Advertisement
ಪಿಎಂಡಿಡಿ ಇದ್ದಾಗ ಮಹಿಳೆಯರಿಗೆ ಪಿಎಂಎಸ್‌ನ ಲಕ್ಷಣಗಳ ಜತೆಗೆ ತೀವ್ರತರಹದ ಕಿರಿಕಿರಿ, ಸಿಟ್ಟಾಗುವಿಕೆ, ಉದ್ವಿಗ್ನತೆ ಅಥವಾ ಖನ್ನತೆ ಕಾಣಿಸಿಕೊಳ್ಳಬಹುದು ಮತ್ತು ಈ ಲಕ್ಷಣಗಳು ಅವರ ದೈನಿಕ ಚಟುವಟಿಕೆಗಳನ್ನು ಬಾಧಿಸಬಲ್ಲಷ್ಟು ತೀವ್ರತರಹದ್ದಾಗಿರಬಹುದು. ಋತುಚಕ್ರ ಆರಂಭವಾದ ಕೆಲವು ದಿನಗಳಲ್ಲಿ ಈ ಲಕ್ಷಣಗಳು ಕಡಿಮೆಯಾಗಿ ನಿಂತು ಹೋಗುತ್ತವೆ.
Related Articles
Advertisement
ಪಿಎಂಡಿಡಿಗೆ ಅಪಾಯಾಂಶಗಳು
ಖನ್ನತೆ ಅಥವಾ ಉದ್ವಿಗ್ನತೆಯ ಚರಿತ್ರೆ
ಪಿಎಂಎಸ್
ಪಿಎಂಎಸ್, ಪಿಎಂಡಿಡಿ ಅಥವಾ ಭಾವನಾತ್ಮಕ ಏರಿಳಿತಗಳ ಕುಟುಂಬ ಚರಿತ್ರೆ
ಪಿಎಂಡಿಡಿಯ ಲಕ್ಷಣಗಳು
ನಿಯಂತ್ರಣ ತಪ್ಪಿದಂತಹ ಭಾವನೆಗಳು
ನಿದ್ದೆ ಹೋಗುವಲ್ಲಿ ತೊಂದರೆ
ಚಿಂತೆ ಅಥವಾ ಉದ್ವಿಗ್ನತೆಯ ಭಾವನೆಗಳು
ಉದ್ವೇಗಗೊಳ್ಳುವಿಕೆ
ದಣಿವು ಅಥವಾ ಚೈತನ್ಯದ ಕೊರತೆ
ಕಿರಿಕಿರಿಗೊಳ್ಳುವುದು, ಸಿಟ್ಟಾಗುವುದು- ಇದರಿಂದ ಇತರರ ಮೇಲೂ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು
ದುಃಖ ಅಥವಾ ಹತಾಶೆಯ ಭಾವನೆ, ಇದು ಆತ್ಮಹತ್ಯೆಯ ಆಲೋಚನೆಯವರೆಗೂ ಮುಂದುವರಿಯಬಹುದು
ಭಾವನೆಗಳಲ್ಲಿ ಏರಿಳಿತ ಅಥವಾ ಆಗಾಗ ಅಳುವುದು
ದೈನಿಕ ಚಟುವಟಿಕೆಗಳು ಮತ್ತು ಸಂಬಂಧಗಳಲ್ಲಿ ಆಸಕ್ತಿಯ ಕೊರತೆ
ಆಲೋಚನೆ ಅಥವಾ ಏಕಾಗ್ರತೆಯಲ್ಲಿ ತೊಂದರೆ
ಆಹಾರಕ್ಕಾಗಿ ಅತಿಯಾಸೆ, ಹಪಾಹಪಿ, ಹೊಟ್ಟೆಬಾಕತನ
ಸ್ನಾಯು ಸೆಳೆತ, ಸೆಡವು, ಹೊಟ್ಟೆಯುಬ್ಬರ, ಸ್ತನಗಳು ಮೃದುವಾಗುವುದು, ತಲೆನೋವು ಮತ್ತು ಸಂಧಿಗಳು ಅಥವಾ ಸ್ನಾಯುಗಳಲ್ಲಿ ನೋವಿನಂತಹ ದೈಹಿಕ ಲಕ್ಷಣಗಳು.
