Advertisement

Public Relations Campaign: ಬಂಟಕಲ್ಲು: ಅಂಚೆ ಜನಸಂಪರ್ಕ ಅಭಿಯಾನ

10:08 AM Dec 11, 2023 | Team Udayavani |

ಶಿರ್ವ: ಭಾರತೀಯ ಅಂಚೆ ಇಲಾಖೆ ಉಡುಪಿ ಮತ್ತು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಆಶ್ರಯದಲ್ಲಿ ರೋಟರಿ ಕ್ಲಬ್‌ ಶಿರ್ವ, ಬಂಟರ ಸಂಘ ಶಿರ್ವ ಮತ್ತು ಲಯನ್ಸ್‌ ಕ್ಲಬ್‌ ಬಂಟಕಲ್ಲು-ಜಾಸ್ಮಿನ್‌ನ ಸಹಯೋಗದೊಂದಿಗೆ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಡಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ, ಅಂಚೆ ಇಲಾಖೆಯ ಸಮೂಹ ಅಪಘಾತ ವಿಮೆ ನೋಂದಣಿ ಹಾಗೂ ಅಂಚೆ ಇಲಾಖೆಯ ಜನಸ್ನೇಹಿ ಸೇವೆಗಳ ಮಾಹಿತಿ ಕಾರ್ಯಕ್ರಮವು ಡಿ. 9 ರಂದು ಬಂಟಕಲ್ಲು ರೋಟರಿ ಭವನದಲ್ಲಿ ನಡೆಯಿತು.

Advertisement

ಉಡುಪಿ ಅಂಚೆ ಅಧೀಕ್ಷಕ ರಮೇಶ್‌ ಪ್ರಭು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅಂಚೆ ಇಲಾಖೆಯ ಜನಸ್ನೇಹಿ ಸೇವೆಗಳನ್ನು ಸಾರ್ವಜನಿಕರು ಪಡೆಯುವಂತೆ ತಿಳಿಸಿ, ಜನಸ್ನೇಹಿ ಕಾರ್ಯಕ್ರಮ ಆಯೋಜಿಸಿದ ಸಂಘ ಸಂಸ್ಥೆಗಳನ್ನು ಅಭಿನಂದಿಸಿದರು.

ಅಂಚೆ ಇಲಾಖೆಯ ಉಪ ಅಧೀಕ್ಷಕ ಕೃಷ್ಣರಾಜ್‌ ಭಟ್‌ ಇಲಾಖೆಯ ವಿವಿಧ ಜನಸ್ನೇಹಿ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮಕ್ಕೆ ಸಹಯೊಗ ನೀಡಿದ ಶಿರ್ವ ಬಂಟರ ಸಂಘದ ಅಧ್ಯಕ್ಷ ವೀರೇಂದ್ರ ಶೆಟ್ಟಿ,ಮಹಿಳಾ ವಿಭಾಗದ ಅಧ್ಯಕ್ಷೆ ಜಯಶ್ರೀ ಶೆಟ್ಟಿ ಮತ್ತು ಲಯನ್ಸ್‌ ಕ್ಲಬ್‌ ಬಂಟಕಲ್ಲು -ಜಾಸ್ಮಿನ್‌ನ ಅಧ್ಯಕ್ಷೆ ಪ್ರಮೀಳಾ ಲಸ್ರಾದೋ ಮಾತನಾಡಿದರು.

ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ,ಸದಸ್ಯರಾದ ಡೆನ್ನಿಸ್‌,ವೈಲೆಟ್‌ ಕ್ಯಾಸ್ತಲಿನೋ,ವಿನ್ಸೆಂಟ್‌ ಫಲ್ಕೆ,ವೀರೇಂದ್ರ ಪಾಟ್ಕರ್‌,ಬಂಟರ ಸಂಘದ ಕಾರ್ಯದರ್ಶಿ ರಾಜೇಶ್‌ ಶೆಟ್ಟಿ,ಲಯನ್ಸ್‌ ಕ್ಲಬ್‌ನ ಸದಸ್ಯರು,ಅಂಚೆ ಇಲಾಖೆಯ ಸಿಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೊಸ ಆಧಾರ್‌ ನೋಂದಣಿ,ಆಧಾರ್‌ ತಿದ್ದುಪಡಿ ಹಾಗೂ ಅಂಚೆ ಇಲಾಖೆಯ ಅಪಘಾತ ವಿಮೆಯ ನೋಂದಣಿ ನಡೆಯಿತು. ನೂರಕ್ಕೂ ಅಧಿಕ ನಾಗರಿಕರು ಪ್ರಯೋಜನ ಪಡೆದುಕೊಂಡರು.

ಅಧ್ಯಕ್ಷತೆ ವಹಿಸಿದ್ದ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಲಯನ್ಸ್‌ ಕ್ಲಬ್‌ನ ಅನಿತಾ ಮೆಂಡೋನ್ಸಾ ನಿರೂಪಿಸಿ, ಶಿರ್ವ ರೋಟರಿ ಕ್ಲಬ್‌ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next