Advertisement
ಹೊಸ ಬೋಟ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬು ದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಯವರ ಆದೇಶದಂತೆ ಟ್ರಯಲ್ ರನ್ ಮತ್ತು ಅಣುಕು ಪರೀಕ್ಷೆ ಮಾಡಲಾಗಿದೆ. ಎಲ್ಲ ಬೋಟ್‌ಗಳು ಸುಸ್ಥಿತಿಯಲ್ಲಿವೆ ಎಂದರು.
Related Articles
Advertisement
ಜಿಲ್ಲಾಡಳಿತ ಕಳೆದ ವರ್ಷ ಗೃಹರಕ್ಷಕದಳಕ್ಕೆ 3 ಇನ್‌ಫ್ಲೆಟೇಬಲ್ ಬೋಟ್‌ಗಳನ್ನು ನೀಡಿತ್ತು. ಕೇಂದ್ರ ಕಚೇರಿಯಿಂದ ಮತ್ತೆ ಎರಡು ಬೋಟ್‌ಗಳು ಸೇರ್ಪಡೆಯಾಗಿವೆ. ಗೃಹರಕ್ಷಕದಳದಲ್ಲಿ ಒಟ್ಟು 6 ಬೋಟ್‌ಗಳಿವೆ. ಸುಬ್ರಹ್ಮಣ್ಯ, ಉಪ್ಪಿನಂಗಡಿ, ಬಂಟ್ವಾಳ, ಮೂಲ್ಕಿಯಲ್ಲಿ ತಲಾ 1 ಹಾಗೂ ಮಂಗಳೂರಿನಲ್ಲಿ 2 ಬೋಟ್‌ಗಳಿವೆ. ಇದರಲ್ಲಿ ನುರಿತ ಈಜುಪಟುಗಳು, ಚಾಲಕರು ಇರುತ್ತಾರೆ. ನೆರೆ ಸಂದರ್ಭ ಜಿಲ್ಲಾಧಿಕಾರಿಯವರ ಆದೇಶದಂತೆ ಅಗ್ನಿಶಾಮಕದಳದೊಂದಿಗೆ ಸೇರಿ ಜನರು ಮತ್ತು ಆಸ್ತಿ ಪಾಸ್ತಿಗಳ ರಕ್ಷಣೆಗೆ ಬಳಕೆ ಮಾಡಲಾಗುತ್ತದೆ ಎಂದು ಜಿಲ್ಲಾ ಗೃಹರಕ್ಷಕದಳದ ಸಮಾ ದೇಷ್ಟರಾದ ಡಾ| ಮುರಳಿ ಮೋಹನ್ ಚೂಂತಾರು ತಿಳಿಸಿದರು.