ಬೆಳ್ತಂಗಡಿ: ನೆರೆ ಹಾವಳಿಯಿಂದ ಬೆಳ್ತಂಗಡಿ ತಾ|ಗೆ ಹಿಂದೆಂದೂ ಕೇಳರಿಯದ ಹೊಡೆತ ಬಿದ್ದಿದೆ. ಸಂತ್ರಸ್ತರ ಕೈಹಿಡಿಯುವಲ್ಲಿ ಸರಕಾರದ ಜತೆ ಸಂಘ-ಸಂಸ್ಥೆ-ದಾನಿಗಳು ನೆರವಾಗಿದ್ದಾರೆ. ಅಶಕ್ತರಿಗೆ ಶಕ್ತಿ ಕೊಡುವ ಮೂಲಕ ಔಷಧಿ ವ್ಯಾಪಾರಸ್ಥರ ಸಂಘವು ಸಹಾಯಕ್ಕೆ ನಿಂತಿರುವುದು ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಬುಧವಾರ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ವರ್ಲ್ಡ್ ಫಾರ್ಮಸಿ ಡೇ ಆಚರಣೆ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ನೆರೆ ಸಂತ್ರಸ್ತರಿಗೆ ನೀಡಲಾದ ಕಪಾಟಿನ ಕೀ ಹಸ್ತಾಂತರ ಮಾಡಿ ಅವರು ಮಾತನಾಡಿ, ಔಷಧಿ ವ್ಯಾಪಾರಸ್ಥರ ಸಂಘವು ಕಟ್ಟಡ ನಿರ್ಮಿಸುವುದಾದಲ್ಲಿ ವಿಧಾನ ಪರಿಷತ್ ನಿಧಿಯಿಂದ ಸಹಾಯ ನೀಡಲು ಬದ್ಧ ಎಂದು ತಿಳಿಸಿದರು..
ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಕಾರ್ಯಕ್ರಮ ಉದ್ಘಾಟಿಸಿ, ತಾಲೂಕಿನಲ್ಲಿ ಉಂಟಾದ ಅನಾಹುತದ ಸಮಯದಲ್ಲಿ ಅಡಳಿತ ವರ್ಗದೊಂದಿಗೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಅಭೂತಪೂರ್ವವಾಗಿ ಸ್ಪಂದಿಸಿವೆ. ಸಂಪಾದಿಸಿದ ಅಲ್ಪ ಮೊತ್ತವನ್ನು ಸಮಾಜ ಕ್ಕೋಸ್ಕರ ವಿನಿಯೋಗಿಸಿ ಎಂದರು.ಸಮುದಾಯ ಆ. ಕೇಂದ್ರದ ಮಕ್ಕಳ ತಜ್ಞೆ ಡಾ| ಪ್ರತ್ಯೂಷಾ ಶುಭ ಹಾರೈಸಿದರು.
ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಗದೀಶ್ ಡಿ. ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಕೇಶವ ಭಟ್, ಪ್ರಧಾನ ಕಾರ್ಯದರ್ಶಿ ಸುಜೀತ್ ಭಿಡೆ, ಕೋಶಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು.ಸಂಘದ ವತಿಯಿಂದ ಹಿರಿಯ ಔಷಧ ಅಂಗಡಿ ಗುರುತಿಸಿ ಮಾಲಕರನ್ನು ಗೌರವಿಸಲಾಯಿತು.
ಉದಯ್ ಕುಮಾರ್, ಗುರುರಾಜ್ ಪಡ್ವೆಟ್ನಾಯ ಸಮ್ಮಾನಪತ್ರ ವಾಚಿಸಿದರು. ನಿವೃತ್ತ ಮುಖ್ಯೋಪಾದ್ಯಾಯ ಲಕ್ಷ್ಮ¾ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
25 ಕಪಾಟು ವಿತರಣೆ
ತಾಲೂಕಿನ 51 ಮಂದಿ ಔಷಧ ವ್ಯಾಪಾರಸ್ಥರಿಂದ ಸಂಗ್ರಹಿಸಿದ ಮೊತ್ತದಿಂದ ತಾಲೂಕಿನ ನೆರೆ ಸಂತ್ರಸ್ತ ಪ್ರದೇಶವಾದ ಚಾರ್ಮಾಡಿ, ಇಂದಬೆಟ್ಟು, ಪುದುವೆಟ್ಟು, ಲಾೖಲ ಪ್ರದೇಶದ 25 ಮಂದಿಗೆ ಕಪಾಟು ವಿತರಿಸಲಾಯಿತು.