮೊದಲ್ಗೊಂಡಿತು. ಇದರ ತೀವ್ರತೆ ಎಷ್ಟಿತ್ತೆಂದರೆ, 30 ರನ್ ಅಂತರದಲ್ಲಿ ಕೊನೆಯ 6 ವಿಕೆಟ್ ವಿಕೆಟ್ ಹಾರಿ ಹೋಯಿತು!
ವಿಹಾರಿ, ಪೂಜಾರ ಹೊರತುಪಡಿಸಿದರೆ ಎರಡಂಕೆಯ ಗಡಿ ದಾಟಿದ ಏಕೈಕ ಆಟಗಾರನೆಂದರೆ ಅಜಿಂಕ್ಯ ರಹಾನೆ (18). ಪಂತ್ 7ಕ್ಕೆ ಆಟ ಮುಗಿಸಿದರೆ, ಸಾಹಾ ಮತ್ತು ಅಶ್ವಿನ್ ಖಾತೆಯನ್ನೇ ತೆರೆಯಲಿಲ್ಲ. ವಿರಾಟ್ ಕೊಹ್ಲಿ ಆಡಲಿಳಿಯಲಿಲ್ಲ.
ಸ್ಕಾಟ್ ಕ್ಯುಗೆಲೀನ್, ಐಶ್ ಸೋಧಿ, ಜೇಕ್ ಗಿಬ್ಸನ್ ಉತ್ತಮ ಬೌಲಿಂಗ್ ಪ್ರದರ್ಶನವಿತ್ತರು.
ಸ್ಕೋರ್ ಪಟ್ಟಿಭಾರತ ಪ್ರಥಮ ಇನ್ನಿಂಗ್ಸ್
ಪೃಥ್ವಿ ಶಾ ಸಿ ರವೀಂದ್ರ ಬಿ ಕ್ಯುಗೆಲೀನ್ 0
ಅಗರ್ವಾಲ್ ಸಿ ಕ್ಲೀವರ್ ಬಿ ಕ್ಯುಗೆಲೀನ್ 1
ಚೇತೇಶ್ವರ್ ಪೂಜಾರ ಸಿ ಕ್ಲೀವರ್ ಬಿ ಗಿಬ್ಸನ್ 93
ಶುಭಮನ್ ಗಿಲ್ ಸಿ ಸೀಫರ್ಟ್ ಬಿ ಕ್ಯುಗೆಲೀನ್ 0
ಅಜಿಂಕ್ಯ ರಹಾನೆ ಸಿ ಬ್ರೂಸ್ ಬಿ ನೀಶಮ್ 18
ಹನುಮ ವಿಹಾರಿ ನಿವೃತ್ತ 101
ರಿಷಭ್ ಪಂತ್ ಸಿ ಕ್ಯುಗೆಲೀನ್ ಬಿ ಸೋಧಿ 7
ವೃದ್ಧಿಮಾನ್ ಸಾಹಾ ಸಿ ಕ್ಲೀವರ್ ಬಿ ಗಿಬ್ಸನ್ 0
ಆರ್. ಅಶ್ವಿನ್ ಎಲ್‌ಬಿಡಬ್ಲ್ಯು ಸೋಧಿ 0
ಉಮೇಶ್ ಯಾದವ್ ಔಟಾಗದೆ 9
ರವೀಂದ್ರ ಜಡೇಜ ಸಿ ಅಲೆನ್ ಬಿ ಸೋಧಿ 8
ಇತರ 26
ಒಟ್ಟು (ಆಲೌಟ್) 263
ವಿಕೆಟ್ ಪತನ: 1-0, 2-5, 3-5, 4-38, 5-233, 6-246, 7-246, 8-250, 9-263.
ಬೌಲಿಂಗ್:
ಸ್ಕಾಟ್ ಕ್ಯುಗೆಲೀನ್ 14-2-40-3
ಬ್ಲೇರ್ ಟಿಕ್ನರ್ 15-3-37-0
ಡ್ಯಾರಿಲ್ ಮಿಚೆಲ್ 7-1-15-0
ಜೇಮ್ಸ್ ನೀಶಮ್ 13-3-29-1
ಜೇಕ್ ಗಿಬ್ಸನ್ 10-1-26-2
ಐಶ್ ಸೋಧಿ 14.5-0-72-3
ರಚಿನ್ ರವೀಂದ್ರ 5-1-30-0