Advertisement

ಕುಂಬಾರಿಕೆಯಲ್ಲೇ ಹೊಸತನ ಕಂಡುಕೊಂಡ ನಾಗರಾಜ

05:36 PM Apr 11, 2021 | Team Udayavani |

ಹುಬ್ಬಳ್ಳಿ: ವೃತ್ತಿಯಲ್ಲಿ ಹೊಸತನಕ್ಕೆಮುಂದಾದಾಗ ಹಲವರಮೂದಲಿಕೆ-ಶಂಕೆ, ಬಂಡವಾಳ ಕೊರತೆ, ನಂಬಿಕೊಂಡ ವೃತ್ತಿಯಿಂದ ನಿರೀಕ್ಷಿತ ಆದಾಯವಿಲ್ಲದೆ ಕುಟುಂಬದ ಆರ್ಥಿಕ ಸಂಕಷ್ಟದ ನಡುವೆಯೂ ಮಣ್ಣು ನಂಬಿದ್ದ ಆತನ ನಿರೀಕ್ಷೆ ಹುಸಿಯಾಗಲಿಲ್ಲ,ಬದುಕು ಕಟ್ಟಿಕೊಳ್ಳುವ ಕನಸು ಕೈಬಿಡಲಿಲ್ಲ,ಮಣ್ಣು ಬಳಸಿಯೇ ಸುಮಾರು 40 ಪ್ರಕಾರದ ವಸ್ತುಗಳನ್ನು ತಯಾರಿಸುತ್ತಿದ್ದು,ರಾಜ್ಯ-ಹೊರರಾಜ್ಯಗಳಲ್ಲೂ ಉತ್ಪನ್ನ ಮಾರಾಟ ಮಾಡಿದ್ದೇನೆ ಎಂಬ ಹೆಮ್ಮೆಯ ಮಾತುಗಳು ಹೊರಹೊಮ್ಮುತ್ತಿವೆ, ಆತ್ಮವಿಶ್ವಾಸ ಗೋಚರಿಸುತ್ತದೆ.

Advertisement

ಗುಡಿ ಕೈಗಾರಿಕೆಗಳು ಒಂದೊಂದೇ ಮರೆಯಾಗುತ್ತಿವೆ. ಇದಕ್ಕೆ ಕುಂಬಾರಿಕೆಯೂ ಹೊರತಾಗಿಲ್ಲ. ಮಣ್ಣು ಬಳಸಿಕೈಯಿಂದಲೇ ವಿವಿಧ ಉತ್ಪನ್ನಗಳನ್ನುತಯಾರಿಸುತ್ತಿದ್ದ ಕುಂಬಾರಿಕೆವೃತ್ತಿಗೆ ಕುತ್ತು ಬಂದಿದೆ. ಅದೆಷ್ಟೋ ಕುಟುಂಬಗಳು ಪಾರಂಪರಿಕಕಸುಬಿನಲ್ಲಿ ಲಾಭವಿಲ್ಲವೆಂದು ಬೇರೆವೃತ್ತಿಗೆ ವಲಸೆ ಹೋಗಿವೆ. ಆದರೆಹಾವೇರಿ ಜಿಲ್ಲೆ ಹಿರೇಕೆರೂರುತಾಲೂಕಿನ ಹಂಸಬಾವಿಯಕರಕುಶಲಕರ್ಮಿಯೊಬ್ಬರು ಕುಂಬಾರಿ ಕೆಯಲ್ಲೇ ಹೊಸತನ ಕಂಡುಕೊಂಡಿದ್ದಾರೆ.ಅದೆಷ್ಟೋ ಜನರಿಗೆ ಜ್ಞಾನ ಹಂಚಿದ್ದಾರೆ. ಹೊಸ, ಹೊಸ ವಿನ್ಯಾಸಗಳೊಂದಿಗೆ  ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ಕೌಶಲಕ್ಕೆ ಕೊರತೆ ಇಲ್ಲ: ಹಂಸಬಾವಿಯಶ್ರೀ ವೀರಭದ್ರೇಶ್ವರ ಟೆರಾಕೋಟಾಕೇಂದ್ರದ ನಾಗರಾಜ ಚಕ್ರಸಾಲಿ ಕಲಿತಿದ್ದು ಕೇವಲ ಐದನೇ ತರಗತಿ. ಆದರೆ,ಇಂದು ಕುಂಬಾರಿಕೆ ಕಲೆಯಲ್ಲಿ ಪಿಎಚ್‌ಡಿಮಾಡಿದವರಿಗಿಂತಲೂ ಹೆಚ್ಚಿನ ಕೌಶಲಹೊಂದಿದ್ದಾರೆ. ಕುಂಬಾರಿಕೆಯಲ್ಲಿ ಏನುಉಳಿದಿಲ್ಲ. ಬೇರೆ ವೃತ್ತಿ ನೋಡಿಕೋಎಂಬ ಸಲಹೆ ಪಾಲಕರಿಂದ ಬಂದಿತ್ತು.

