Advertisement

ಅಂಚೆ ಕಚೇರಿ ಸ್ಥಳಾಂತರ: ಪಾಳುಬಿದ್ದ ಸ್ವಂತ ಕಟ್ಟಡ

01:53 PM Nov 13, 2021 | Team Udayavani |

ಅರಸೀಕೆರೆ: ನಗರದ ರೈಲ್ವೆ ನಿಲ್ದಾಣದಲ್ಲಿದ್ದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಆರ್‌.ಎಂ.ಎಸ್‌ ಅಂಚೆ ಕಚೇರಿಯನ್ನು ಇಲಾಖೆಯ ಅಧಿಕಾರಿಗಳು ಕಟ್ಟಡವನ್ನು ಪಾಳು ಬಿಟ್ಟು ಬೀರೂರಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ಅರಸೀಕೆರೆ ಪ್ರಮುಖ ರೈಲ್ವೆ ಜಂಕ್ಷನ್‌ ಕೇಂದ್ರವಾಗಿದ್ದು, ಅನೇಕ ರೈಲುಗಳು ಪ್ರತಿನಿತ್ಯ ಸಂಚರಿಸುತ್ತವೆ.

Advertisement

ಅಂಚೆ ಸಾಗಾಣಿಕೆಗೆ ಮೈಸೂರು, ಹಾಸನ ಶಿವಮೊಗ್ಗ, ಬೆಂಗಳೂರುಗಳತ್ತ ರವಾನಿಸುವ ಅಂಚೆ ಬ್ಯಾಗ್‌ಗಳನ್ನು ಸಕಾಲದಲ್ಲಿ ಕಳಿಸಲು ಅರಸೀಕೆರೆ ಸೂಕ್ತ ಸ್ಥಳವಾಗಿದ್ದ ಕಾರಣ ಹಲವು ದಶಕಗಳಿಂದ ಇಲ್ಲಿಯೇ ಆರ್‌ಎಂಎಸ್‌ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಾ ಉತ್ತಮ ಸೇವೆ ನೀಡುವ ಮೂಲಕ ಜನರ ಮೆಚ್ಚಿಗೆಗೂ ಪಾತ್ರವಾಗಿತ್ತು.

ಇದನ್ನೂ ಓದಿ:- ತ್ರಿಪುರಾ ಘಟನೆ ಖಂಡಿಸಿ ಪ್ರತಿಭಟನೆ

ಆದರೆ ಇತ್ತೀಚೆಗೆ ಬೀರೂರಿಗೆ ಸ್ಥಳಾಂತರಗೊಂಡಿರುವುದು ಯಾವ ಕಾರಣ ಎಂಬುದು ಸಾರ್ವ ಜನಿಕರಿಗೆ ಅರ್ಥವಾಗದ ಯಕ್ಷ ಪ್ರಶ್ನೆಯಾಗಿದೆ. ಬೀರೂರಿನಿಂದ ಮೈಸೂರು, ಬೆಂಗಳೂರು, ಹಾಸನ ಮಾರ್ಗ ರವಾನಿಸುವ ಬ್ಯಾಗ್‌ಗಳು ಅರ ಸೀಕೆರೆ ಮಾರ್ಗವಾಗಿಯೇ ಬರಬೇಕು.

ಅರಸೀಕೆರೆಯಲ್ಲಿದ್ದ ಅಂಚೆ ಇಲಾಖೆ ಉಗ್ರಾಣ ಕೇಂದ್ರವನ್ನು ಹುಬ್ಬಳ್ಳಿಗೆ ಸ್ಥಳಾಂ ತರ ಗೊಂಡಿರುವುದರಿಂದ ಕೋಟ್ಯಂತರ ಬೆಲೆ ಕಟ್ಟಡಗಳು ಪಾಳು ಬಿದ್ದಂತಾಗುತ್ತದೆ. ಆದ್ದರಿಂದ ಅರಸೀಕೆರೆ ಪಿಎಸ್‌ಡಿ ಕಟ್ಟಡಕ್ಕೆ ಬೀರೂರಿನಲ್ಲಿರುವ ಆರ್‌ಎಂಎಸ್‌ ಕಚೇರಿ ಯನ್ನು ಸ್ಥಳಾಂತರಿಸಿದರೆ. ಅಲ್ಲಿ ಪ್ರತಿ ತಿಂಗಳು ನೀಡುತ್ತಿರುವ ಸುಮಾರು 75 ಸಾವಿರ ರೂ ಅಂಚೆ ಇಲಾಖೆಗೆ ಉಳಿತಾಯ ವಾಗುತ್ತದೆ ಮತ್ತು ಇಲಾಖೆಯ ಆಸ್ಥಿಯೂ ಸುಭದ್ರವಾಗಿರುತ್ತದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Advertisement

ಕಾರ್ಯನಿರ್ವಹಣೆ ಅಗತ್ಯ – ಅಂಚೆ ಇಲಾಖೆ ಜನಸಾಮಾನ್ಯರಿಗೆ ಸಣ್ಣ ಉಳಿತಾಯ ಯೋಜನೆಯನ್ನು ಪರಿಚಯಿಸಿ ಉಳಿತಾಯ ಜಾಗೃತಿ ಹಾಗೂ ಉತ್ತಮ ಸೇವೆ ಮಾಡುತ್ತಿದೆ, ಆದರೆ ತಾನೇ ತನ್ನ ಕಟ್ಟಡವನ್ನು ಖಾಲಿ ಬಿಟ್ಟು, ಬಾಡಿಗೆ ನೀಡುತ್ತಿರುವುದು ದುರಂತವೇ ಸರಿ. ಆರ್‌ಎಂಎಸ್‌ ಕಚೇರಿಯನ್ನು ಅರಸೀಕೆರೆಗೆ ಸ್ಥಳಾಂತರಸಿ ಕಾರ್ಯ ನಿರ್ವಹಿಸಲಿ, ಎಂಬುದು ಸಾರ್ವಜನಿಕರ ಆಶಯವಾಗಿದೆ, ಇಲಾಖೆಯ ಹಿರಿಯ ಅಧಿಕಾರಿಗಳು ಕಚೇರಿ ಕಾರ್ಯ ನಿರ್ವಹಣೆ ಇನ್ನೂ ಹೆಚ್ಚು ಸುಲಲಿತ ಮತ್ತು ಆರ್ಥಿಕ ಉಳಿತಾಯ ಅಂಶಗಳನ್ನು ಅವಲೋಕಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next