Advertisement
ಏನಿದು ಸೌಕರ್ಯ?ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಹಾಗೂ ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಪ್ಪಂದದ ಪ್ರಕಾರ, ಆಧಾರ್‌ಕಾರ್ಡ್ ದಾರರ ಮೊಬೈಲ್ ಸಂಖ್ಯೆ ಅಪ್‌ಡೇಟ್‌ನ ಜವಾಬ್ದಾರಿ ಯನ್ನು ಅಂಚೆ ಯಣ್ಣನಿಗೆ ನೀಡಲಾಗಿದೆ. ಮನೆಮನೆಗೂ ಭೇಟಿ ಕೊಡುವ ಪೋಸ್ಟ್ ಮ್ಯಾನ್‌ಗಳು, ಈವರೆಗೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರದ ಮೊಬೈಲ್ ಸಂಖ್ಯೆಗಳ ಜೋಡಣೆಕಾರ್ಯ ನೆರವೇರಿಸಲಿದ್ದಾರೆ.
ಈಗ, ನಗರ ಪ್ರದೇಶಗಳಲ್ಲಿನ ಅಂಚೆಕಚೇರಿಗಳಲ್ಲಿ ಆಧಾರ್‌ಗೆ ಫೋನ್ ನಂಬರ್ ಲಿಂಕ್ ಮಾಡುವ ವ್ಯವಸ್ಥೆ ಈಗಾಗಲೇ ಶುರುವಾಗಿದೆ. ಇನ್ನು ಮುಂದೆ, ಆಧಾರ್ ಅರ್ಜಿಗಳನ್ನು ಅಲ್ಲಿಯೇ ಪಡೆಯುವ ವ್ಯವಸ್ಥೆಕೂಡ ಜಾರಿಗೊಳ್ಳಲಿದೆ. ಸದ್ಯದಲ್ಲಿಯೇ, ಮಕ್ಕಳ ಆಧಾರ್‌ಕಾರ್ಡ್ ಗಳಿಗೂ (ಬಾಲ ಆಧಾರ್) ಅರ್ಜಿಯನ್ನು ಸ್ವೀಕರಿಸುವ ಸೌಲಭ್ಯಕೂಡ ಆರಂಭವಾಗಲಿದೆ. 1.46 ಲಕ್ಷ ಸಿಬ್ಬಂದಿ
ದೇಶದ ಸುಮಾರು650 ಅಂಚೆಕಚೇರಿಗಳ ಸುಮಾರು ಪೋಸ್ಟ್ ಮ್ಯಾನ್‌ಗಳು, ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ಗ್ರಾಮೀಣ್ ಢಾಕ್ ಸೇವಕ್ (ಜಿಡಿಎಸ್) ಸೇರಿದಂತೆ ಸುಮಾರು1.46 ಲಕ್ಷ ಅಂಚೆ ಇಲಾಖೆ ಸಿಬ್ಬಂದಿಯ ಮೂಲಕ ಈ ಸೌಲಭ್ಯ ಜಾರಿಗೆ ಬರಲಿದೆ.