Advertisement
ಏನಿದು ಪೋಸ್ಟರ್ ವಿನ್ಯಾಸ?ಯಾವುದೇ ಒಂದು ಉತ್ಪನ್ನ, ವಿಚಾರ ಅಥವಾ ಕಾರ್ಯಕ್ರಮದ ಬಗ್ಗೆ ಪಠ್ಯ ಅಥವಾ ಚಿತ್ರದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ತಾತ್ಕಾಲಿಕ ಪ್ರಚಾರ ಒದಗಿಸುವುದೇ ಪೋಸ್ಟರ್ ವಿನ್ಯಾಸವಾಗಿದೆ. ಪೋಸ್ಟರ್ ವಿನ್ಯಾಸಕ್ಕೆ ಇಂದು ಹೆಚ್ಚಿನ ಬೇಡಿಕೆ ಇದ್ದು, ಹಲವಾರು ತಾತ್ಕಾಲಿಕ ಮತ್ತು ಪೂರ್ಣಕಾಲಿಕ ಕೋರ್ಸ್‌ಗಳು ಕೂಡ ಇವೆ. ಇದು 18ನೆಯ ಶತಮಾನದ ಆರಂಭದಲ್ಲಿ ಚಾಲ್ತಿಗೆ ಬಂದ್ದಿದ್ದರೂ, ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಮಾತ್ರ 20ನೇ ಶತಮಾನದ ಮಧ್ಯ ಕಾಲದಲ್ಲಿ.
ವಿವಿಧ ಪೋಸ್ಟರ್ ವಿನ್ಯಾಸದ ಕಂಪೆನಿಗಳಲ್ಲಿ ಹವ್ಯಾಸಿ ವಿನ್ಯಾಸಕಾರರಾಗಿ ಕೆಲಸ ಮಾಡಬಹುದು ಮತ್ತು ನೀವೇ ಸ್ವಂತವಾಗಿ ಪೋಸ್ಟರ್ ವಿನ್ಯಾಸ ಕೆಲಸವನ್ನೂ ಮಾಡಬಹುದು. ಕಂಪೆನಿಗಳಲ್ಲಿ ಕೆಲಸ ಮಾಡುವುದಾದರೆ 30ರಿಂದ 40 ಸಾವಿರ ರೂ. ಅಥವಾ ಅದಕ್ಕೂ ಹೆಚ್ಚಿನ ಸಂಬಳ ಪಡೆಯಬಹುದು. ನಿಮ್ಮದೇ ಸ್ವಂತ ಕೆಲಸವಾದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತಿಂಗಳಿಗೆ 50ರಿಂದ ಒಂದು ಲಕ್ಷ ರೂ.ಗಳವರೆಗೂ ಆದಾಯ ಗಳಿಸಬಹುದಾಗಿದೆ. ಬೇಕಾದ ಕೌಶಲಗಳು
ಪೋಸ್ಟರ್ ವಿನ್ಯಾಸ ಇಂದು ಎಷ್ಟು ಪ್ರಾಮುಖ್ಯ ಪಡೆದಿದೆಯೋ ಅಷ್ಟೇ ಸೃಜನಶೀಲತೆ ಬಯಸುವಂಥ ಕೆಲಸ. ಇಲ್ಲಿ ಕ್ರಿಯಾತ್ಮಕ ಯೋಚನೆಗಳಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ. ಹಾಗಾಗಿ ಈ ಕೆಲವು ಕೌಶಲಗಳು ನಿಮ್ಮಲ್ಲಿ ಇರಬೇಕಾಗುತ್ತದೆ.
Related Articles
Advertisement
ಜನರಿಗೇ ಉದ್ದದ ಸಾಲು ಬರೆಹಗಳನ್ನು ಒದಲು ಇಂದು ಸಮಯವಿಲ್ಲ. ಹಾಗಾಗಿ ಹೇಳಬೇಕಾದುದನ್ನು ನೇರವಾಗಿ ತಲುಪಿಸುವಂತಿರಲಿ.
ಆಕರ್ಷಕ ಮತ್ತು ಪೋಸ್ಟರ್ ಅನ್ನು ಅಂಟಿಸುವ ಜಾಗಕ್ಕೆ ಸೂಕ್ತವಾದ ಬಣ್ಣದಿಂದ ವಿನ್ಯಾಸಗೊಳಿಸಿ.
ವಿನ್ಯಾಸದಲ್ಲಿ ದೊಡ್ಡ ಚಿತ್ರಗಳಿಗೆ ಆದ್ಯತೆ ನೀಡಿ.
ಪೋಸ್ಟರ್‌ನಲ್ಲಿ ಬರೆಯುವ ಶಬ್ದಗಳು ಆಕರ್ಷಕವಾಗಿರಲಿ.
ಹೊಸ ಆಲೋಚನೆಗಳು ಇರಲಿ.
ವಿನ್ಯಾಸ ತಮಾಷೆಯಾಗಿದ್ದಷ್ಟು ಜನರನ್ನು ಬೇಗನೆ ತನ್ನತ್ತ ಸೆಳೆಯುತ್ತದೆ.
ಸದ್ಯದ ಟ್ರೆಂಡ್ ಹೇಗಿದೆ?ಪ್ರಸ್ತುತ ಪೋಸ್ಟರ್ ವಿನ್ಯಾಸ ಹೆಚ್ಚು ಟ್ರೆಂಡ್ ಸೃಷ್ಟಿಸಿರುವಂತ ಕಲೆಯಾಗಿದೆ. ಇಂದು ಸಿನೆಮಾ ಕ್ಷೇತ್ರದಲ್ಲಿ ಪೋಸ್ಟರ್ ವಿನ್ಯಾಸ ಹೆಚ್ಚು ಮಹತ್ವ ಪಡೆದುಕೊಂಡಿದೆ. ಒಂದು ಸಿನೆಮಾ ತನ್ನ ಪ್ರಚಾರಕ್ಕೆ ಮತ್ತು ಹೈಪ್ ಸೃಷ್ಟಿ ಮಾಡಲು ಬಳಸುವ ಮೊದಲ ಸಾಧನವೇ ಪೋಸ್ಟರ್. ಹಾಗಾಗಿ ಇಂದು ಸಿನೆಮಾ ಕ್ಷೇತ್ರದಲ್ಲಿ ಪೋಸ್ಟರ್ ವಿನ್ಯಾಸಗಾರನಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೇ ಸಂಗೀತ ಮೇಳಕ್ಕೆ, ಕಿರುಚಿತ್ರ, ವಾಣಿಜ್ಯ ಕಂಪೆನಿ, ಜಾಹೀರಾತು ಮತ್ತು ರಾಜಕೀಯ ಪಕ್ಷಗಳ ಪೋಸ್ಟರ್ ವಿನ್ಯಾಸಕ್ಕೆ ಇಂದು ಅತಿ ಹೆಚ್ಚು ಬೇಡಿಕೆ ಇದೆ. - ಶಿವಾನಂದ ಎಚ್.