Advertisement

ಮಾಸಾಂತ್ಯದಲ್ಲಿ  ಎಲ್ಲ ಮನೆಗಳಿಗೂ ವಿದ್ಯುತ್‌

12:55 AM Jan 21, 2019 | Team Udayavani |

ಹೊಸದಿಲ್ಲಿ: ಜನವರಿ ತಿಂಗಳ ಅಂತ್ಯದೊಳಗೆ ದೇಶದ ಎಲ್ಲ ಕುಟುಂಬಗಳೂ ವಿದ್ಯುತ್‌ ಪಡೆಯ ಲಿವೆ. ಕೇಂದ್ರ ಸರಕಾರದ ಮಹತ್ವಾ ಕಾಂಕ್ಷಿ ಯೋಜನೆಯಾಗಿರುವ ಸೌಭಾಗ್ಯ ಯೋಜನೆ ಅಡಿ 2.48 ಕೋಟಿ ಕುಟುಂಬಗಳಿಗೆ ವಿದ್ಯುತ್‌ ಒದ ಗಿಸುವ ಗುರಿ ಹಾಕಿಕೊಳ್ಳಲಾಗಿತ್ತು. 16,300 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಈಗಾಗಲೇ 2.44 ಕೋಟಿ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ.

Advertisement

ಪ್ರತಿನಿತ್ಯ 30 ಸಾವಿರ ಕುಟುಂಬ ಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸ ಲಾಗುತ್ತಿದೆ. ಹೀಗಾಗಿ ಉಳಿದ ನಾಲ್ಕು ಲಕ್ಷ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸವು ಈ ತಿಂಗ ಳೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೌಭಾಗ್ಯ ಯೋಜನೆ ಅಡಿಯಲ್ಲಿ ಎಲ್ಲ ಕುಟುಂಬಗಳಿಗೆ ವಿದ್ಯುತ್‌ ಒದಗಿಸಲು 2019ರ ಮಾ. 31ರ ವರೆಗೆ ಸಮಯವಿದೆ. ಆದರೆ 2018ರ ಡಿಸೆಂಬರ್‌ ಒಳಗೆ ಈ ಯೋಜನೆ ಪೂರ್ಣಗೊಳಿಸಲು ಇಂಧನ ಇಲಾಖೆ ಸ್ವಯಂ ಗುರಿ ಹಾಕಿಕೊಂಡಿತ್ತು.

ಕೆಲವೆಡೆ ಚುನಾ ವಣೆ ಮತ್ತು ನಕ್ಸಲ್‌ ಸಮಸ್ಯೆಯಿಂದಾಗಿ ವಿಳಂಬ ವಾಯಿತು. ಕೆಲವು ರಾಜ್ಯಗಳಲ್ಲಿ  ಗುತ್ತಿಗೆ ದಾರರ ಸಮಸ್ಯೆಯನ್ನೂ ಎದು ರಿಸ ಬೇಕಾ ಯಿತು ಎಂದು ಅಧಿ ಕಾರಿ ಗಳು ಹೇಳಿ ದ್ದಾರೆ. ಸೌಭಾಗ್ಯ ಪೋರ್ಟಲ್‌ನಲ್ಲಿ ರುವ ಮಾಹಿತಿಯ ಪ್ರಕಾರ ಅಸ್ಸಾಂ, ರಾಜಸ್ಥಾನ, ಮೇಘಾಲಯ, ಛತ್ತೀಸ್‌ ಗಢ ದಲ್ಲಿ 3.58 ಲಕ್ಷ ಕುಟುಂಬ ಗಳಿಗೆ ವಿದ್ಯುತ್‌ ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next