ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಬೈಲಕುಪ್ಪೆ ಗ್ರಾಮದ ಹಾಗೂ ಬಿಎಂ ರಸ್ತೆಯ ಬದಿಯಲ್ಲಿ ತ್ಯಾಜ್ಯ ವಸ್ತಗಳು ರಾಶಿ ರಾಶಿ ಬಿದ್ದಿರುವುದರಿಂದ ಗ್ರಾಮದ ಸೌಂದರ್ಯಕ್ಕೆ ಘಾಸಿ ಉಂಟಾಗಿದೆ.
ತಾಲೂಕಿನ ಬೈಲಕುಪ್ಪೆ ಗ್ರಾಪಂಗೆ ಒಳ ಪಡುವ ಹಾಗೂ ಹೃದಯ ಭಾಗದಲ್ಲಿರುವ ಟಿಬೇಟಿಯನ್ ಪೆಟ್ರೋಲ್ ಬಂಕ್ ಬಳಿ ಲೊಡುಗಟ್ಟಲೇ ತ್ಯಾಜ್ಯ ವಸ್ತಗಳು ಬಿದ್ದಿದ್ದು ವಾಹನ ಸವಾರರು ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಇಲ್ಲಿಗೆ ಬಂದು ನಿಲ್ಲುವಾಗ ಪೆಟ್ರೋಲ್ ಹಾಕಿಸಿಕೊಳ್ಳುವುದರ ಜೊತೆಗೆ ತಮ್ಮ ಮೂಗನ್ನು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ಬೇರೆ ಬೇರೆ ಕೆಲಸಗಳಿಗೆ ಓಡಾಡು ವವರ ಸಂಖ್ಯೆ ಹೆಚ್ಚಾಗಿತಿದೆ, ಇದರಿಂದ ಹೆಚ್ಚುತ್ತಿರುವ ಜನ ದಟ್ಟನೆಗೆ ಅನುಗುಣವಾಗಿ ಗ್ರಾಮವನ್ನು ಸಜ್ಜುಗೊಳಿಸುವ ಕೆಲಸವನ್ನು ಗ್ರಾಪಂ ಮಾಡಬೇಕು, ಆದರೆ ಪ್ರಮುಖ ರಸ್ತೆಗಳ ಇಕ್ಕಲಗಳು ತ್ಯಾಜ್ಯದಿಂದ ತುಂಬಿ ಹೋಗಿ ತಿಪ್ಪೆ ಗುಂಡಿಯಂತಾಗಿದೆ.
ಈ ರಸ್ತೆಯಲ್ಲಿ ನಿತ್ಯ ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಸೇರಿದಂತೆ ಸಾವಿರಾರು ವಾಹನಗಳು ಓಡಾಡುತ್ತವೆ, ಆದರೆ ದಿನೇ ದಿನೇ ಹೆಚ್ಚುತ್ತಿರುವ ತ್ಯಾಜ್ಯ ರಸ್ತೆಯನ್ನೇ ನುಂಗಿ ಹಾಕುವ ಹಂತಕ್ಕೆ ಬಂದು ತಲುಪಿದೆ. ಹೀಗಾಗಿ ಪಾದಚಾರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಜೀವ ಭಯದಲ್ಲಿ ರಸ್ತೆಯಲ್ಲೇ ಹೆಜ್ಜೆ ಹಾಕಬೇಕಿದೆ.
ಗ್ರಾಪಂ ವತಿಯಿಂದ ಮೂರು ಬಾರಿ ಜಿಲ್ಲಾಧಿಕಾರಿ ಸಭೆಯಲ್ಲಿ ಚರ್ಚಿಸಿ ನಮಗೆ ಕಸ ವಿಲೇವಾರಿಗೆ ಸೂಕ್ತವಾದ ಸ್ಥಳ ಒದಗಿಸ ಕೊಡಬೇಕೆಂದು ಮನವಿ ಸಲ್ಲಿಸಿ ದಾಗ ಅವರು ಪಿರಿಯಾಪಟ್ಟಣದ ತಹಶೀ ಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿಗೆ ಸೂಕ್ತವಾದ ಸ್ಥಳ ಪರಿಶೀಲಿಸಿಕೊಡಿ ಎಂದು ಹೇಳಿದರು. ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸು ತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸದಸ್ಯರುಗಳು.
ರಸ್ತೆ ಬಳಿಯಲ್ಲೇ ಕಸ ಸುರಿಯುತ್ತಿರುವುದ ರಿಂದ ಗ್ರಾಮದ ಸೌಂದರ್ಯಕ್ಕೆ ಧಕ್ಕೆಯಾಗು ತ್ತಿರುವುದು ನಿಜ. ಈ ರೀತಿ ಕಸ ಹಾಕದೇ ಇರುವ ಹಾಗೇ ನಾವು ನೋಡಿಕೊಳ್ಳಬೇಕಿದೆ. ಈ ಬಗ್ಗೆ ತಹಶೀಲ್ದಾರ್‌ರೊಂದಿಗೆ ಮಾತನಾಡಿ ಸೂಕ್ತವಾದ ಸ್ಥಳ ಗುರುತಿಸಿಕೊಡುವ ಬಗ್ಗೆ ಚರ್ಚಿಸಿ ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ.