Advertisement

ಬಸವ ಕಾಯಕ ಮೈಗೂಡಿಸಿಕೊಂಡಿದ್ದರು ಸಿದ್ಧಗಂಗಾ ಶ್ರೀ

12:16 PM Apr 01, 2019 | pallavi |
ಕಲಬುರಗಿ: ವಿಶ್ವಗುರು ಬಸವಣ್ಣನ ಕಾಯಕ ಮತ್ತು ದಾಸೋಹ ಸಿದ್ಧಾಂತವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅದೇ ಮಾರ್ಗದಲ್ಲಿ ಸಾವಿರಾರು ಮಕ್ಕಳನ್ನು ಬೆಳೆಸಿದ ಕೀರ್ತಿ ಸಿದ್ಧಗಂಗಾ ಮಠದ ಪೂಜ್ಯ ಡಾ|ಶಿವಕುಮಾರ ಮಹಾಸ್ವಾಮೀಜಿಗೆ ಸಲ್ಲುತ್ತದೆ ಎಂದು ಸಾರಂಗಮಠದ ಜಗದ್ಗುರು ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ನುಡಿದರು.
ಕರ್ನಾಟಕ ರತ್ನ, ಶತಾಯುಷಿಗಳಾಗಿದ್ದ ಸಿದ್ಧಗಂಗಾ ಮಠದ ಪೂಜ್ಯ ಡಾ| ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮ ದಿನದ ಪ್ರಯುಕ್ತ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಕೇಂದ್ರ ಸಮಿತಿ ಹಾಗೂ ಚಿತ್ತಾಪುರ ತಾಲೂಕಾ ಘಟಕದ
ಸಂಯುಕ್ತಾಶ್ರಯದಲ್ಲಿ ವಿದ್ಯಾನಗರದ ಸರಕಾರಿ ಮೆಟ್ರಿಕ್‌ ನಂತರ ಬಾಲಕಿಯರ ವಸತಿ ನಿಲಯದ ಪ್ರಾಂಗಣದಲ್ಲಿ ನಡೆದ “ಸಿದ್ಧಿಯಗಂಗಾ’ ಪ್ರಶಸ್ತಿ ಪ್ರದಾನ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಿದ್ಧಗಂಗಾ ಶ್ರೀಗಳು ಜಾತಿ, ಮತ, ಪಂಥ, ಕುಲ ಎನ್ನದೇ ಸರ್ವರನ್ನು ಸಮಾನತೆಯಿಂದ ಕಂಡು, ಸ್ವಾರ್ಥ ರಹಿತ ಸೇವೆ ಮಾಡುವ ಮೂಲಕ ನಿಜವಾದ ನಡೆದಾಡುವ ದೇವರು ಎನಿಸಿಕೊಂಡಿದ್ದರು ಎಂದರು.
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ, ಹಾಸ್ಯ
ಕಲಾವಿದ ಗುಂಡಣ್ಣ ಡಿಗ್ಗಿ ಹರಸೂರ, ಶರಣ ಚಿಂತಕ ಬಸವರಾಜ ಮೊರಬದ, ಚಿತ್ರ ಕಲಾವಿದ ನರಸಿಂಹಲು ಆಲಮೇಲಕರ್‌, ರುದ್ರಮುನಿ ಪುರಾಣಿಕ್‌ ರವರನ್ನು “ಸಿದ್ಧಿಯಗಂಗಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಸತಿ ನಿಲಯದ ವಾರ್ಡನ್‌ ಲಕ್ಷ್ಮೀ ಕೋರೆ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಆವಂಟಿ, ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಅಕಾಡೆಮಿಯ ಎಸ್‌.ಎಂ. ಪಟ್ಟಣಕರ್‌, ಶಿವರಾಜ ಎಸ್‌. ಅಂಡಗಿ, ಪರಮೇಶ್ವರ ಶಟಕಾರ, ಶಿವಾನಂದ ಮಠಪತಿ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುಲಿಂಗ ಮೂಲಗೆ, ಪ್ರಸನ್ನ ವಾಂಜರಖೇಡೆ, ಸವಿತಾ ಪಾಟೀಲ ಸೊಂತ, ಪ್ರಾಧ್ಯಾಪಕಿ ಡಾ| ಗೀತಾ ಪಾಟೀಲ, ಎಸ್‌.ಎಂ. ಡೋಮನಾಳ, ರಾಜಶೇಖರ ಕಡಗನ್‌, ವಿಶ್ವಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಅಕಾಡೆಮಿ ಚಿತ್ತಾಪುರ ಘಟಕ ಅಧ್ಯಕ್ಷ ಸಿದ್ಧಲಿಂಗ ಜಿ.ಬಾಳಿ ಹಾಜರಿದ್ದರು.
ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿ, ಅಣಕಿಲ್ಲದ ಜೀವನಕ್ಕೆ ಹೊಸ ಚೈತನ್ಯ ತುಂಬಿದ ಮಹಾನ್‌ ಚೇತನ ಡಾ| ಶಿವಕುಮಾರ ಮಹಾಸ್ವಾಮಿಗಳು. ಇಂಥ ಮಹಾನ್‌ ದಾರ್ಶನಿಕರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ.
 ವಿಜಯಕುಮಾರ ತೇಗಲತಿಪ್ಪಿ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
Advertisement

Udayavani is now on Telegram. Click here to join our channel and stay updated with the latest news.

Next