Advertisement

ಮತದಾನೋತ್ತರ ಸಮೀಕ್ಷೆ: ಬಿ.ಎಲ್. ಸಂತೋಷ್ ಅಭಿಪ್ರಾಯ ಹೀಗಿದೆ

09:11 PM May 11, 2023 | Team Udayavani |

ಬೆಂಗಳೂರು: ಮತದಾನೋತ್ತರ ಸಮೀಕ್ಷೆಯಲ್ಲಿ ರಾಜ್ಯ ವಿಧಾನಸಭೆ ಅತಂತ್ರ ಸ್ಥಿತಿಯತ್ತ ಸಾಗುವ ಲಕ್ಷಣಗಳು ಕಂಡುಬರುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ‘ಸಂಖ್ಯೆಗಳು ನಿಮ್ಮ ಊಹೆ, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ” ಎಂದು ಟ್ವೀಟ್ ಮಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಟ್ವೀಟ್ ಮಾಡಿರುವ ಸಂತೋಷ್ ಅವರು ”ಎಲ್ಲಾ ಸೆಲೆಬ್ರಿಟಿ ಪೋಲ್‌ಸ್ಟರ್‌ಗಳಿಗೆ ಸಮಾನವಾದ ಗೌರವಗಳೊಂದಿಗೆ ಬಿಜೆಪಿಯು 2014 ರಲ್ಲಿ 282, 2019 ರಲ್ಲಿ 303, 2022 ರಲ್ಲಿ ಗುಜರಾತ್ ನಲ್ಲಿ 156 ಸ್ಥಾನ ಅಥವಾ 2018 ರಲ್ಲಿ ಕರ್ನಾಟಕದಲ್ಲಿ 104 ಸ್ಥಾನ ಗೆಲ್ಲುತ್ತೇವೆ ಎಂದು ಯಾವ ಸಮೀಕ್ಷೆಗಳೂ ಭವಿಷ್ಯ ನುಡಿದಿರಲಿಲ್ಲ. 2018 ರಲ್ಲಿ ಬಿಜೆಪಿ 14 ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನೆಡೆಯೊಂದಿಗೆ 24,000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಈ ಬಾರಿ 31,000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ನೀವು ನೀಡಿರುವ ಸಂಖ್ಯೆಗಳು ಕೇವಲ ನಿಮ್ಮ ಊಹೆ” ಎಂದು ಟ್ವೀಟ್ ಮಾಡಿದ್ದಾರೆ.

ವಿವಿಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಟ್ಟು 12 ಸಮೀಕ್ಷೆಗಳ ಪೈಕಿ 9 ಸಮೀಕ್ಷೆಗಳು ಕಾಂಗ್ರೆಸ್‌ ಅತ್ಯಧಿಕ ಸ್ಥಾನಗಳಿಸಲಿದೆ ಎಂದು ಹೇಳಿದ್ದರೆ ಮೂರು ಮಾತ್ರ ಬಿಜೆಪಿಗೆ ಅತ್ಯಧಿಕ ಸ್ಥಾನ ನೀಡಿವೆ. ಮೂರು ಸಮೀಕ್ಷೆಗಳು ಮಾತ್ರ ಪೂರ್ಣ ಬಹುಮತದ ಭವಿಷ್ಯ ನುಡಿದಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next