Advertisement

Prabhas; ಏಪ್ರಿಲ್‌ 10ಕ್ಕೆ ತೆರೆಕಾಣಲಿದೆ ರಾಜಾಸಾಬ್‌

05:49 PM Aug 01, 2024 | Team Udayavani |

ಕೊನೆಗೂ ಪ್ರಭಾಸ್‌ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಕಾರಣ ಬ್ಯಾಕ್‌ ಟು ಬ್ಯಾಕ್‌ ಸಿಕ್ಕ ಗೆಲುವು. “ಬಾಹುಬಲಿ’ ಚಿತ್ರದ ನಂತರ ಸತತ ಸೋಲುಗಳನ್ನೇ ಕಂಡು ಕಂಗೆಟ್ಟಿದ್ದ ಪ್ರಭಾಸ್‌ ಹಾಗೂ ಅವರ ಅಭಿಮಾನಿಗಳಿಗೆ “ಸಲಾರ್‌’ ನಿಂದ ಗೆಲುವಿನ ರುಚಿ ಸಿಕ್ಕಿದೆ. ಅದರ ಬೆನ್ನಲ್ಲೇ ತೆರೆಕಂಡಿರುವ “ಕಲ್ಕಿ’ಯೂ ದೊಡ್ಡ ಗೆಲುವು ಕಂಡಿದೆ.

Advertisement

ಹೀಗಾಗಿ, ಪ್ರಭಾಸ್‌ ಬಗ್ಗೆ ಅನುಮಾನಗೊಂಡಿದ್ದ ನಿರ್ಮಾಪಕರು ಮತ್ತೆ ಖುಷಿಯಾಗಿದ್ದಾರೆ. ಒಂದು ಹೆಜ್ಜೆ ಹಿಂದೆ ಇಟ್ಟಿದ್ದವರು ಮತ್ತೆ ಹೆಜ್ಜೆ ಮುಂದಿಟ್ಟಿದ್ದಾರೆ. ಇದರ ಬೆನ್ನಲ್ಲೇ ಅವರ ಹೊಸ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಅದು “ದಿ ರಾಜಾಸಾಬ್‌’.

ಈ ಚಿತ್ರ ಏಪ್ರಿಲ್‌ 10, 2025ರಂದು ತೆರೆಕಾಣಲಿದೆ. ಚಿತ್ರತಂಡ ಪ್ರಭಾಸ್‌ ಅವರ ಹೊಸ ಲುಕ್‌ ಮೂಲಕ ಡೇಟ್‌ ಅನೌನ್ಸ್‌ ಮಾಡಿದೆ. ಬರೀ ತೆಲುಗಿನಲ್ಲಷ್ಟೇ ಅಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿಯೂ ರಾಜಾಸಾಬ್‌ ಸಿನಿಮಾ ಬಿಡುಗಡೆ ಆಗಲಿದೆ.

ಇದೊಂದು ರೋಮ್ಯಾಂಟಿಕ್‌ ಹಾರರ್‌ ಕಾಮಿಡಿ ಸಿನಿಮಾವಾಗಿದ್ದು, ನಿರ್ದೇಶಕ ಮಾರುತಿ ಈ ಸಿನಿಮಾ ಮೂಲಕ ಪ್ರಭಾಸ್‌ ಅವರನ್ನು ಇನ್ನಷ್ಟು ಸ್ಟೈಲಿಶ್‌ ಲುಕ್‌ನಲ್ಲಿ ತೋರಿಸಲಿದ್ದಾರೆ. ಈಗಾಗಲೇ ಶೇ.40 ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್‌ 2ರಿಂದ ಮತ್ತೂಂದು ಹಂತದ ಶೂಟಿಂಗ್‌ ಪ್ರಾರಂಭವಾಗಲಿದೆ. ಎಸ್‌.ಎಸ್‌.ಥಮನ್‌ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ.

ರಾಮ್‌- ಲಕ್ಷ್ಮಣ್‌ ಮತ್ತು ಕಿಂಗ್‌ ಸೊಲೊಮನ್‌ ಸಾಹಸ ಸಂಯೋಜಿಸುತ್ತಿದ್ದಾರೆ. ಮಾರುತಿ ನಿರ್ದೇಶನದ ರಾಜಾ ಸಾಬ್‌ ಸಿನಿಮಾವನ್ನು ವಿಶ್ವ ಪ್ರಸಾದ್‌ ನಿರ್ಮಾಣ ಮಾಡುತ್ತಿದ್ದಾರೆ. ರಾಜಾ ಸಾಬ್‌ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next