Advertisement

ದೋಸ್ತಿಯ ಹಾಡಿಗೆ ಪವರ್ ಸಾಥ್

09:47 AM Nov 16, 2019 | mahesh |

ಮೋಹನ್‌ ಸದ್ದಿಲ್ಲದೆಯೇ ಮತ್ತೂಂದು ಚಿತ್ರ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆ ಚಿತ್ರದ ಹೆಸರು “ಜಿಗ್ರಿ ದೋಸ್ತ್’. ಈ ಚಿತ್ರವನ್ನು ಗಂಗಾಧರ್‌ ನಿರ್ಮಿಸಿದ್ದಾರೆ. ಹೊಸಬರನ್ನೇ ಹಾಕಿ ಮಾಡಿರುವ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ನಿರ್ಮಾಪಕರು ಪತ್ರಕರ್ತರನ್ನು ಆಹ್ವಾನಿಸಿದ್ದರು. ಅಂದಿನ ಮುಖ್ಯ ಆಕರ್ಷಣೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಪುನೀತ್‌ ರಾಜಕುಮಾರ್‌. ಅವರ ಸಮ್ಮುಖದಲ್ಲೇ ಟ್ರೇಲರ್‌, ಸಾಂಗ್‌ ಬಿಡುಗಡೆಯಾದ ಬಳಿಕ ನಿರ್ದೇಶಕ ಮೋಹನ್‌ ಮಾತಿಗಿಳಿದರು.

Advertisement

“ಚಿತ್ರದ ಶೀರ್ಷಿಕಗೆ ಬಗ್ಗೆ ಹೇಳುವುದಾದರೆ, ಜೇಬಲ್ಲಿ ಹಣ ಇದ್ದಾಗ ಇರುವ ಕೆಲವು ಸ್ನೇಹಿತರು, ಹಣ ಇಲ್ಲದಿರುವಾಗ ಇರುವುದಿಲ್ಲ. ಅಂತಹ ಗೆಳೆಯರನ್ನು ಸಂಪಾದಿಸುವುದಕ್ಕಿಂತ ಒಬ್ಬ ಜಿಗ್ರಿದೋಸ್ತ್ನನ್ನು ಸಂಪಾದಿಸಿದರೆ ಲೈಫ್ ಹೇಗೆಲ್ಲಾ ಇರುತ್ತೆ ಎಂಬುದು ಚಿತ್ರದ ಒನ್‌ಲೈನ್‌. ಚಿತ್ರದಲ್ಲಿ ಸ್ಕಂದ ಅಶೋಕ್‌ ಲಾಯರ್‌ ಪಾತ್ರ ಮಾಡಿದರೆ, ಚೇತನ್‌ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದಾರೆ. ಸುಷ್ಮಾ, ಅಕ್ಷತಾ ನಾಯಕಿಯರಾಗಿದ್ದಾರೆ. ಚಿತ್ಕಲ ಅವರು ತಾಯಿ ಪಾತ್ರ ಮಾಡಿದ್ದಾರೆ. ಇಲ್ಲಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಜಡ್ಜ್ ಪಾತ್ರ ಮಾಡಿದ್ದಾರೆ. ಅವರೂ ಕಾನೂನು ಓದಿದವರು. ಹಾಗಾಗಿ, ಪಾತ್ರವನ್ನು ನೀಟ್‌ ಆಗಿ ನಿರ್ವಹಿಸಿದ್ದಾರೆ. ಇನ್ನು, ನಿರ್ಮಾಪಕ ಗಂಗಾಧರ್‌ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರ ಮನೆ ಕೂಸು ಇದ್ದಂಗೆ ನಾನು. ಅವರ ಜೊತೆ ಯಾವಾಗಲೂ ಒಂದೊಂದು ಕೆಲಸ ನಡೆಯುತ್ತಲೇ ಇರುತ್ತದೆ. ಇಷ್ಟರಲ್ಲೆ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಪ್ರೋತ್ಸಾಹಿಸಿ’ ಎಂದರು ಮೋಹನ್‌.

