Advertisement

ಹಗಲು ವೇಳೆ ತ್ರಿಫೇಸ್‌ ವಿದ್ಯುತ್‌ ನೀಡಲು ಚಿಂತನೆ

03:13 PM Jun 19, 2022 | Team Udayavani |

ಚನ್ನಪಟ್ಟಣ: ರೈತರ ಹಲವಾರು ವರ್ಷಗಳ ಬೇಡಿಕೆಯಾಗಿರುವ ತ್ರಿಫೇಸ್‌ ವಿದ್ಯುತ್‌ ಅನ್ನು ಹಗಲು ವೇಳೆ ನೀಡಲು ಚಿಂತನೆ ನಡೆದಿದೆ ಎಂದು ಬೆಸ್ಕಾಂ ಇಇ ಶಿವಕುಮಾರ್‌ ತಿಳಿಸಿದರು.

Advertisement

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ, ಚನ್ನಪಟ್ಟಣ ನಗರ ಉಪ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಹಮ್ಮಿಕೊಳ್ಳುವ ವಿದ್ಯುತ್‌ ಅದಾಲತ್‌ ಕಾರ್ಯಕ್ರಮಕ್ಕೆ ಬೈರಾಪಟ್ಟಣ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಕಂದಾಯ ಅದಾಲತ್‌ ಮಾದರಿಯಲ್ಲಿಯೇ ಪ್ರತಿ ತಿಂಗಳ ಮೂರನೇ ಶನಿ ವಾರ ವಿದ್ಯುತ್‌ ಅದಾಲತ್‌ ಕಾರ್ಯ ಕ್ರಮ ಹಮ್ಮಿ ಕೊಳ್ಳಲಾಗುತ್ತಿದ್ದು, ಇದಕ್ಕೆ ಬೈರಾ ಪಟ್ಟಣದಿಂದ ಚಾಲನೆ ನೀಡಲಾಗುತ್ತಿದೆ. ಗ್ರಾಮೀಣ ಜನತೆಯ ವಿದ್ಯುತ್‌ ಸಮಸ್ಯೆ ಆಲಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಮ್ಮ ಗ್ರಾಮಗಳಿಗೆ ಬರಲಿದ್ದಾರೆ. ನಿಮ್ಮ ವ್ಯಾಪ್ತಿಯ ವಿದ್ಯುತ್‌ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಅಧಿಕಾರಿಗಳು ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ ಎಂದು ತಿಳಿಸಿದರು.

ವಿದ್ಯುತ್‌ ಕಂಬ ಸ್ಥಳಾಂತರ: ಬೈರಾ ಪಟ್ಟಣದ ತೋಟಗಾರಿಕೆ ಇಲಾಖೆಯ ಫಾರಂ ಬಳಿ ಇರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರ ಮಾಡುವುದು ಸೇರಿದಂತೆ ರೈಲ್ವೆ ಹಳಿಗಳ ಹಾಸು-ಪಾಸು ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು. ರೈತರಿಗೆ ಅನುಕೂಲವಾಗುವಂತೆ ಇನ್ನು ಮುಂದೆ ಹಗಲು ವೇಳೆಯಲ್ಲಿ ತ್ರಿಫೇಸ್‌ ವಿದ್ಯುತ್‌ ಕೊಡುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ನಡೆಯಿತು.

ಹಲವು ವರ್ಷಗಳ ಬೇಡಿಕೆ: ರಾತ್ರಿ ವೇಳೆ ತ್ರಿ ಫೇಸ್‌ ವಿದ್ಯುತ್‌ ನೀಡುವುದರಿಂದ ಬೆಳೆ ಗಳಿಗೆ ನೀರು ಹಾಯಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಹಗಲು ವೇಳೆ ಯಲ್ಲಿ ತ್ರಿಫೇಸ್‌ ವಿದ್ಯುತ್‌ ನೀಡಬೇಕು ಎಂಬುದು ರೈತರ ಹಲವು ವರ್ಷಗಳ ಬೇಡಿಕೆಯಾಗಿದೆ. ಬೆಸ್ಕಾಂ ಜಾಗೃತ ದಳದ ನಿರೀಕ್ಷಕ ವಿಕಾಸ್‌ ಗೌಡ, ಬೆಸ್ಕಾಂ ಎಇಇ ಉಮೇಶ್‌, ಚನ್ನಪಟ್ಟಣ ಎಇಇ ಚಂದನಾ, ಮಳೂರು ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next