ಏನಾದರೂ ಮಾಡಿದರೆ ಇದೇ ವೃತ್ತಿಯಲ್ಲಿ ಮಾಡಬೇಕೆಂಬ ಉತ್ಸಾಹನಾಗರಾಜ ಅವರಲ್ಲಿ ಪುಟಿದೇಳುತ್ತಿತ್ತು. ಹೊಸತನದ ಕನಸಿತ್ತಾದರೂ ಕೈಯಲ್ಲಿಕಾಸಿರಲಿಲ್ಲ. ಕುಟುಂಬದ ಆರ್ಥಿಕಸಂಕಷ್ಟ ಮತ್ತೂಂದು ಕಡೆ. ಇಷ್ಟಾದರೂ ಮನದೊಳಗಿನ ತುಡಿತ, ಛಲದ ಸೆಲೆಬತ್ತಿರಲಿಲ್ಲ. ನಾಗರಾಜ ಕಳೆದ 18ವರ್ಷಗಳ ಹಿಂದೆ ತಮ್ಮದೇ ಪ್ರಯೋಗಕ್ಕೆ ಮುಂದಾಗಿದ್ದರು.

ಹೊಸತನಕ್ಕೆ ಹೋಗುವುದಕ್ಕೆಯಾವುದೇ ತರಬೇತಿ ಇರಲಿಲ್ಲ. ಆದರೆ,ಮನದೊಳಿಗಿನ ಸಂಶೋಧಕನೊಬ್ಬ ನಾನಿದ್ದೇನೆ ಎಂಬ ಧೈರ್ಯ ತುಂಬುತ್ತಲೇ ಇದ್ದ. ಅದೇ ಧೈರ್ಯದಲ್ಲಿ ಸಾಗಿದ ನಾಗರಾಜ, ಸಾಂಪ್ರದಾಯಿಕವಾಗಿ ಕುಂಬಾರಿಕೆಯಲ್ಲಿ ಕೈಗೊಳ್ಳುವಕೊಡ, ಮಡಿಕೆ ಬದಲಾಗಿ ಬದಲಾದಜೀವನಶೈಲಿಗೆ ಪೂರಕವಾದ ಉತ್ಪನ್ನಗಳ ವಿನ್ಯಾಸಕ್ಕೆ ಮುಂದಾಗಿದ್ದರು. ಹೊಸವಿನ್ಯಾಸ ರೂಪ ಪಡೆದುಕೊಂಡಿತು.ಸಾಂಪ್ರದಾಯಿಕ ಉತ್ಪನ್ನಗಳಜಾಗದಲ್ಲಿ ಹೊಸತನದ ಉತ್ಪನ್ನಗಳು ಕಾಣಿಸತೊಡಗಿದವು.

Advertisement

ಯಾವ್ಯಾವ ಉತ್ಪನ್ನ? :

ಹುಲ್ಲಿನ ಗುಡಿಸಲು, ಮ್ಯಾಜಿಕ್‌ ದೀಪ, ಆಕಾಶಬುಟ್ಟಿ, ನೀರಿನ ಬಾಟಲಿ, ಅಡುಗೆ ತಯಾರಿಕೆ ಪಾತ್ರೆ, ಹಾಲು-ಮೊಸರು ಹಾಕುಲ ಪಾತ್ರೆ, ಊಟದ ತಟ್ಟೆ, ಬಟ್ಟಲು, ಲೋಟ, ಕಡಾಯಿ, ಪಡ್ಡು-ದೋಸೆ ಹಂಚು, ವಿವಿಧಅಲಂಕಾರಿ ವಸ್ತುಗಳು, ಸುಮಾರು 40 ಇಂಚು ಎಚ್ಚರದ ಮಣ್ಣಿನ ಆನೆ, ಕುದುರೆ ಮೊದಲಾದವು.

ನನಗೆ ನಾನೇ ರೂಪಿಸಿಕೊಂಡಿರುವ ಮಣ್ಣಿನ ಕಲೆಗಾರಿಕೆ ಜ್ಞಾನನನ್ನಲ್ಲಿ ಮಾತ್ರ ಉಳಿಯದೆ ಇತರರಿಗೆ ವರ್ಗಾವಣೆಯಾಗಬೇಕೆಂಬ ಬಯಕೆನನ್ನದು. ಹೊಸತನ ರೂಪಿಸಿಕೊಳ್ಳಬೇಕಾದರೆ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾನು ಹಾಗೂ ಸಹೋದರ ಊಟಕ್ಕೂ ಇಲ್ಲದೆ ಇದ್ದ ಎರಡು ಚಪಾತಿಯಲ್ಲೇ ದಿನದೂಡಿದ್ದೇವೆ. ನನಗಿರುವ ಕೌಶಲವನ್ನು ಹಂಚಬೇಕೆಂಬ ಉದ್ದೇಶದಿಂದ ಈಗಾಗಲೇ ಸುಮಾರು 300 ವಿದ್ಯಾರ್ಥಿಗಳಿಗೆ ಪ್ರಾಥಮಿಕ ತರಬೇತಿ ನೀಡಿದ್ದೇನೆ. ಹಂಸಬಾವಿಯಲ್ಲಿ ತರಬೇತಿಕೇಂದ್ರ ಆರಂಭಿಸುವ ಚಿಂತನೆ ಇದ್ದರೂ, ಜಾಗದ ಕೊರತೆ ಕಾಡುತ್ತಿದೆ. ನಾಗರಾಜ ಚಕ್ರಸಾಲಿ, ಮಣ್ಣಿನ ಉತ್ಪನ್ನಗಳ ತಯಾರಕ

 

­-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next