Advertisement

ಕೇಂದ್ರ ಬಜೆಟ್ : ಜನರಿಗೆ ಸಿಗುತ್ತೇ ಇನ್ನು ಪವರ್‌ ಆಯ್ಕೆ

11:58 PM Feb 01, 2021 | sudhir |

ಸಾರ್ವಜನಿಕ ಮತ್ತು ಖಾಸಗಿ ವಿದ್ಯುತ್‌ ವಿತರಣ ಕಂಪನಿಗಳ ಏಕಸ್ವಾಮ್ಯತೆ ತಪ್ಪಿಸಿ ಪೈಪೋಟಿಗೆ ಉತ್ತೇಜನ ನೀಡಲು ಗ್ರಾಹಕರಿಗೆ ಅನಿರ್ಬಂಧಿತ ಮತ್ತು ನಿರಂತರ ವಿದ್ಯುತ್‌ ಪೂರೈಸಬೇಕಾಗಿದೆ ಎಂದು ಪ್ರತಿಪಾದಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇದಕ್ಕಾಗಿ “ಗ್ರಾಹಕರು ತಮಗಿಷ್ಟದ ವಿದ್ಯುತ್‌ ಪ್ರಸರಣ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ಯೋಜನೆಯೊಂದನ್ನು ಘೋಷಿಸಿದ್ದಾರೆ. ಜೊತೆಗೆ ದೇಶದ ವಿದ್ಯುತ ವಿತರಣಾ ಕಂಪನಿಗಳ (ಡಿಸ್ಕಾಂ) ಮೂಲ ಸೌಕರ್ಯಗಳ ಸೃಜನೆಗೆ ಯೋಜನೆ ಪ್ರಾರಂಭಿಸುವುದಾಗಿ ಹೇಳಿರುವ ವಿತ್ತ ಸಚಿವೆ, ಇದಕ್ಕಾಗಿ 5 ವರ್ಷದ ಅವಧಿಗೆ 3,05,984 ಕೋಟಿ ರೂ. ಒದಗಿಸಲಾಗುವುದು ಎಂದಿದ್ದಾರೆ.

Advertisement

ವಿದ್ಯುತ್‌ ಕ್ಷೇತ್ರದಲ್ಲಿ ಕಳೆದ 6 ವರ್ಷಗಳ ಸುಧಾರಣೆ ಮತ್ತು ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು, ಸ್ಥಾಪನಾ ಸಾಮರ್ಥಯಕ್ಕೆ 139 ಗಿಗಾ ವ್ಯಾಟ್‌ ಸೇರಿಸಲು, ಅದರಿಂದ ಹೆಚ್ಚುವರಿ 2.9 ಕೋಟಿ ಕುಟುಂಬಗಳನ್ನು ವಿದ್ಯುತ್‌ ಸಂಪರ್ಕ ಒದಗಿಸುವ ಮತ್ತು ಪ್ರಸರಣ ಮಾರ್ಗಗಳಿಗೆ 1.41 ಲಕ್ಷ ಸರ್ಕಿಟ್‌ ಕಿ.ಮೀ. ಸೇರಿಸುವ ಉದ್ದೇಶ ಹೊಂದಲಾಗಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ 3ನೇ ಮರು ಹೂಡಿಕೆ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಹಸಿರು ವಿದ್ಯುತ್‌ ಮೂಲಗಳಿಂದ ಹೈಡ್ರೋಜನ್‌ ಉತ್ಪಾದನೆಗೆ 2021-21ನೇ ಸಾಲಿನಲ್ಲಿ “ಹೈಡ್ರೋಜನ್‌ ಎನರ್ಜಿ ಮಿಷನ್‌’ ಸ್ಥಾಪನೆಗೆ ಬಜೆಟ್‌ನಲ್ಲಿ ಪ್ರಾಸ್ತಾಪಿಸಲಾಗಿದೆ.

ಇದನ್ನೂ ಓದಿ:ಆರೋಗ್ಯಕ್ಕೆ ದಾಖಲೆ ಅನುದಾನದ ಭಾಗ್ಯ

ಏಕ ಭದ್ರತಾ ಮಾರು ಕಟ್ಟೆ
ಸೆಬಿ ಕಾಯ್ದೆ-1992, ಠೇವಣಿದಾರ ಕಾಯ್ದೆ-1996, ಭದ್ರತೆಗಳ ಒಪ್ಪಂದ (ನಿಯಂತ್ರಣ) ಕಾಯ್ದೆ 1956 ಹಾಗೂ ಸರ್ಕಾರದ ಭದ್ರತೆಗಳ ಕಾಯ್ದೆ-2007 ಇವುಗಳ ನಿಬಂಧನೆಗಳನ್ನು ಕ್ರೋಢೀಕರಿಸಿ “ಕೇಂದ್ರೀಕೃತ ಏಕ ಭದ್ರತಾ ಮಾರುಕಟ್ಟೆ ಕೋಡ್‌’ಗೆ ತರಲು ವಿತ್ತ ಸಚಿವರು ಪ್ರಸ್ತಾಪಿಸಿದ್ದಾರೆ. ಹೂಡಿಕೆದಾರರ ಹಿತರಕ್ಷಣೆಗೆ ಎಲ್ಲಾ ಬಗೆಯ ಆರ್ಥಿಕ ಉತ್ಪನ್ನಗಳ ಎಲ್ಲಾ ಬಂಡವಾಳ ಹೂಡಿಕೆ ದಾರರಿಗೆ ಅನ್ವಯವಾಗುವಂತೆ “ಇನ್ವೆಸ್ಟರ್‌ ಚಾರ್ಟರ್‌’ ಪರಿಚಯಿಸಲು ವಿತ್ತ ಸಚಿವರು ಪ್ರಸ್ತಾಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next