Advertisement

ಕೋವಿಡ್ ಕಾರಣದಿಂದ ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಮುಂದೂಡಿಕೆ

03:54 PM Apr 18, 2021 | Team Udayavani |

ಬೆಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಜಾನಪದ ಕಲಾವಿದರ ಮಾಸಾಶನ ಸಂದರ್ಶನವನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

Advertisement

ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಏ. 19 ಮತ್ತು 20 ರಂದು ಬಾಗಲಕೋಟೆ ಹಾಗೂ 21 ರಂದು ವಿಜಯಪುರ ಜಿಲ್ಲೆಯ ಜನಪದ ಕಲಾವಿದರಿಗೆ ಮಾಸಾಶನ ನೀಡುವ ಸಂದರ್ಶನ ಏರ್ಪಡಿಸಲಾಗಿತ್ತು.

ಕೋವಿಡ್-19 ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಸಂದರ್ಶನವನ್ನು ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next