Advertisement

‘ಗಣಿತಶಾಸ್ತ್ರ ದಲ್ಲಿ ಪ್ರಾಯೋಗಿಕ ಶಿಕ್ಷಣ ಆವಶ್ಯಕ’

11:06 PM Jun 15, 2019 | Sriram |

ಮಹಾನಗರ: ಗಣಿತ ಶಾಸ್ತ್ರದಲ್ಲಿ ಸೈಲ್ಯಾಬ್‌, ಮ್ಯಾಕ್ಸಿಮಾನಂತಹ ಪ್ರಾಯೋಗಿಕ ವಿಷಯಗಳನ್ನು ಪಠ್ಯ ಕ್ರಮದಲ್ಲಿ ಅಳವಡಿಸುವುದರಿಂದ ಗಣಿತ ಶಾಸ್ತ್ರದಲ್ಲಿನ ಸವಾಲುಗಳನ್ನು ಸುಲಭವಾಗಿ ಬಗೆಹರಿಸಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಗಣಿತಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ| ವಿಜಯ ಕುಮಾರಿ ಹೇಳಿದರು.

Advertisement

ನಗರದ ಕೆನರಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಮುತು ವರ್ಜಿಯೊಂದಿಗೆ ಕಾಲೇಜಿನ ಗಣಿತಶಾಸ್ತ್ರ ವಿಭಾಗ ಹಾಗೂ ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳ ಗಣಿತಶಾಸ್ತ್ರ ಉಪನ್ಯಾಸಕರ ಒಕ್ಕೂಟದ ಸಹ ಯೋಗದೊಂದಿಗೆ ಆಯೋಜಿಸಲಾದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶ್ಲಾಘನೀಯ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ| ಕೆ.ವಿ. ಮಾಲಿನಿ ಮಾತನಾಡಿ, ಪ್ರಥಮ ವರ್ಷದ ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪ್ರಾಯೋಗಿಕ ಶಿಕ್ಷಣ ಕ್ರಮವನ್ನು ಅಳವಡಿಸಿಕೊಂಡಿರುವುದು ಶ್ಲಾಘನೀಯ. ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಮಂಗಳೂರು ವಿವಿ ವ್ಯಾಪ್ತಿಯ ಗಣಿತಶಾಸ್ತ್ರ ಉಪನ್ಯಾಸಕರು ಸೇರಿಕೊಂಡು ಈ ಶೈಕ್ಷಣಿಕ ವರ್ಷದಿಂದ ಉತ್ತಮ ಹೊಸದಾಗಿ ಪಠ್ಯಕ್ರಮವನ್ನು ಹೊರತರುವುದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾದ ವಿಶ್ವ ವಿದ್ಯಾನಿಲಯ ಕಾಲೇಜಿನ ಡಾ| ಚೇತನಾ ಯು.ವಿ. ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

ಸಂಘದ ಕಾರ್ಯದರ್ಶಿ ಡಾ| ಪ್ರೇಮಲತಾ ವಿ. ಸ್ವಾಗತಿಸಿದರು. ಖಜಾಂಚಿ ಪ್ರೊ| ಜೆಫ್ರಿ ರೋಡ್ರಿಗಸ್‌ ವಂದಿಸಿದರು. ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕೀರ್ತಿ ಆಳ್ವ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next