Advertisement

ಪೋಸ್ಟ್‌ ಇಂಡಿಯಾ ಧ್ವಜಕ್ಕೆ ಜಿಎಸ್ಟಿ, ವಿತರಣಾ ಶುಲ್ಕವಿಲ್ಲ

12:06 AM Aug 11, 2022 | Team Udayavani |

ಹೊಸದಿಲ್ಲಿ: ಭಾರತದ ಸ್ವಾತ್ರಂತ್ಯೋತ್ಸವದ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಹರ್‌ ಘರ್‌ ತಿರಂಗಾ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಪೋಸ್ಟ್‌ (ಭಾರತೀಯ ಅಂಚೆ ಇಲಾಖೆ) ಹೊಸ ಆಫ‌ರ್‌ ನೀಡಿದೆ.

Advertisement

ಇಂಡಿಯಾ ಪೋಸ್ಟ್‌ ಮೂಲಕ ತ್ರಿವರ್ಣ ಧ್ವಜವನ್ನು ಮಾರಾಟ ಮಾಡಲು ಇಲಾಖೆ ಮುಂದಾಗಿದೆ. ಜಿಎಸ್‌ಟಿ ಶುಲ್ಕವಿಲ್ಲದೆ ಈ ಧ್ವಜವನ್ನು ಖರೀದಿಸಬಹುದಾಗಿದೆ.

ಅಲ್ಲದೆ, ತಮ್ಮ ವೆಬ್‌ಸೈಟ್‌ನಲ್ಲಿ ಖರೀದಿಸಲಾಗುವ ಈ ಧ್ವಜವನ್ನು ಯಾವುದೇ ವಿತರಣಾ ಶುಲ್ಕ ಇಲ್ಲದೇ (ಡಿಲಿವರಿ ಚಾರ್ಜಸ್‌) ಗ್ರಾಹಕರ ವಿಳಾಸಕ್ಕೆ ತಲುಪಿಸಲಾಗುವುದು ಎಂದು ಇಲಾಖೆ ಹೇಳಿದೆ.

ಇದಲ್ಲದೆ, ಅಂಚೆ ಕಚೇರಿಗಳಲ್ಲಿ ರಾಷ್ಟ್ರೀಯ ರಜಾ ದಿನದಂದೂ ಧ್ವಜ ಮಾರಾಟ ಇರುತ್ತದೆ ಎಂದು ತನ್ನ ಟ್ವಿಟರ್‌ ಖಾತೆಯಲ್ಲಿ “ಇಂಡಿಯಾ ಪೋಸ್ಟ್‌’ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next