Advertisement
ಕೋಚ್ ಆಯ್ಕೆಯನ್ನು ಬಿಸಿಸಿಐ ಗಂಭೀರ ವಾಗಿ ಪರಿಗಣಿಸಿದೆ. ಕೋಚ್ ಹೇಗೆ ಕೆಲಸ ಮಾಡುತ್ತಾ ರೆನ್ನುವುದನ್ನು ಕೊಹ್ಲಿ ಅರ್ಥ ಮಾಡಿಕೊಳ್ಳಬೇಕು, ಈ ಬಗ್ಗೆ ಅವರಿಗೆ ಮನದಟ್ಟು ಮಾಡಿಸುವುದಾಗಿ ಗಂಗೂಲಿ ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಿನ್ನಾಭಿಪ್ರಾಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಕೊಹ್ಲಿಗೆ ನೀಡಿದ್ದಾರೆ. ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಕೋಚ್ ಆಕಾಂಕ್ಷಿಗಳ ಸಂದರ್ಶನ ನಡೆಸಿದರು. ಸಚಿನ್ ತೆಂಡುಲ್ಕರ್ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಬಿಸಿಸಿಐ ಸಲಹಾ ಸಮಿತಿ ಸಂದರ್ಶನ ಪ್ರಕ್ರಿಯೆಯನ್ನು ಮುಗಿಸಿದರೂ ತೀರ್ಮಾನಕ್ಕೆ ಬರಲು ಇನ್ನಷ್ಟು ಸಮಯ ಬೇಕೆಂಬ ಅಭಿಪ್ರಾಯಕ್ಕೆ ಬಂದಿದೆ.
2019ರವರೆಗೆ ಕೋಚ್ ಅವಧಿ: ಸದ್ಯ ಆಯ್ಕೆಯಾಗುವ ಕೋಚನ್ನು ದೀರ್ಘ ಕಾಲದವರೆಗೆ ಮುಂದುವರಿಸಲು ಬಿಸಿಸಿಐ ಬಯಸಿದೆ. 2019ರವರೆಗೆ ಅವರನ್ನು ಮುಂದುವರಿಸಲು ಬಯಸಿದೆ. ಈ ಮತ್ತೆ ಮತ್ತೂಂದು ಭಿನ್ನಾಭಿ ಪ್ರಾಯಕ್ಕೆ ಅದು ಸಿದ್ಧವಾಗಿಲ್ಲ. ಕೇವಲ ಆರೇ ತಿಂಗಳಲ್ಲಿ ಸಂಬಂಧ ಮುರಿದು ಬೀಳುವುದು ನಮಗೆ ಇಷ್ಟವಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.
ಸಂದರ್ಶನದಲ್ಲಿ ಕೊಹ್ಲಿ ಮೂಗು ತೂರಿಸಿಲ್ಲ: ಹಲವು ಆಕಾಂಕ್ಷಿಗಳ ಸಂದರ್ಶನ ನಡೆದರೂ ನಾಯಕ ವಿರಾಟ್ ಕೊಹ್ಲಿ ಈ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದರು. ಈ ಸಂಬಂಧ ಅವರಿಗೆ ಮೆಚ್ಚುಗೆ ಸೂಚಿಸಬೇಕು ಸೌರವ್ ಗಂಗೂಲಿ ಹೇಳಿದ್ದಾರೆ. ಈ ಹಿಂದೆ ಕೊಹ್ಲಿ ತರಬೇತಿ ಪ್ರಕ್ರಿಯೆಯಲ್ಲಿ ಕೈಯಾಡಿಸಿದ್ದಾರೆ, ರವಿಶಾಸಿŒ ಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿತ್ತು.
ಭಿನ್ನಮತವೇ ಮುಂದೂಡಿಕೆಗೆ ಕಾರಣ?
ಕೋಚ್ ಆಯ್ಕೆ ಮುಂದೂಡಲು ಕಾರಣವೇ ನೆಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದರೆ ಸಚಿನ್, ಸೌರವ್, ಲಕ್ಷ್ಮಣ್ ನೇತೃತ್ವದ ಆಯ್ಕೆ ಸಮಿತಿಗೆ ಈ ಬಗ್ಗೆ ಕೆಲವು ಗೊಂದಲಗಳಿವೆ. ಆದ್ದರಿಂದ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಊಹಿಸಲಾಗಿಲ್ಲ. ಎಂದಿನಂತೆ ರವಿಶಾಸಿŒ ಆಯ್ಕೆಗೆ ಸಚಿನ್ ತೆಂಡುಲ್ಕರ್ ಬೆಂಬಲ ನೀಡಿದ್ದರೆ, ಈ ವಿಚಾರದಲ್ಲಿ ಗಂಗೂಲಿ ತುಸು ಅಸಮ್ಮತಿ ಹೊಂದಿದ್ದಾರೆ. ಆದರೆ ರವಿಶಾಸಿŒ ಬದಲು ಯಾರನ್ನು ಆಯ್ಕೆ ಮಾಡಬೇಕೆಂಬ ಇನ್ನೂ ಗೊಂದಲವುಳಿದಿದೆ.