Advertisement
ಸೋಮವಾರ ಬೆಳಗ್ಗಿನಿಂದಲೇ ಹೆದ್ದಾರಿ ಬದಿಯಲ್ಲಿರುವ ಕಾಪಿಕಾಡ್ ಅಂಬಿಕಾ ರಸ್ತೆಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದರೆ, ಅದರ ಪಕ್ಕದಲ್ಲಿರುವ ಸಾಯಿಗ್ರ್ಯಾಂಡ್ ವ್ಯೂವ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು.
ಹೆದ್ದಾರಿ ಅಕ್ಕಪಕ್ಕದಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೊದಲು ಕಾರ್ಯಕರ್ತರು ಸೇರಿದ್ದರಿಂದ ತೊಕ್ಕೊಟ್ಟು ಕಡೆಯಿಂದ ಬಂದ ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿ ಕಾರ್ಯಕರ್ತರಿದ್ದಲ್ಲಿ ಬಂದಾಗ ಬಿಜೆಪಿ ಧ್ವಜ ಕಂಡು ಹಿಂದೆ ಹೋದರು. ಇದೇ ರೀತಿ ಕಾರ್ಯಕರ್ತರು ಸ್ಥಳ ಬದಲಾವಣೆಯಾಗಿ ಬಿಜೆಪಿ ಕೇಂದ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಂದು ಹಿಂತಿರುಗಿದರೆ, ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ತೆರಳಿ ವಾಪಸ್ಸಾದರು. ಕಾಪಿಕಾಡ್ ನಿಂದ ಕಲ್ಲಾಪುವರೆಗೆ ಬೆಳಗ್ಗೆ 10 ಗಂಟೆಯಿಂದ 2 ಗಂಟೆವರೆಗೆ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಯಿತು.