Advertisement

“ಸುರಕ್ಷಿತ ವಾತಾವರಣ’ದಲ್ಲಿ ಹಾಕಿ ಅಭ್ಯಾಸ

12:29 AM Mar 22, 2020 | Sriram |

ಬೆಂಗಳೂರು: ಕೋವಿಡ್‌ 19 ಹಿನ್ನೆಲೆಯಲ್ಲೂ ಟೋಕಿಯೊ ಒಲಿಂಪಿಕ್ಸ್‌ಗಾಗಿ ಭಾರತದ ಪುರುಷರ ಹಾಗೂ ವನಿತೆಯರ ಹಾಕಿ ತಂಡಗಳೆರಡೂ ಬೆಂಗಳೂರಿನ ಸಾಯ್‌ ಸೆಂಟರ್‌ನ “ಸುರಕ್ಷಿತ ವಾತಾ ವರಣ’ದಲ್ಲಿ ಅಭ್ಯಾಸ ನಡೆಸುತ್ತಿವೆ. ಇಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಸ್ವತಃ ಆಟಗಾರರೇ ಹೇಳಿಕೊಂಡಿದ್ದಾರೆ.

Advertisement

“ನಮ್ಮ ಅಭ್ಯಾಸಕ್ಕೆ ಕೋವಿಡ್‌ 19 ದಿಂದ ಯಾವುದೇ ಆತಂಕ ಎದುರಾಗಿಲ್ಲ. ನಾವು ಆಗಾಗ ಕೈಗಳನ್ನು ತೊಳೆದುಕೊಳ್ಳುತ್ತ, ದೇಹದ ಉಷ್ಣಾಂಶವನ್ನು ಪರೀಕ್ಷಿಸಿ ಕೊಳ್ಳುತ್ತಿದ್ದೇವೆ. ನಮ್ಮ ಅಭ್ಯಾಸಕ್ಕೆ ಸಾಯ್‌ ಕ್ಯಾಂಪಸ್‌ ಸುರಕ್ಷಿತ ಎಂಬುದಾಗಿ ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ’ ಎಂಬುದಾಗಿ ಭಾರತದ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ವನಿತಾ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

“ಸಾಯ್‌ ಮತ್ತು ನಮ್ಮ ತರಬೇತುದಾರರ ಮಾರ್ಗದರ್ಶನದಲ್ಲಿ ನಾವು ಟೋಕಿಯೊ ಒಲಿಂಪಿಕ್ಸ್‌ ಗಾಗಿ ಇಲ್ಲಿ ಕಠಿನ ಅಭ್ಯಾಸದಲ್ಲಿ ತೊಡಗಿದ್ದೇವೆ’ ಎಂದೂ ಮನ್‌ಪ್ರೀತ್‌ ಹೇಳಿದರು.

ಕೋವಿಡ್‌ 19 ಮುನ್ನೆಚ್ಚರಿಕೆಯ ಕ್ರಮವಾಗಿ ಸಾಯ್‌ ಕೇಂದ್ರಕ್ಕೆ ಹೊರಗಿನವರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಹಾಗೆಯೇ ಕ್ರೀಡಾಪಟುಗಳಿಗೂ ಸಾಕಷ್ಟು ನಿರ್ಬಂಧ ವಿಧಿಸಲಾಗಿದೆ.

ಸಾಯ್‌ ಸಕಲ ಬೆಂಬಲ
“ನಮ್ಮ ಆರೋಗ್ಯವನ್ನು ಪ್ರತೀ ದಿನವೂ ಪರಿಶೀಲಿಸಲಾಗುತ್ತದೆ. ನಾವೆಲ್ಲ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದೇ ನಮ್ಮ ಗುರಿ. ಇದಕ್ಕೆ ಸಾಯ್‌ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತಿದೆ’ ಎಂಬುದು ರಾಣಿ ರಾಮ್‌ಪಾಲ್‌ ಹೇಳಿಕೆ.

Advertisement

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ತಂಡ ಜು. 25ರಂದು ತನ್ನ ಮೊದಲ ಪಂದ್ಯವನ್ನು ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ. ಅದೇ ದಿನ ವನಿತೆಯರು ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next