Advertisement

Chikkaballapur: ಜಿಲ್ಲೆಯಲ್ಲಿ ಪವರ್‌ ಕಟ್‌ಗೆ ಗ್ರಾಹಕರ ಪರದಾಟ! 

06:04 PM Mar 10, 2024 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಬೇಸಿಗೆ ಶುರುವಾಗುತ್ತಿದ್ದಂತೆ ನಿಧಾನಕ್ಕೆ ಕರೆಂಟ್‌ ಕಟ್‌ ಕಿರಿಕಿರಿ ರೈತಾಪಿ ಜನರನ್ನು ಹೈರಾಣಿಸುತ್ತಿದೆ. ಹಲವು ತಿಂಗಳಿಂದ ವಿದ್ಯುತ್‌ ಅಭಾವದ ಅನುಭವ ಆಗದ ಜನತೆಗೆ ಈಗ ಬೇಸಿಗೆ ಬೆನ್ನಲೇ ಪದೆ ಪದೇ ವಿದ್ಯುತ್‌ ಕಡಿತ ಆಗುತ್ತಿರುವು ತೀವ್ರ ತೊಂದರೆಗೆ ಸಿಲುಕುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಈ ವರ್ಷ ತೀವ್ರ ಬರದ ಪರಿಣಾಮ ಕೊಳವೆ ಬಾವಿಗಳು ಕೈ ಕೊಟ್ಟು ರೈತರು ತಮ್ಮ ವಾಣಿಜ್ಯ ಬೆಳೆಗಳನ್ನು ರಕ್ಷಿಸಿಕೊಳ್ಳ ಲಾಗದೇ ನಾಶಪಡಿಸುತ್ತಿದ್ದಾರೆ. ಆದರೆ, ಈಗ ವಿದ್ಯುತ್‌ ಕ್ಷಾಮ ಕೂಡ ಶುರುವಾಗಿದ್ದು ಕೊಳವೆ ಬಾವಿಗಳಲ್ಲಿ ನೀರು ಇದ್ದರೂ ಕರೆಂಟ್‌ ಸರಿಯಾಗಿ ಪೂರೈಕೆ ಆಗದೇ ಹೋದರೆ ಬೆಳೆ ರಕ್ಷಿಸಿಕೊಳ್ಳುವ ಸವಾಲು ರೈತರಿಗೆ ಎದುರಾಗಲಿದೆ.

ನೀರಿಗಾಗಿ ಜನರ ಪರದಾಟ: ಬೇಸಿಗೆ ಕಾರಣ ರಾಜ್ಯದ ಜಲಾಶಯಗಳಲ್ಲಿ ಕೂಡ ನೀರಿನ ಕೊರತೆ ಉಂಟಾಗಿ ವಿದ್ಯುತ್‌ ಉತ್ಪಾದನೆಯಲ್ಲಿ ಕುಸಿತ ಕಾಣುತ್ತಾ ಬೇಡಿಕೆಗೆ ತಕ್ಕಂತೆ ಪೂರೈಕೆಯಲ್ಲಿ ವ್ಯತ್ಯಯ ಕಾಣುತ್ತಿದ್ದು, ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೇ ಶುರುವಾಗಿದೆ. ಇದರಿಂದ ಬೆಸ್ಕಾಂ ಪದೇ ಪದೇ ವಿದ್ಯುತ್‌ ಕಡಿತ ಮಾಡುವುದರಿಂದ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಅಪಾರ ಪ್ರಮಾಣದ ಬೆಳೆಗಳು ನೀರಿಲ್ಲದೇ ಒಣಗುವ ಸ್ಥಿತಿಗೆ ತಲುತ್ತವೆ. ಈಗಲೇ ಟೋಮೆಟೋ ಬಿಟ್ಟರೆ ಆಲೂಗಡ್ಡೆ ಮತ್ತಿತರ ಬೆಳೆಗಳಿಗೆ ಸಮರ್ಪಕ ಬೆಲೆ ಇಲ್ಲ. ಕೆರೆಂಟ್‌ ಕೈ ಕೊಟ್ಟರೆ ಟ್ಯಾಂಕರ್‌ಗಳ ಮೂಲಕ ಬೆಳೆಗಳಿಗೆ ನೀರು ಹಾಯಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಬರಗಾಲದ ಪರಿಣಾಮ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.

