ಇಸ್ಲಾಮಾಬಾದ್: 2020ರಲ್ಲಿ ಪಾಕಿಸ್ತಾನದಲ್ಲಿ ಬಡತನ ರೇಖೆ 4.4ರಿಂದ 5.4ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದ್ದು, ದೇಶದಲ್ಲಿ ಎರಡು ಮಿಲಿಯನ್ ಗಿಂತಲೂ ಅಧಿಕ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಶರದ್ ಪವಾರ್ ನಿವಾಸದ ಸಭೆಗೆ ತೃಣಮೂಲ, ಆಪ್ ಸೇರಿ ಎಂಟು ರಾಜಕೀಯ ಪಕ್ಷಗಳು ಭಾಗಿ
ಕೆಳ ಹಾಗೂ ಮಧ್ಯಮ ಆದಾಯದ ಬಡತನ ರೇಖೆಯನ್ನು ಗುರುತಿಸಿರುವ ವಿಶ್ವಬ್ಯಾಂಕ್ 2020-21ರಲ್ಲಿ ಪಾಕಿಸ್ತಾನದ ಬಡತನ ಅನುಪಾತ 39.3ರಷ್ಟಿದ್ದು, 2021-22ರಲ್ಲಿ ಇದು ಶೇ.39.2ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಇದು 2022-23ರಲ್ಲಿ 37.9ಕ್ಕೆ ಇಳಿಕೆಯಾಗಬಹುದು ಎಂದು ದಿ ನ್ಯೂಸ್ ಇಂಟರ್ ನ್ಯಾಷನಲ್ ವರದಿ ಮಾಡಿದೆ.
ಈ ಸಂದರ್ಭದಲ್ಲಿ ವಿಶ್ವಬ್ಯಾಂಕ್ ಪ್ರಕಟಿಸಿರುವ ಅಂಕಿಅಂಶದಲ್ಲಿ ಬಡತನ ಹೆಚ್ಚಳವಾಗುತ್ತಿರುವುದು ಕಂಡುಬಂದಿದ್ದು, ಪಾಕಿಸ್ತಾನ ಸರ್ಕಾರ ಕೇವಲ 208-19ನೇ ಸಾಲಿನ ಬಡತನ ರೇಖೆಯ ಅಂಕಿಅಂಶ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ 2015-16ರಲ್ಲಿ ಬಡತನ ಶೇ.24.3ರಿಂದ 208-19ರಲ್ಲಿ ಶೇ.21.9ಕ್ಕೆ ಇಳಿಕೆಯಾಗಿರುವುದಾಗಿ ತಿಳಿಸಿರುವುದಾಗಿ ದಿ ನ್ಯೂಸ್ ಇಂಟರ್ ನ್ಯಾಷನಲ್ ವರದಿ ವಿವರಿಸಿದೆ.
ಪಾಕಿಸ್ತಾನದ ವಿವಿಧ ಕ್ಷೇತ್ರಗಳ ಉದ್ಯೋಗಿಗಳು ಬಡವರಾಗಿದ್ದಾರೆ, ಇದರಲ್ಲಿ ಕೃಷಿ ಕ್ಷೇತ್ರದವರು ಬಡತನದಲ್ಲಿಯೇ ಉಳಿಯುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಪ್ರಸ್ತುತ ಆರ್ಥಿಕ ವರ್ಷದ ಜಿಡಿಪಿಯು ಶೇ.08ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.