Advertisement

ಚುನಾವಣೋತ್ತರ ಹಿಂಸಾಚಾರ: ತನಿಖೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿದ ಕೇಂದ್ರದ ತಂಡ  

01:38 PM May 06, 2021 | Team Udayavani |

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ನಡೆದ ಹಿಂಸಾಚಾರದ ಅಧ್ಯಯನಕ್ಕೆ ಕೇಂದ್ರ ಗೃಹ ಸಚಿವಾಲಯವು ನಾಲ್ವರು ಸದಸ್ಯರ ತಂಡವನ್ನು ರಚಿಸಿದ್ದು, ವರದಿ ನೀಡಲು 48 ಗಂಟೆಗಳ ಗಡವು ನೀಡಿದೆ.

Advertisement

ಮೇ. 02 ರಂದು ಪಶ್ಚಿಮ ಬಂಗಾಳದ ವಿಧಾನ ಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಕೆಲವೊಂದು ಕಡೆ ಗಲಭೆ-ಹಿಂಸಾಚಾರಗಳು ನಡೆದಿವೆ. ಘಟನೆಯಲ್ಲಿ ಇದುವರೆಗೂ 14 ಜನರ ಪ್ರಾಣ ಹಾನಿಯಾಗಿದೆ. ಬುಧವಾರವಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಘಟನೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಹಿಂಸಾಚಾರದ ಸಮಗ್ರ ತನಿಖೆಗೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ತಂಡ ರಚಿಸಿದ್ದು, ಅದು ಇಂದು ಮುಂಜಾನೆ ಪಶ್ಚಿಮ ಬಂಗಾಳಕ್ಕೆ ತೆರಳಿದೆ. ಈ ತಂಡಕ್ಕೆ 24 ಗಂಟೆಗಳ ಕಾಲಾವಧಿ ನೀಡಲಾಗಿದ್ದು, ನಿಗಧಿಪಡಿಸಿದ ಸಮಯದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಇಂಥ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವಾಲಯ ಬುಧವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪತ್ರ ಬರೆದಿದ್ದು ಕ್ರಮ ಕೈಗೊಳ್ಳುವಲ್ಲಿ ರಾಜ್ಯವು ವಿಫಲವಾದರೆ ಈ ವಿಷಯವನ್ನು ‘ಗಂಭೀರವಾಗಿ‘ ಪರಿಗಣಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಪಶ್ಚಿಮ ಬಂಗಾಳದ ರಾಜ್ಯಪಾಲರ ಜೊತೆ ಹಿಂಸಾಚಾರದ ಕುರಿತು ಮಾತುಕತೆ ನಡೆಸಿದ್ದಾರೆ.

ಇನ್ನು ಬುಧವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಕೂಡಲೇ ಹಿಂಸಾಚಾರಕ್ಕೆ ಬ್ರೇಕ್ ಹಾಕುವಂತೆ ತಾಕೀತು ಮಾಡಿದ್ದಾರೆ. ಇದೇ ವೇಳೆ ಈ ಎಲ್ಲ ಹಿಂಸಾಚಾರ ಮತ್ತು ಸಂಘರ್ಷಗಳು ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲೇ ನಡೆದಿವೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next