ಚಿಕ್ಕಮಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಮಾ.16 ರ ಮಂಗಳವಾರ ಸಂಜೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆಗೆ ಬಂದಿದ್ದ ಪುನೀತ್, ತಮ್ಮ ಕುಟುಂಬದವರೊಂದಿಗೆ ಕಾಲ ಕಳೆಯುವ ಮೂಲಕ ತಮ್ಮ ಮಾ. 17 ರಂದು ಜನ್ಮದಿನವನ್ನು ಆಚರಿಸಿಕೊಂಡರು.
ಇದನ್ನೂ ಓದಿ:ಸೇವೆ ಆರಂಭದ ಹುಮ್ಮಸ್ಸು ನಿವೃತ್ತಿವರೆಗೂ ಇರಲಿ
ತಮ್ಮ ಹುಟ್ಟುಹಬ್ಬದ ನಿಮಿತ್ತ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಇಲ್ಲಿನ ಉರ್ವಿಖಾನ್ ರೆಸಾರ್ಟ್ನಲ್ಲಿ ಕುಟುಂಬ ಸದಸ್ಯರ ಜೊತೆ ಉಳಿದುಕೊಂಡಿದ್ದು, ಈ ನಡುವೆ ಅಭಿಮಾನಿಗಳ ಜೊತೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
ಮಾ. 17 ರಂದು ಪ್ರತಿವರ್ಷ ಪುನೀತ್ ರಾಜಕುಮಾರ್ ಜನ್ಮದಿನವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ ವರ್ಷದಿಂದ ಪುನೀತ್ ರಾಜಕುಮಾರ್ ಅದ್ಧೂರಿ ಜನ್ಮದಿನಕ್ಕೆ ಕೊರೋನಾ ಅಡ್ಡಿಯಾಗಿದೆ. ಈ ಭಾರಿಯೂ ಪುನೀತ್ ರಾಜಕುಮಾರ್ ತಮ್ಮ ಅಭಿಮಾನಿಗಳಿಗೆ ಮನೆಯಿಂದ ಹೊರಬಂದು ಸಾರ್ವಜನಿಕವಾಗಿ, ಅದ್ಧೂರಿ ಬರ್ತ್‌ಡೇ ಸಂಭ್ರಮ ಆಚರಿಸದಂತೆ ಮನವಿ ಮಾಡಿದ್ದರು.