Advertisement

ಮುಂದಿನ ಸಿನಿಮಾಕ್ಕೆ ಲೋಕಲ್‌ ಹೈದನಾದ ಪ್ರಭಾಸ್: ʼThe Raja Saabʼ ಫಸ್ಟ್‌ ಲುಕ್‌ ಔಟ್

11:48 AM Jan 15, 2024 | Team Udayavani |

ಹೈದರಾಬಾದ್: ಡಾರ್ಲಿಂಗ್‌ ಪ್ರಭಾಸ್‌ ʼಸಲಾರ್‌ʼ ಮೂಲಕ ಮತ್ತೆ ಬಹುಬೇಡಿಕೆಯ ನಟನಾಗಿ ಕಾಣಿಸಿಕೊಂಡಿದ್ದಾರೆ. ʼಬಾಹುಬಲಿʼ ಬಳಿಕ ʼಸಲಾರ್‌ʼ ಅವರಿಗೆ ದೊಡ್ಡ ಹಿಟ್‌ ಕೊಟ್ಟಿದೆ. ಇದರ ಬೆನ್ನಲ್ಲೇ ಅವರ ಮುಂದಿನ ಸಿನಿಮಾದ ಫಸ್ಟ್‌ ಲುಕ್‌ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್‌ ಆಗಿದೆ.

Advertisement

ಈ ಹಿಂದೆ ʼಬಲೆ ಬಲೆ ಮಗಾಡಿವೋಯ್ʼ, ʼಮಹಾನುಭಾವುಡುʼ ಮುಂತಾದ ಕೌಟುಂಬಿಕ ಮನರಂಜನೆಯ ಸಿನಿಮಾವನ್ನು ನೀಡಿರುವ ನಿರ್ದೇಶಕ ಮಾರುತಿ ಅವರೊಂದಿಗೆ ಪ್ರಭಾಸ್‌ ಅವರು ತನ್ನ ಮುಂದಿನ ಸಿನಿಮಾವನ್ನು ಮಾಡಲಿದ್ದಾರೆ. ಇದಕ್ಕೆ ʼದಿ ರಾಜಾ ಸಾಬ್‌ʼ ಎಂದು ಟೈಟಲ್‌ ಇಡಲಾಗಿದೆ.

ಕಪ್ಪು ಟಿ-ಶರ್ಟ್, ಲುಂಗಿ ಹಾಕಿಕೊಂಡು ಬಿಂದಾಸ್‌ ಆಗಿ ರಸ್ತೆಯಲ್ಲಿ ಪ್ರಭಾಸ್‌ ನಡೆಯುವುದನ್ನು ಪೋಸ್ಟರ್‌ ನಲ್ಲಿ ತೋರಿಸಲಾಗಿದೆ. ಪ್ರಭಾಸ್‌ ಪಕ್ಕಾ ಲೋಕಲ್‌ ಹೈದನಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ರೊಮ್ಯಾಂಟಿಕ್‌ ಹಾರಾರ್‌ ಸಿನಿಮಾವಾಗಿರಲಿದೆ ಎನ್ನಲಾಗಿದೆ. ಪ್ಯಾನ್‌ ಇಂಡಿಯಾದಲ್ಲಿ ಸಿನಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿಯ ವಿಶ್ವ ಪ್ರಸಾದ್ ಚಿತ್ರವನ್ನು ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಥಮನ್ ಎಸ್ ಸಂಯೋಜಿಸುತ್ತಿದ್ದಾರೆ. ʼಆದಿಪುರುಷ್‌ʼ , ʼವಾರಿಸುʼ ಮುಂತಾದ ಚಲನಚಿತ್ರಗಳಿಗೆ ಸಹ ಛಾಯಾಗ್ರಹಣ ಮಾಡಿರುವ ಕಾರ್ತಿಕ್ ಪಳನಿ ಛಾಯಗ್ರಹಣ ಮಾಡಲಿದ್ದಾರೆ.

ʼದಿ ರಾಜಾ ಸಾಬ್‌ʼ ಇದಕ್ಕೂ ಮೊದಲು ಪ್ರಭಾಸ್‌ ಮಲ್ಟಿಸ್ಟಾರ್ಸ್‌ ಬಿಗ್‌ ಬಜೆಟ್‌ ಸಿನಿಮಾ ʼಕಲ್ಕಿ2898 ಎಡಿʼ ಸಿನಿಮಾದಲ್ಲಿ‌ ಕಾಣಿಸಿಕೊಳ್ಳಲಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next