Advertisement

ತ್ವಚೆಯ ಅಂದ ಹೆಚ್ಚಿಸಲು ಆಲೂ

09:28 PM Oct 28, 2019 | mahesh |

ಹೆಣ್ಣು ತ್ವಚೆಯನ್ನು ಕಾಳಜಿ ಮಾಡುವುದರಲ್ಲಿ ವಿಶೇಷ ಗಮನ ಹರಿಸುತ್ತಾಳೆ. ಹಾಗಾಗಿ ಚರ್ಮದ ರಕ್ಷಣೆಗಾಗಿ ಒಂದಷ್ಟು ಸರಳ ಸೂತ್ರಗಳು ಇಲ್ಲಿದ್ದು, ಚರ್ಮದ ಕಾಂತಿಯನ್ನು ಹೆಚ್ಚಿಸುವುದರೊಂದಿಗೆ ತುರಿಕೆ, ಗಾಯಗಳ ಕಲೆಗಳ ನಿವಾರಣೆಗೆ ಇಲ್ಲಿದೆ ಕೆಲವೊಂದು ಟಿಪ್ಸ್‌ ಇಲ್ಲಿವೆ

Advertisement

·  ಆಲೂಗಡ್ಡೆಯ ರಸವು ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ. ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು, ಇದಕ್ಕೆ ಒಂದು ಚಮಚ ಮೊಸರು ಸೇರಿಸಿ ನುಣ್ಣಗೆ ಅರೆಯಬೇಕು. ಅನಂತರ ಆ ಪೇಸ್ಟ್ ಅನ್ನು ಕಪ್ಪಾಗಿದ್ದ ಚರ್ಮದ ಮೇಲೆ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್‌ ಮಾಡಬೇಕು. ಸುಮಾರು ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆಯುವುದರಿಂದ ಮೊಗದ ಕಾಂತಿ ಹೆಚ್ಚುತ್ತದೆ.

·  ಚರ್ಮದಲ್ಲಿ ಉರಿ ಅಥವಾ ತುರಿಕೆ ಕಾಣಿಸಿಕೊಂಡರೆ ಒಂದು ಆಲೂಗಡ್ಡೆಯ ರಸಕ್ಕೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಚೆನ್ನಾಗಿ ಕಲಸಿ ತುರಿಕೆ ಕಾಣಿಸಿಕೊಂಡ ಚರ್ಮದ ಮೇಲೆ ತೆಳುವಾಗಿ ಹಚ್ಚಿ ಒಣಗಲು ಬಿಡಬೇಕು. ಸುಮಾರು ಮೂವತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಬೇಕು. ಈ ರೀತಿ ಮಾಡುತ್ತಿದ್ದರೆ ಯಾವುದೇ ಅಲರ್ಜಿ ಇದ್ದರೂ ನಿವಾರಣೆಯಾಗುತ್ತದೆ.

·  ಒಣ ಚರ್ಮವಾಗಿದ್ದರೆ ಆಲೂಗಡ್ಡೆಯನ್ನು ಸೌಂದರ್ಯ ಪ್ರಸಾಧನವಾಗಿ ನಿತ್ಯ ಬಳಸಬಹುದು. ಶುಷ್ಕ ಚರ್ಮ ಹೊಂದಿದ್ದರೆ ನಿತ್ಯ ಆಲೂಗಡ್ಡೆ ರಸವನ್ನು ಹಚ್ಚಿಕೊಳ್ಳುತ್ತಿದ್ದರೆ ಚರ್ಮಕ್ಕೆ ಕಾಂತಿ ಬರುತ್ತದೆ. ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದುಕೊಳ್ಳಬೇಕು. ಇದಕ್ಕೆ ಸ್ವಲ್ಪ ಲೋಳೆಸರದ ರಸವನ್ನು ಬೇರಿಸಿ ಮಿಶ್ರ ಮಾಡಿ ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಂಡು ನಲವತ್ತು ನಿಮಿಷ ಒಣಗಲು ಬಿಡಬೇಕು. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು.

·  ಆಲೂಗಡ್ಡೆಯನ್ನು ಮಿಕ್ಸಿಗೆ ಹಾಕಿ ರಸ ತೆಗೆಯಬೇಕು. ಈ ರಸವನ್ನು ಫ್ರಿಡ್ಜ್ನಲ್ಲಿಟ್ಟು ಬಿಸಿಲಿನಿಂದ ಚರ್ಮ ಟ್ಯಾನ್‌ ಆದಾಗ ಈ ರಸವನ್ನು ಚರ್ಮದ ಮೇಲೆ ಹಚ್ಚಿಕೊಂಡು ನಯವಾಗಿ ಮಸಾಜ್‌ ಮಾಡಬೇಕು. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next