ಮಾಲೂರು: ವಿದ್ಯುತ್ ಸ್ಪರ್ಶಿಸಿ ಕಂಬಕ್ಕೆ ಹತ್ತಿದ್ದ ಲೈನ್‌ಮೆನ್ ನೆಲಕ್ಕೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿ ರುವ ಘಟನೆ ಮಿಂಡಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಹದೇವ (28) ಮೃತ ಲೈನ್‌ಮೆನ್. ಭಾನು ವಾರವಾದ್ದರಿಂದ ಶಿವಾರಪಟ್ಟಣದ ಬೆಸ್ಕಾಂ ಉಪಕೇಂದ್ರದ ತ್ರೈಮಾಸಿಕ ನಿರ್ವಹಣೆಗಾಗಿ ಬೆಳಗ್ಗೆ 9ರಿಂದ ಸಂಜೆ 6ರವರೆಗೂ ವಿದ್ಯುತ್ ನಿಲುಗಡೆ ಮಾಡಿ ದುರಸ್ಥಿ ಪಡಿಸಲು ಯೋಜನೆ ರೂಪಿಸ ಲಾಗಿತ್ತು. ಅದರಂತೆ ಈ ಭಾಗದ ಲೈನ್‌ಮೆನ್‌ಗಳು ದುರಸ್ಥಿ ಕಾರ್ಯದಲ್ಲಿದ್ದರು.
ಈ ವೇಳೆ ವಿದ್ಯುತ್ ಅನ್ನು ಸಂಪೂVರ್ಣವಾಗಿ ನಿಲುಗಡೆ ಮಾಡಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಮಿಂಡಹಳ್ಳಿ ಗ್ರಾಮದ ಗೇಟ್ಬಳಿಯಲ್ಲಿನ ಸೆಕೆಂಡರಿ ಫೀಡರ್‌ನ ಬಳಿ ನಿರ್ವಹಣೆಗಾಗಿ ಕಂಬ ಹತ್ತಿದ್ದ ಮಹದೇವಗೆ ಏಕಾಎಕಿ ವಿದ್ಯುತ್ ಸ್ಪರ್ಶಿಸಿ ನೆಲೆಕ್ಕೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಫೀಡರ್‌ನಲ್ಲಿ ಸಂಪೂರ್ಣವಾಗಿ ವಿದ್ಯುತ್ ನಿಲುಗಡೆ ಮಾಡಿದ್ದರೂ ವಿದ್ಯುತ್ ಸ್ಪರ್ಶದ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು, ಸ್ಥಳೀಯವಾಗಿ ರುವ ಯಾವುದೋ ಕಾರ್ಖಾನೆಯ ಜನರೇಟರ್‌ನಿಂದ ವಿದ್ಯುತ್ ಪ್ರಸರVಣವಾಗಿ ಲೈನ್‌ಮೆನ್‌ಗೆ ಮೃತ ಪಟ್ಟಿರುವ ಸಾಧ್ಯತೆ ವ್ಯಕ್ತಪಡಿಸಿದ್ದಾರೆ.
ಸುರಕ್ಷತಾ ಸಾಮಗ್ರಿ ಬಳಕೆ ಆಗಿಲ್ಲ: ವಿದ್ಯುತ್ ಕಂಬಗಳಿಗೆ ಹತ್ತಿ ದುರಸ್ಥಿಪಡಿಸುವ ವೇಳೆ ಲೈನ್‌ಮೆನ್‌ಗಳ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಸುರಕ್ಷಾ ಸಾಮಗ್ರಿಗಳನ್ನು ಇಲಾಖೆ ನೀಡಿದೆ. ಆ ಪೈಕಿ ತಲೆಗೆ ಹಾಕುವ ಹೆಲ್ಮೆಟ್‌ನಲ್ಲಿ ಬಜರ್ ಅಳವಡಿಸಲಾಗಿರು ತ್ತದೆ. ಒಂದು ವೇಳೆ ಆಕಸ್ಮಿಕವಾಗಿ ತಂತಿಯಲ್ಲಿ ವಿದ್ಯುತ್ ಪ್ರಸರVಣವಾದಲ್ಲಿ ತಲೆಯ ಮೇಲಿರುವ ಸೆನ್ಸಾರ್ ವಿದ್ಯುತ್ ಪ್ರಸರVಣದ ಸೂಚನೆ ನೀಡುವ ಸಲುವಾಗಿ ಶಬ್ಧ ಮಾಡಲಿದೆ. ಅದರೊಟ್ಟಿಗೆ ತಂತಿ ಮುಟ್ಟುವ ವೇಳೆ ಕಡ್ಡಾಯವಾಗಿ ಕೈಕವಚ ಧರಿಸ ಬೇಕು. ಆದರೆ, ದುರಸ್ಥಿ ವೇಳೆ ಇಂತಹ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಾಯದ ಕೆಲಸಗಳ ವೇಳೆ ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರಬೇಕು. ಅವಘಡ ಸಂಭವಿಸಿದ ವೇಳೆಯಲ್ಲಿ ರಂಗಪ್ಪ ಎಂಬ ಹಿರಿಯ ಲೈನ್‌ಮೆನ್ ಹೊರತು ಪಡಿಸಿ ಯಾವುದೇ ಅಧಿ ಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಬಾಗಲಕೋಟೆ ಮೂಲದ ಮಹದೇವ ಕಳೆದ ಐದಾರು ವರ್ಷ ಗಳಿಂದ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಸಹಾಯಕ ಕಾರ್ಯಪಾಲಕ ಅಭಿಯಂತರ ಅನ್ಸರ್‌ಪಾಷಾ, ಶಿವಾರಪಟ್ಟಣದ ಉಪವಿಭಾಗದ ಜೆಇ ನಿರ್ಮಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಅನ್ಸರ್‌ಪಾಷಾ ಮಾತನಾಡಿ, ನೌಕರನ ಸಾವಿಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿ ಜೊತೆ ಜನರೇಟರ್ ಚಾಲನೆ ಮಾಡಿರುವ ಕಂಪನಿ ಮೇಲೆಯೂ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸುವು ದಾಗಿ ತಿಳಿಸಿದ್ದಾರೆ.