Advertisement

ಡಿಸೆಂಬರ್‌ನಲ್ಲಿ ಪ್ರಭಾಸ್‌- ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ?

06:45 AM Oct 05, 2017 | |

ಚೆನ್ನೈ: ಬಾಹುಬಲಿ ಸಿನಿಮಾದ ಮೂಲಕ ಚಿತ್ರರಸಿಕರ ಮನಗೆದ್ದಿರುವ ಪ್ರಭಾಸ್‌ ಹಾಗೂ ಅನುಷ್ಕಾ ಶೆಟ್ಟಿ ಇದೀಗ ರಿಯಲ್‌ ಲೈಫ್ ಜೋಡಿಯಾಗಲು ಹೊರಟಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ಮಂಗಳೂರಿನ ಬೆಡಗಿ ಅನುಷ್ಕಾ ಅವರು ಪ್ರಭಾಸ್‌ ಜತೆ ಎಂಗೇಜ್‌ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡ ತೊಡಗಿದೆ.

Advertisement

ವರ್ಷಾಂತ್ಯದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲು ಇವರು ನಿರ್ಧರಿಸಿದ್ದು, ಅದಕ್ಕಾಗಿಯೇ ಅನುಷ್ಕಾ ಅವರು ತೂಕ ಇಳಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರಂತೆ. ಆದರೆ, ಎಂಗೇಜ್‌ಮೆಂಟ್‌ ವಿಚಾರವನ್ನು ಯಾರೂ ಅಧಿಕೃತವಾಗಿ ಹೊರಹಾಕಿಲ್ಲ. ಈ ಹಿಂದೆಯೇ ಈ ಜೋಡಿ ರೊಮ್ಯಾಂಟಿಕ್‌ ಮೂಡ್‌ನ‌ಲ್ಲಿರುವ ಕುರಿತು ಗುಸುಗುಸು ಕೇಳಿಬಂದಿತ್ತು. ಆದರೆ, ಅದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ಪ್ರಭಾಸ್‌-ಅನುಷ್ಕಾ, “ನಮ್ಮ ನಡುವೆ ಅಂಥದ್ದೇನೂ ಇಲ್ಲ. ಮದುವೆಯಾಗುವುದಿದ್ದರೆ ಎಲ್ಲರಿಗೂ ಹೇಳಿಯೇ ಆಗುತ್ತೇವೆ’ ಎಂದು ಹೇಳಿ ಜಾರಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next