Advertisement

ಪ್ರಭುದೇವ ಹೊಸ ಚಿತ್ರಕ್ಕೆ ಸಂದೇಶ್‌ ನಾಗರಾಜ್ ನಿರ್ಮಾಣ

03:41 PM Feb 06, 2022 | Team Udayavani |

ಖ್ಯಾತ ಬಹುಭಾಷಾ ನಟ ಪ್ರಭುದೇವ ಅಭಿನಯದ ಹೊಸಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿದ್ದು, “ಸಂದೇಶ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸಂದೇಶ್‌ ನಾಗರಾಜ್‌ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

Advertisement

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲಿ ಏಕಕಾಲಕ್ಕೆ ಈ ಚಿತ್ರ ನಿರ್ಮಾಣವಾಗಲಿದ್ದು, ಚಿತ್ರದ ಟೈಟಲ್‌, ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಈಗಾಗಲೇ ಈ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣದ ಕುರಿತು ಮಾತುಕಥೆ ಅಂತಿಮವಾಗಿದ್ದು, ಆದಷ್ಟು ಬೇಗ ಈ ಸಿನಿಮಾದ ಬಗ್ಗೆ ಮಾಹಿತಿ ನೀಡುವುದಾಗಿ ನಿರ್ಮಾಪಕ ಸಂದೇಶ್‌ ನಾಗರಾಜ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಮೌಲಾನರಿಂದ ಉರ್ದು ಕಲಿತಿದ್ದ ಭಾರತ ರತ್ನ ಲತಾ ಮಂಗೇಶ್ಕರ್!

ಈಗಾಗಲೇ ಸಂದೇಶ್‌, ಶಿವರಾಜ್‌ ಕುಮಾರ್‌ ನಟನೆಯಲ್ಲಿ ಸಿನಿಮಾವೊಂದನ್ನು ನಿರ್ಮಿಸಲಿದ್ದು, ಗುರುದತ್‌ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸದ್ಯ ಈ ಸಿನಿಮಾದ ತಯಾರಿಯಲ್ಲಿ ಚಿತ್ರತಂಡ ತೊಡಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next