Advertisement

ದಿಟ್ಟ ನಡೆಯ ಭಾರತ ಕೋವಿಡ್-19 ಎದುರಿಸಲು ಸಶಕ್ತ

10:10 AM Apr 09, 2020 | Sriram |

ಕೋಟ: ಜಪಾನ್‌ನಂತಹ ಮುಂದುವರಿದ ರಾಷ್ಟ್ರ ಅರ್ಥಿಕ ಕುಸಿತಕ್ಕೆ ಹೆದರಿ ದೇಶವನ್ನು ಲಾಕ್‌ಡೌನ್‌ ಮಾಡಲು ಹಿಂಜರಿದಿರುವ ಸಂದರ್ಭದಲ್ಲಿ ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರವು ಕೊರೊನಾ ಮಾರಿಯಿಂದ ತನ್ನ ಪ್ರಜೆ ಗಳನ್ನು ಕಾಪಾಡಲು ಲಾಕ್‌ಡೌನ್‌ನ ಕಠಿನ ಕ್ರಮ ಕೈಗೊಂಡಿರುವುದು ಪ್ರಶಂಸನೀಯ. ಸವಾಲುಗಳನ್ನೆಲ್ಲ ಎದುರಿಸಿ ನನ್ನ ದೇಶ ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸ ನಮ್ಮೆಲ್ಲ ರದು ಎನ್ನುತ್ತಾರೆ ಜಪಾನ್‌ನ ಅನಿವಾಸಿ ಭಾರತೀಯರು.

Advertisement

ನಾವು ವಿದೇಶದಲ್ಲಿದ್ದರೂ ಭಾರತದ ಕ್ಷಣ-ಕ್ಷಣದ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಗೆ ಸವಾಲಾಗಿರುವ ಕೋವಿಡ್-19 ಮಹಾ ಮಾರಿಯನ್ನು ನಾವೆಲ್ಲ ಒಗ್ಗಟ್ಟಾಗಿ ಗೆಲ್ಲಬೇಕು ಎನ್ನುವ ಮನವಿಯನ್ನು ಜಪಾನ್‌ನ ಪ್ರತಿಷ್ಠಿತ ಮಿಯಜಾಕಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಮನಃಶಾಸ್ತ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಮಾಬುಕಳ ಸಮೀಪ ಹಂಗಾರಕಟ್ಟೆ-ಬಾಳುRದ್ರು ಮೂಲದ ಡಾ| ಹರೀಶ್‌ ಮಧ್ಯಸ್ಥ ಮನವಿ ಮಾಡಿದ್ದಾರೆ.

ಜಪಾನ್‌ನಲ್ಲಿ ಸುಮಾರು 3,817 ಮಂದಿಗೆ ಸೋಂಕು ತಗಲಿದ್ದು 80ಮಂದಿ ಸಾವನ್ನಪ್ಪಿದ್ದಾರೆ. ಈ ದೇಶ ಸಂಪೂರ್ಣವಾಗಿ ತಂತ್ರಜ್ಞಾನ ಆಧಾರ ದಲ್ಲಿ ನಡೆಯುತ್ತಿರುವುದರಿಂದ ಲಾಕ್‌ಡೌನ್‌ ಹೊಡೆತವನ್ನು ತಡೆದುಕೊಳ್ಳುವ ಸ್ಥಿತಿಯಲಿಲ್ಲ. ಆದರೆ ಭಾರತದಲ್ಲಿನ ನೈಸರ್ಗಿಕ ಸಂಪನ್ಮೂಲ ನನ್ನ ದೇಶಕ್ಕೆ ಕೋವಿಡ್-19 ಹೊಡೆತವನ್ನು ಎದುರಿಸುವ ಶಕ್ತಿಯನ್ನು ನೀಡಿದೆ ಎನ್ನುತ್ತಾರೆ ಅವರು.

