ಮದ್ದೂರು: ತಾಲೂಕಾದ್ಯಂತ ಎಪಿಎಂಸಿ ಮಾರುಕಟ್ಟೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಎಪಿಎಂಸಿ ನೂತನ ಅಧ್ಯಕ್ಷ ಗೆಜ್ಜಲಗೆರೆ ಜಿ.ಸಿ.ಮಹೇಂದ್ರ ಹೇಳಿದರು.
ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ಗುಡಿಗೆರೆ, ಕೆಸ್ತೂರು, ನಿಡಘಟ್ಟ, ಬೆಸಗರಹಳ್ಳಿ ಇನ್ನಿತರೆ ಹೋಬಳಿ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
ಜತೆಗೆ ಸರ್ಕಾರಗಳಿಂದ ಮಾರುಕಟ್ಟೆ ಮತ್ತು ರೈತರ ಅಭಿವೃದ್ಧಿಗೆ ಏನೇನು ಸೌಲಭ್ಯಗಳು ಸಿಗತ್ತವೋ ಎಲ್ಲವನ್ನೂ ತಂದು ರೈತರ ಸಂಪರ್ಕ ಸೇತುವೆಯಾಗಿ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು. ಎಪಿಎಂಸಿ ಎಳನೀರು ಮಾರುಕಟ್ಟೆ ಆಡಳಿತ ಮಂಡಳಿಗೆ ಆಯ್ಕೆಗೊಳಿಸಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಮತ್ತು ಸ್ಥಳೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸಿ ದರು.
ಜಿಲ್ಲೆಯಲ್ಲೇ ಇದೇ ಪ್ರಥಮ ಬಾರಿಗೆ ಬಿಜೆಪಿ ಎಪಿಎಂಸಿ ಎಳನೀರು ಮಾರು ಕಟ್ಟೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಿಸಿ ದರು. ಈ ವೇಳೆ ಬಿಜೆಪಿ ಘಟಕದ ತಾಲೂ ಕು ಅಧ್ಯಕ್ಷ ಪಣ್ಣೇದೊಡ್ಡಿ ರಘು, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಸಿ. ಸಿದ್ದು, ಮುಖಂಡರಾದ ಕೆಂಪಬೋರಯ್ಯ, ಅಂಕ ರಾಜು, ಗೋವಿಂದೇ ಗೌಡ, ಮೋಹನ್‌ಕುಮಾರ್, ಸುಧೀರ್, ಕಾರ್ಯದರ್ಶಿ ತಾಬ್ರಿನ್‌ತಾಜ್ ಹಾಜರಿದ್ದರು.
ನೂತನ ಪದಾಧಿಕಾರಿಗಳು: ಉಪಾಧ್ಯಕ್ಷ ಎಚ್.ಪಿ.ಸ್ವಾಮಿ, ನಿರ್ದೇಶಕರಾಗಿ ಶಿವಮಲ್ಲಪ್ಪ, ಟಿ.ಕೆ. ಸೋಮೇಗೌಡ, ಎಚ್.ಪಿ. ಸ್ವಾಮಿ, ವೈ.ಎಸ್. ಬಸವರಾಜು, ಎ.ವಿ.ರವಿ, ಎಂ.ಡಿ.ಕೃಷ್ಣ, ಸುನೀಲ್‌ಕುಮಾರ್, ಪಾರ್ವ ತಮ್ಮ, ಬಿ.ಮಂಚಯ್ಯ, ವಿ.ಕೆ.ಲಕ್ಷ್ಮೀ, ಕೆಂಚಪ್ಪ, ಎಸ್.ಶಿವರಾಜು, ಡಿ.ಸಿ.ರಾಧಾ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.