Advertisement

ಕುಷ್ಟಗಿ: ತ್ರೈಮಾಸಿಕ ಕಾರ್ಯ ನಿರ್ವಹಣೆ; ಸೆ. 24 ರಂದು ವಿದ್ಯುತ್‌ ವ್ಯತ್ಯಯ

02:31 PM Sep 22, 2022 | Team Udayavani |

ಕುಷ್ಟಗಿ: ಇದೇ ಸೆ.24 ರಂದು 220 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರ ಕುಷ್ಟಗಿಯಲ್ಲಿ ತ್ರೈಮಾಸಿಕ ಕಾರ್ಯ ನಿರ್ವಹಣೆ ಇರುವುದರಿಂದ 220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕುಷ್ಟಗಿ ಪಟ್ಟಣ, ಕುಷ್ಟಗಿ ಎನ್ನೆಚ್, ನಿಡಶೇಶಿ ಎನ್.ವೈ, ಹಿರೇಮನ್ನಾಪೂರ್ ರೂರಲ್, ಕಂದಕೂರ್ ರೂರಲ್, ಕೊರಡಕೇರಾ ಐ.ಪಿ. ಹಿರೇಬನ್ನಿಗೋಳ ಐ.ಪಿ, ಫೀಡರ್‌ಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

Advertisement

ತ್ರೈಮಾಸಿಕ ಕಾರ್ಯ ನಿರ್ವಹಣೆ ಬೇಗನೆ ಮುಕ್ತಾಯಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್‌ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ದುರಸ್ತಿ ಕೆಲಸ ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್‌ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ ಕುಷ್ಟಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next