ಜಪಾನ್‌ನಲ್ಲಿ ಶಾಲೆ-ಕಾಲೇಜು ಗಳನ್ನು ಸೋಂಕಿನ ಕಾರಣಕ್ಕೆ ಫೆಬ್ರವರಿ ಯಲ್ಲೇ ಮುಚ್ಚಲಾಗಿದೆ. ಸಾಮೂಹಿಕ ಸಾರಿಗೆ, ವಿಮಾನಯಾನ ಕೂಡ ಬಹುತೇಕ ಸ್ಥಗಿತಗೊಂಡಿದೆ. ಜನರು ಅಗತ್ಯವಿದ್ದರೆ ಮಾತ್ರ ಹೊರಬರುತ್ತಾರೆ ಹಾಗೂ ಸ್ವಯಂ ನಿಯಂತ್ರಣದ ಮೂಲಕ ಸೋಂಕಿನಿಂದ ದೂರವಾಗುತ್ತಿದ್ದಾರೆ. ಭಾರತದ ಸಂಪ್ರದಾಯ, ಜನಜೀವನವನ್ನು ಜಪಾನಿಗರು ಬಹಳ ವಾಗಿ ಇಷ್ಟಪಡುತ್ತಾರೆ. ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ದಿಟ್ಟ ಕ್ರಮಗಳನ್ನು ಇಲ್ಲಿನ ಪ್ರಜೆಗಳು ಮಾಧ್ಯಮಗಳ ಮೂಲಕ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ನಾವು ಮಾದರಿ ನಡೆಯ ಮೂಲಕ ನಮ್ಮ ಗೌರವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿದೆ.

ವಿದ್ಯಾರ್ಥಿಗಳಿಗೆ ಸಮಸ್ಯೆ
ಭಾರತ ಲಾಕ್‌ಡೌನ್‌ನಿಂದ ಜಪಾನ್‌ನಲ್ಲಿರುವ ಭಾರತೀಯರಿಗೆ ದೊಡ್ಡ ಮಟ್ಟದ ಸಮಸ್ಯೆಯಾಗಿಲ್ಲ. ಆದರೆ ಅಧ್ಯಯನಕ್ಕಾಗಿ ಇಲ್ಲಿಗೆ ಬಂದಿದ್ದ ಕೆಲವು ಭಾರತೀಯ ವಿದ್ಯಾರ್ಥಿಗಳಿಗೆ ಸ್ವದೇಶಕ್ಕೆ ಮರಳಲು ಸಮಸ್ಯೆಯಾಗಿತ್ತು. ಅವರು ಪ್ರಸ್ತುತ ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ ವಾಸ್ತವ್ಯ ಹೂಡಿದ್ದ ಸಮಸ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬಂದ ಮೇಲೆ ತೆರಳಲಿದ್ದಾರೆ.

Advertisement

ಪ್ರತಿಯೊಬ್ಬನ ಕರ್ತವ್ಯ
ಭಾರತ ದೇಶ ತನ್ನ ಪ್ರಜೆಗಳ ಕ್ಷೇಮಕ್ಕಾಗಿ ಲಾಕ್‌ಡೌನ್‌ನಂತಹ ದೊಡ್ಡ ಸಾಹಸಕ್ಕೆ ಕೈಹಾಕಿದೆ. ಜತೆಗೆ ಅಗತ್ಯ ಪರಿಹಾರ ಕ್ರಮಗಳನ್ನೂ ಕೈಗೊಂಡಿದೆ. ಈ ಕಾಲಘಟ್ಟದಲ್ಲಿ ದೇಶದ ಜತೆ ಕೈಜೋಡಿಸುವುದು, ಕಾಯಿಲೆ ಹರಡದಂತೆ ಎಚ್ಚರಿಕೆ ವಹಿಸುವುದು ಪ್ರತಿಯೊಬ್ಬನ ಕರ್ತವ್ಯ.
– ಹರೀಶ್‌ ಮಧ್ಯಸ್ಥ, ಜಪಾನ್‌

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next