ಆದರೆ ಇದೀಗ ವಿದ್ಯುತ್‌ ಪದೆ ಪದೇ ಕೈ ಕೊಡುತ್ತಿರುವ ಪರಿಣಾಮ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ಅಂತೂ ಕುಡಿಯುವ ನೀರಿಗಾಗಿ ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಪ್ಲೋರ್‌ಮಿಲ್‌,ಅಕ್ಕಿ ಗಿರಣಿ ಮಾಲೀಕರಿಗೂ ತಟ್ಟಿದ ಬಿಸಿ :  ವಿದ್ಯುತ್‌ನ್ನೆ ನಂಬಿ ಕೆಲಸ ಮಾಡುವ ಜಿಲ್ಲೆಯ ಅಕ್ಕಿಗಿರಣಿಗಳು ಹಾಗೂ ರಾಗಿ, ಭತ್ತ, ಅಕ್ಕಿ ಪ್ಲೋರ್‌ಮಿಲ್‌ ಮಾಲೀಕರಿಗೂ ವಿದ್ಯುತ್‌ ಕಣ್ಣಾಮುಚ್ಚಲೇಯ ಬಿಸಿ ತಟ್ಟುತ್ತಿದೆ. ಪದೆ ಪದೇ ವಿದ್ಯುತ್‌ ಕೈ ಕೊಡುತ್ತಿರುವುದರಿಂದ ಗ್ರಾಹಕರು ಗಂಟೆಗಟ್ಟಲೇ ಕಾಯುವುದರ ಜೊತೆಗೆ ಮಾಲೀಕರಿಗೆ ಸರಿಯಾಗಿ ವಹಿವಾಟು ನಡೆಯದೇ ನಷ್ಟ ಅನುಭವಿಸುವಂತಾಗಿದೆ.

Advertisement

ಮೊದಲೇ ವಿದ್ಯುತ್‌ ದರ ಏರಿಕೆಯಿಂದ ಮಾಲೀಕರು ಕಂಗಾಲಾಗಿದ್ದಾರೆ. ಇದೀಗ ಅಕ್ಕಿ ಗಿರಣಿ ಹಾಗೂ ಪ್ಲೋರ್‌ ಮಿಲ್‌ಗ‌ಳಿಗೆ ಸಮರ್ಪಕವಾಗಿ ಕರೆಂಟ್‌ ಪೂರೈಕೆ ಆಗದೇ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ಲೋಡ್‌ ಶೆಡಿಂಗ್‌ ಬಗ್ಗೆ ತುಟ್ಟಿ ಬಿಚುತ್ತಿಲ್ಲ ಬೆಸ್ಕಾಂ ಅಧಿಕಾರಿಗಳು:

ಜಿಲ್ಲೆಯಲ್ಲಿ ಇತ್ತೀಚಿನ ಹಲವು ದಿನಗಳಿಂದ ಬೆಳಗ್ಗೆ, ಸಂಜೆ, ಮಧ್ಯಾಹ್ನ ಹೊತ್ತಿನಲ್ಲಿ ಗ್ರಾಹಕರಿಗೆ ಯಾವುದೇ ಮನ್ಸೂಚನೆ ಇಲ್ಲದೇ ವಿದ್ಯುತ್‌ ಕಡಿತ ಆಗುತ್ತಿದ್ದು, ಗ್ರಾಹಕರು ಬೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಬೆಸ್ಕಾಂ ಅಧಿಕಾರಿಗಳು ಕರೆಂಟ್‌ ಕಟ್‌ ಏಕೆ ಆಗುತ್ತಿದೆ ಎಂಬುದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಲೋಡ್‌ಶೆಡ್ಡಿಂಗ್‌ನಿಂದ ವಿದ್ಯುತ್‌ ತೆರೆಯಲಾಗುತ್ತಿದೆಯೆಂಬ ಮಾತು ಕೇಳಿ ಬರುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ವಿದ್ಯುತ್‌ ಕಟ್‌ಗೆ ದುರಸ್ತಿ ನೆಪ ಹೇಳುತ್ತಿದ್ದಾರೆ ಎಂದು ಜಿಲ್ಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next