Advertisement

“ಗೃಹ ಲಕ್ಷ್ಮೀ” ಅರ್ಜಿ ಸಲ್ಲಿಕೆ ಮುಂದೂಡಿಕೆ

11:49 PM Jun 15, 2023 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ “ಗೃಹಲಕ್ಷ್ಮೀ” ಯೋಜನೆಗೆ ಅರ್ಜಿ ಸಲ್ಲಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಮತ್ತೆ ಮುಂದೂಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರ್ಜಿ ಸಲ್ಲಿಕೆ ಇನ್ನೂ ನಾಲ್ಕೈದು ದಿನಗಳ ಕಾಲವಿಳಂಬವಾಗಲಿದೆ.

Advertisement

ಸಚಿವ ಸಂಪುಟ ಸಭೆಯ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದ್ದು, ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಆ್ಯಪ್‌ ರಚಿಸಲು ಇ-ಆಡಳಿತ ವಿಭಾ ಗಕ್ಕೆ ಸೂಚಿಸಲಾಗಿದೆ ಎಂದರು.

ಗೃಹಲಕ್ಷ್ಮೀ ಅರ್ಜಿ ಬಿಡುಗಡೆ ಕಾರ್ಯಕ್ರಮ ನಾಲ್ಕೈದು ದಿನ ಮುಂದೂಡಲಾಗಿದೆ. ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಸೂಚನೆ ನೀಡಿದರೆ ಬಹಳ ಒತ್ತಡ ಬೀಳಬಹುದು ಎಂದು ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ಅರ್ಜಿ ಸಲ್ಲಿಕೆಗೆ ಸರಾಸರಿ ಏಳು ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಬಾಪೂಜಿ ಕೇಂದ್ರ, ನಾಡ ಕಚೇರಿಯಲ್ಲೂ ಅರ್ಜಿ ಸ್ವೀಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಮಹಿಳೆಯರಿಗೆ ತೊಂದರೆಯಾಗ ಬಾರದು ಎಂಬ ಕಾರಣಕ್ಕೆ ತಯಾರಿ ಗಾಗಿ ಮುಂದಕ್ಕೆ ಹಾಕಲಾಗಿದೆ. ಇ- ಆಡಳಿತ ವಿಭಾಗದವರು ಮೊಬೈಲ್‌ ಅಪ್ಲಿಕೇಶನ್‌ ಆರಂಭಿಸುವುದಕ್ಕೆ 2 ದಿನ ಕಾಲಾವಕಾಶ ಕೇಳಿದ್ದರು. ಈಗ ಮತ್ತೆ ನಾಲ್ಕು ದಿನ ಬೇಕೆಂದು ಕೇಳಿ ದ್ದಾರೆ. ಇದರ ಜತೆಗೆ ಬಾಪೂಜಿ ಕೇಂದ್ರ, ನಾಡ ಕಚೇರಿ ಸಿಬಂದಿಗೆ ಅರ್ಜಿ ತುಂಬಿಸಿಕೊಳ್ಳುವುದಕ್ಕೆ ತರ ಬೇತಿ ಕೊಡಬೇಕಾಗುತ್ತದೆ. ಸಿಎಂ ಸಿದ್ದರಾ ಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಭೆ ನಡೆಸಿ ದಿನಾಂಕ ಪ್ರಕಟಿಸುತ್ತಾರೆ ಎಂದರು.

ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಹೆಬ್ಟಾಳ್ಕರ್‌, ಅರ್ಜಿ ಸಲ್ಲಿಕೆ ಜೂನ್‌ 16ರಿಂದ ಆರಂಭಗೊಳ್ಳಲಿದೆ. ಮೊದಲು ಜೂ. 15ರಂದು ನಿಗದಿಯಾಗಿತ್ತು ಎಂದು ಹೇಳಿದ್ದರು.

Advertisement

ಪ್ರಮುಖ ಅಂಶಗಳು
ಅರ್ಜಿಯನ್ನು ಆನ್‌ಲೈನ್‌ ಮೂಲಕ ಅಥವಾ ಭೌತಿಕವಾಗಿ ಗ್ರಾಮ ಒನ್‌/ ಬೆಂಗಳೂರು ಒನ್‌/ ಕರ್ನಾಟಕ ಒನ್‌ ಕೇಂದ್ರ ಗಳಲ್ಲಿ ಸೇವಾ ಸಿಂಧು ಪೋರ್ಟಲ್‌ ಮೂಲಕ ಸಲ್ಲಿಕೆ ಮಾಡಬಹುದು.
 ಅರ್ಜಿ ಸಲ್ಲಿಕೆಗೆ ಎಸ್‌ಎಂಎಸ್‌ ಮೂಲಕ ಹಾಗೂ ಸೇವಾಸಿಂಧು ಪೋರ್ಟಲ್‌ ಮೂಲಕ ಅಟೋ ಜನರೇಟೆಡ್‌ ಸ್ವೀಕೃತಿಗಳನ್ನು ಪಡೆಯಬಹುದು.
 ಅರ್ಜಿ ಸಲ್ಲಿಸಲು ಅರ್ಜಿದಾರರ ಹಾಗೂ ಪತಿಯ ಆಧಾರ್‌ ಕಾರ್ಡ್‌ ಸಂಖ್ಯೆ ಮೊಬೈಲ್‌ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ್‌ ಖಾತೆ ವಿವರಗಳು ಅಗತ್ಯ.
ಮಂಜೂರಾತಿ ಬಳಿಕ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ
 ಅರ್ಜಿ ಸಲ್ಲಿಕೆಗೆ ಶುಲ್ಕ ಇಲ್ಲ.
ಕೊನೆಯ ದಿನಾಂಕ ನಿಗದಿ ಇಲ್ಲ.
ಗೊಂದಲ ಇದ್ದರೆ 1902 ಕರೆ ಮಾಡಿ ಮಾಹಿತಿ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next