ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ನಿಯೋಗ ತೆರಳಿ ವಿದ್ಯುತ್ ಖರೀದಿಗೆ ಸಿದ್ಧವಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
Advertisement
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಡಿಯೂರಪ್ಪ ಅವರು ಪ್ರತಿ ಯುನಿಟ್ ವಿದ್ಯುತ್‌ನ್ನು 2.5ರೂ. ದರದಲ್ಲಿ ನೀಡಲು ಕೇಂದ್ರ ಸಿದಟಛಿವಿದೆ. ಆದರೆ ರಾಜ್ಯ ಸರ್ಕಾರ ಖರೀದಿಸಲು ಮುಂದಾಗುತ್ತಿಲ್ಲ ಎನ್ನುವ ಹೇಳಿಕೆ ಜನತೆಯ ದಾರಿತಪ್ಪಿಸುವ ಕೆಲಸ. ಇಷ್ಟೊಂದು ಕಡಿಮೆ ದರದಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ನೀಡುತ್ತಿದ್ದರೆ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಹೀಗಾಗಿ ಇತರ ಕಡೆಯಿಂದ ಖರೀದಿಸುತ್ತಿರುವುದನ್ನು ರದ್ದುಗೊಳಿಸಿ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.