ಅಂದು ಪುನೀತ್‌ ಆ ಕಾರ್ಯಕ್ರಮಕ್ಕೆ ಬರಲು ಕಾರಣದ ಬಗ್ಗೆ ಹೇಳಿದರು. “ನಾನು ಬರೋಕೆ ಕಾರಣ, ನಿರ್ಮಾಪಕ ಗಂಗಾಧರ್‌ ಅವರು. ಅವರು ನಮ್ಮ ಕುಟುಂಬಕ್ಕೆ ಹತ್ತಿರವಾದವರು. ನಮ್ಮ ತಾಯಿಗೆ ಚಿಕ್ಕ ಕೆಲಸವಿದ್ದರೂ ಗಂಗಾಧರ್‌ ನಮ್ಮ ಕಚೇರಿಗೆ ಬರುತ್ತಿದ್ದರು. ಆ ಅಭಿಮಾನಕ್ಕೆ ಬಂದಿದ್ದೇನೆ. ಅವರು 27 ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಪೈಕಿ ಎಲ್ಲವೂ ಒಳ್ಳೆಯ ಚಿತ್ರಗಳೇ ಎಂಬುದು ವಿಶೇಷ. ಚಿತ್ರಕ್ಕೆ ಯಶಸ್ಸು ಬರಲಿ. ಹೊಸಬರಿಗೆ ಗೆಲುವು ಸಿಗಲಿ’ ಎಂಬುದು ಪುನೀತ್‌ ಮಾತು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಲ್ಲಿ ಮಾಡಿರುವ ಜಡ್ಜ್ ಪಾತ್ರ ಬಗ್ಗೆ ಹೇಳಿಕೊಂಡರು. “ನನಗೂ ಸಿನಿಮಾ ಆಸೆ ಇತ್ತು. ಆದರೆ, ಮಾಡಲು ಆಗಿರಲಿಲ್ಲ. 40 ವರ್ಷದ ಬಳಿಕ ನಟಿಸಿದ ಖುಷಿ ಇದೆ. ಚಿತ್ರ ಬಿಡುಗಡೆಯಾಗಿ, ಎಲ್ಲರೂ ನೋಡುವಂತಾಗಲಿ’ ಎಂದರು ಜಯಚಂದ್ರ.

ಲಹರಿ ವೇಲು ಅವರಿಗೆ, ಗಂಗಾಧರ್‌ ಬ್ಯಾನರ್‌ನ ಸಿನಿಮಾಗಳ ಬಗ್ಗೆ ಹೆಮ್ಮೆ ಇದೆಯಂತೆ. “27 ಸಿನಿಮಾ ನಿರ್ಮಾಣ ಸುಲಭವಲ್ಲ. ಗಂಗಾಧರ್‌ ಆ ಕೆಲಸ ಮಾಡಿದ್ದಾರೆ. “ಅಂಜದ ಗಂಡು’ ಚಿತ್ರಕ್ಕೆ ಇದೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅಗ್ರಿಮೆಂಟ್‌ಗೆ ಸಹಿ ಮಾಡಿದ್ದೆ. ಆ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಬಳಿಕ ಅವರ ಅನೇಕ ಚಿತ್ರಗಳ ಹಾಡು ಹಕ್ಕು ಖರಿದಿಸಿದ್ದೇವೆ’ ಎಂದರು ವೇಲು.

Advertisement

ನಾಯಕ ಚೇತನ್‌ ಅವರಿಗೆ ಇಲ್ಲೊಂದು ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರ ಸಿಕ್ಕಿದೆಯಂತೆ. “ಚಿತ್ರ ನೋಡಿದವರಿಗೆ ಗೆಳೆತನ ಹೇಗಿರಬೇಕು ಎಂಬುದು ಗೊತ್ತಾಗುತ್ತೆ. ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ನಾನು ಥ್ಯಾಂಕ್ಸ್‌ ಹೇಳ್ತೀನಿ’ ಎಂದರು ಚೇತನ್‌. ಅಂದು ನಿರ್ಮಾಪಕ ಗಂಗಾಧರ್‌, ಸಂಗೀತ ನಿರ್ದೇಶಕ ದಿನೇಶ್‌ ಕುಮಾರ್‌ ಸಿನಿಮಾ ಕುರಿತು ಮಾತನಾಡಿದರು. ಸುಷ್ಮಾ, ಅಕ್ಷತಾ, ಚಿತ್ಕಲ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next