ಸಾಮಾನ್ಯವಾಗಿ ಈ ಲಕ್ಷಣಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಋತುಚಕ್ರಗಳಲ್ಲಿ ಕಂಡುಬರುತ್ತವೆ. ನಿಖರವಾದ ರೋಗ ಪತ್ತೆಗಾಗಿ ವೈದ್ಯರು ರೋಗಲಕ್ಷಣಗಳ ವೇಳಾಪಟ್ಟಿ ಅಥವಾ ಡೈರಿ ದಾಖಲಿಸಿಕೊಳ್ಳಲು ಸೂಚಿಸುತ್ತಾರೆ. ಭಾವನೆಗಳಿಗೆ ಸಂಬಂಧಿಸಿದ ಒಂದು ಲಕ್ಷಣದ ಸಹಿತ ಐದು ಅಥವಾ ಹೆಚ್ಚು ರೋಗ ಲಕ್ಷಣಗಳು ರೋಗನಿರ್ಣಯಕ್ಕೆ ಅಗತ್ಯವಾಗಿರುತ್ತವೆ.
ಚಿಕಿತ್ಸೆ
ಮಿದುಳಿನ ಸಿರೆಟೋನಿನ್ ಮಟ್ಟವನ್ನು ನಿಭಾಯಿಸಲು ಸಹಾಯ ಮಾಡುವುದಕ್ಕಾಗಿ ಆ್ಯಂಟಿಡಿಪ್ರಸೆಂಟ್ ಗಳು (ಋತುಚಕ್ರಕ್ಕೆ ಮುಂಚಿತವಾಗಿ ಅಥವಾ ತಿಂಗಳುಪೂರ್ತಿ ಸತತವಾಗಿ)
ಉಪ್ಪು, ಕೊಬ್ಬು ಅಥವಾ ಸಕ್ಕರೆಭರಿತ ಆಹಾರಗಳು ಮತ್ತು ಕೆಫಿನ್‌ಯುಕ್ತ ಆಹಾರಗಳನ್ನು ಕಡಿಮೆ ಮಾಡುವಂತಹ ಆಹಾರ ಶೈಲಿಗೆ ಸಂಬಂಧಿಸಿದ ಬದಲಾವಣೆಗಳು.
ಡ್ರೊಸ್ಪಿರೆನೋನ್ ಮತ್ತು ಇಥಿನೈಲ್ ಎಸ್ಟ್ರಾಡಿಯೋಲ್ ಹೊಂದಿರುವ ಹಾರ್ಮೋನಲ್ ಸಂತಾನ ನಿಯಂತ್ರಣ ಗುಳಿಗೆಗಳು.
ಋತುಚಕ್ರ ಸಂಬಂಧಿ ಸೆಳವು, ಸ್ನಾಯುಸೆಳೆತ, ನೋವು, ತಲೆನೋವು, ಸ್ತನಗಳ ಮೃದುತ್ವ ಮತ್ತು ಇತರ ದೈಹಿಕ ಲಕ್ಷಣಗಳನ್ನು ಕಡಿಮೆ ಮಾಡಲು ನೋವು ನಿವಾರಕ ಔಷಧಗಳು.
ಭಾವನೆಗಳನ್ನು ಉತ್ತಮಪಡಿಸುವುದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು.
ಆಳವಾದ ಉಸಿರಾಟ ಅಭ್ಯಾಸ ಮತ್ತು ಧ್ಯಾನದಂತಹ ಒತ್ತಡ ನಿಭಾವಣೆ ತಂತ್ರಗಳು.
-ಡಾ| ಸೋನಿಯಾ ಶೆಣೈಅಸೋಸಿಯೇಟ್ ಪ್ರೊಫೆಸರ್,
ಸೈಕಿಯಾಟ್ರಿ ವಿಭಾಗ, ಕೆಎಂಸಿ,
ಮಣಿಪಾಲ